Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಡಿಶಾದ ಪಹಾಡ್‌ಪುರ ಗ್ರಾಮಕ್ಕೆ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಜನ್ಮದಿನದಂದು ಅವರೊಂದಿಗೆ ಭೇಟಿ ನೀಡಿದ ಪ್ರಧಾನಮಂತ್ರಿ

ಒಡಿಶಾದ ಪಹಾಡ್‌ಪುರ ಗ್ರಾಮಕ್ಕೆ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಜನ್ಮದಿನದಂದು ಅವರೊಂದಿಗೆ ಭೇಟಿ ನೀಡಿದ ಪ್ರಧಾನಮಂತ್ರಿ


ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಜನ್ಮದಿನದಂದು ಅವರೊಂದಿಗೆ ಒಡಿಶಾದ ಪಹಾಡ್‌ಪುರ ಗ್ರಾಮದಲ್ಲಿ ಇರುವುದು ತಮಗೆ ಸಿಕ್ಕ ಗೌರವ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.

ಪಹಾಡ್‌ಪುರವು ರಾಷ್ಟ್ರಪತಿಯವರ ಗ್ರಾಮವಾಗಿದ್ದು, ಅವರು ಮಾಡಿರುವ ಕೆಲಸಗಳು ನಿಜಕ್ಕೂ ಸ್ಪೂರ್ತಿದಾಯಕವಾಗಿವೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದ್ದಾರೆ.

ರಾಷ್ಟ್ರಪತಿಯವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಶ್ರೀ ಮೋದಿಯವರು ಪ್ರಾರ್ಥಿಸಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಬರೆದಿದ್ದಾರೆ;

“ರಾಷ್ಟ್ರಪತಿಯವರ ಜೊತೆಗೂಡಿ, ಅದೂ ಅವರ ಜನ್ಮದಿನದಂದೇ ಒಡಿಶಾದ ಪಹಾಡ್‌ಪುರ ಗ್ರಾಮದಲ್ಲಿ ಇರುವುದು ನನಗೆ ಸಿಕ್ಕ ಗೌರವವಾಗಿದೆ. ಇದು ಅವರ ಗ್ರಾಮವಾಗಿದ್ದು, ಅವರು ಇಲ್ಲಿ ಮಾಡಿರುವ ಕೆಲಸಗಳು ನಿಜಕ್ಕೂ ಸ್ಪೂರ್ತಿದಾಯಕವಾಗಿವೆ.

ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

@rashtrapatibhvn”

 

*****