ಪಿಎಂಇಂಡಿಯಾ
ಎಲ್ಲಕ್ಕಿಂತ ಮೊದಲಿಗೆ ನಾನು ಆ ಸಪ್ತರ್ಷಿಗಳಿಗೆ ನಮನಗಳನ್ನರ್ಪಿಸುತ್ತೇನೆ. ಶಿಕ್ಷಕರಾದರೋ ಬಹಳ ಜನರಿದ್ದಾರೆ. ಒಳ್ಳೆಯ ಶಿಕ್ಷಕರಿದ್ದಾರೆ, ಉತ್ತಮ ಶಿಕ್ಷಕರಿದ್ದಾರೆ, ಸಮರ್ಪಣಾ ಮನೋಭಾವದ ಶಿಕ್ಷಕರಿದ್ದಾರೆ, ಆದರೆ ಬಹುಶಃ ಶಿಕ್ಷಣೇತಿಹಾಸದಲ್ಲಿ ಇವತ್ತು ಅಮರ ಶಿಕ್ಷಕ ಎಂಬ ಪದದ ಪ್ರಯೋಗ ಮಾಡಬೇಕಿದೆ. ಮತ್ತು ಅದನ್ನು ಈ ಸಪ್ತರ್ಷಿಗಳಗೆ ಅನ್ವಯಿಸ ಬೇಕಾಗುತ್ತದೆ. ಅಂತಹ ಶಿಕ್ಷಕರು ನೂರು ವರ್ಷಗಳ ಇತಿಹಾಸದ ನಂತರವೂ ಇಂದಿಗೂ ಕೂಡ ಈ ತಲೆಮಾರಿಗೆ ಕಲಿಸುತ್ತಿದ್ದಾರೆ, ಶಿಕ್ಷಿತರನ್ನಾಗಿ ಮಾಡುತ್ತಿದ್ದಾರೆ. ಈ ಕೆ ಎಲ್ ಇ ಸೊಸೈಟಿಯ ಮೂಲಕ ಏನು ಸಾಧನೆ ಆಗಿದೆಯೋ ಅಂತಹ ಘಟನೆ ಬೇರೆ ಎಲ್ಲಿಂದಲೂ ಕೇಳಸಿಗುವುದು ಇತಿಹಾಸದಲ್ಲಿ ದುರ್ಲಭವೇ ಸರಿ.
ನನ್ನ ಮುಂದೆ ಲಕ್ಷಗಟ್ಟಲೆ ನವತರುಣರು ಕುಳಿತಿರುವುದನ್ನು ನೋಡುತ್ತಿದ್ದೇನೆ. ಇವರೆಲ್ಲರೂ ಆ ಸಪ್ತರ್ಷಿಗಳ ತಪಸ್ಸಿನ ಪರಿಣಾಮದ ಫಲಸ್ವರೂಪರು. ಲೋಕಮಾನ್ಯ ತಿಲಕರಿಂದ ಪ್ರೇರಣೆ ಪಡೆದರು; ಸಂತ ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಕಹಳೆ ಊದಿದ್ದರು; ಆ ಸಾಮಾಜಿ ಕ್ರಾಂತಿಯನ್ನು ಶಿಕ್ಷಣವಾಹನದ ಮುಖಾಂತರ ಜನ-ಜನಕ್ಕೂ ತಲುಪಿಸುವುದು ಮಾತ್ರವಲ್ಲ, ತಲೆಮಾರಿನಿಂದ ತಲೆಮಾರಿಗೂ ಕೊಂಡೊಯ್ಯುವ ಈ ಭಗೀರಥ ಕಾರ್ಯ ನೂರು ವರ್ಷಗಳ ಮೊದಲೇ ಈ ನೆಲದಲ್ಲಿ ಆಯಿತು. ಇಡೀ ದೇಶಕ್ಕೆ, ಶಿಕ್ಷಣದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರಿಗೆ ಇದು ಹೆಮ್ಮೆಯ ವಿಷಯ. ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ, ಒಳಗಿನ ವಾತಾವರಣ ಹದಗೆಡಿಸಿಕೊಳ್ಳುತ್ತವೆ, ಅನಂತರ ಮುಚ್ಚಿ ಹೋಗುತ್ತವೆ. ಆದರೆ ಇಲ್ಲಿ ಆ ಸಪ್ತರ್ಷಿಗಳು ಎಂತಹ ಪ್ರಬಲ ಅಡಿಪಾಯವನ್ನು ಹಾಕಿರಬಹುದು ಕಲ್ಪಿಸಿಕೊಳ್ಳಿ, ನೂರು ವರ್ಷಗಳನಂತರವೂ ಇದು ಫಲ ಕೊಡುತ್ತಿದೆ, ಹೂ ಬಿಡುತ್ತಿದೆ ಮತ್ತು ಇಡೀ ದೇಶಕ್ಕೆ ಪ್ರೇರಣೆ ನೀಡುತ್ತಿದೆ.
ಇವತ್ತು ವಿಶ್ವದಲ್ಲಿ ಪ್ರತಿಯೊಂದು ಮೂಲೆಯಲ್ಲಿ ಒಬ್ಬರಲ್ಲ ಒಬ್ಬರು ನಾನು ಕೆ ಎಲ್ ಇಯಲ್ಲಿ ವಿದ್ಯಾರ್ಥಿಯಾಗಿದ್ದೆ ಎಂದು ಹೇಳುವವರು ಸಿಗಬಹುದು, ಮತ್ತೆ ವಿಶ್ವದಲ್ಲಿ ಕೆಲಸ ಕೊಡುವುದಕ್ಕಾಗಿ ಇಂಟರ್ವ್ಯೂ ಆಗುತ್ತಿರುವಾಗ, ಪ್ರಶ್ನೋತ್ತರಗಳು ನಡೆಯುತ್ತಿರುವಾಗ, ಆಗ ಸಂದರ್ಶನಕ್ಕೆ ಬಂದವನು [ತನ್ನ ಅರ್ಹತೆಗಳನ್ನು] ಹೇಳುತ್ತಿರಬಹುದು, ಅವನ ಎಲ್ಲ ಸರ್ಟಿಫಿಕೇಟುಗಳು ಹೇಳುತ್ತಿರಬಹುದು, ಅವನ ಮಾರ್ಕ್ಸ್-ಗಳು ಹೇಳುತ್ತಿರಬಹುದು ಆದರೆ ಅವನು ಹೇಳಬಹುದು ಸಾಹೇಬರೇ ನನಗೆ ಗುಣಗಳಿವೆ, ಸರ್ಟಿಫಿಕೇಟಿದೆ, ಮಾರ್ಕ್ಸ್ ಬಂದಿದೆ, ಒಳ್ಳೆಯ ಶ್ರೇಣಿ ಇದೆ ಇವೆಲ್ಲ ಇವೆ ಸರಿ, ಆದರೆ ಈ ಎಲ್ಲಕ್ಕಿಂತ ಹೆಚ್ಚಾಗಿ ನಾನು ಕೆ ಎಲ್ ಇ ವಿದ್ಯಾರ್ಥಿಯಾಗಿದ್ದೇನೆ. ಆಗ ಸಂದರ್ಶನ ತೆಗೆದು ಕೊಳ್ಳುತ್ತಿರುವವರೂ ಹೇಳಬಹುದು ಬಾರಯ್ಯಾ ಬಾ, [ನಮ್ಮ ಸಂಸ್ಥೆಗೆ ಬಾ]. ನೂರು ವರ್ಷ ಎಷ್ಟು ತಲೆಮಾರುಗಳು ತಪಸ್ಸನ್ನಾಚರಿಸಿರಬಹುದು, ಎಷ್ಟೊಂದು ಜನರು ಕೊಡುಗೆಗಳನ್ನು ನೀಡಿರಬಹುದು. ಹಾಗಾದಾಗ ಮಾತ್ರ ಇಂತಹ ಒಂದು ಚೈತನ್ಯ ತುಂಬಿದ ವ್ಯವಸ್ಥೆಯ ಜನನವಾಗುತ್ತದೆ ಮತ್ತು ನಡೆದುಕೊಂಡು ಹೋಗುತ್ತದೆ.
ಈಗ ದೇಶದಲ್ಲಿ ಶಿಕ್ಷಣದ ವ್ಯಾಪಾರೀಕರಣದ ಚರ್ಚೆಯಾಗುತ್ತಿದೆ. ದೊಡ್ಡ ದೊಡ್ಡ ಜನರಿಗೂ ಶಿಕ್ಷಣದ ವ್ಯಾಪಾರೀಕರಣದ ಜೊತೆ ಸೇರಿಕೊಂಡರೆ ಸ್ವಲ್ಪವಲ್ಲ ಸ್ವಲ್ಪ ಲಾಭ ಸಿಗಬಹುದೆಂದು ಎನಿಸುತ್ತಿರಬಹುದು. ಇಂತಹ ಜನರಿಗೆಲ್ಲ ಈ ಸಪ್ತರ್ಷಿಗಳು ಒಂದು ಪಾಠ. ನೂರು ವರ್ಷಗಳ ಹಿಂದೆ ಅವರ ಸಂಬಳ ಎಷ್ಟಿರಬಹುದು? ಇವರುಗಳ ಸಂಬಳ ಮೂವತ್ತೋ ಮೂವತ್ತೈದೋ ಐವತ್ತೋ ರೂಪಾಯಿಗಳಿರಬಹುದು. ನೂರು ವರ್ಷಗಳ ಹಿಂದೆ ಮೂವತ್ತೋ ಮೂವತ್ತೈದೋ ಐವತ್ತೋ ರೂಪಾಯಿಗಳ ಸಂಬಳ ಸಿಗುತ್ತಿರಬಹುದು; ಇಷ್ಟು ವೇತನ ತೆಗೆದುಕೊಳ್ಳುತ್ತಿದ್ದ ಇವರು ಸಮಾಜಕ್ಕೆ ಎಂತಹ ದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಲು ಇಚ್ಛಿಸುತ್ತಾ ಇವರು ಮಾಡಿದ ಕಾರ್ಯ ಇಂದಿನ ತನಕ ಒಂದು ಆದರ್ಶದ ಉದಾಹರಣೆಯಾಗಿ ಉಳಿದಿದೆ; ಜನರಿಗೆ ಪ್ರೇರಣೆ ನೀಡುತ್ತಿದೆ.
ಸೋದರ ಸೋದರಿಯರೇ,
ರಾಜಕೀಯ ಪಕ್ಷಗಳೂ ಕೂಡ ನೂರು ವರ್ಷ ಬದುಕುಳಿಯುವುದು ಕಷ್ಟವೇ. ಎಷ್ಟೋ ತುಂಡುಗಳಾಗುತ್ತಾ ಹೋಗುತ್ತವೆ. ಕುಟುಂಬಗಳೂ ಕೂಡ ಒಂದಾಗಿ ಉಳಿಯುವುದಿಲ್ಲ. ನೂರು ವರ್ಷಗಳ ಕಾಲ ಒಂದು ಸಂಸ್ಥೆಯನ್ನು ನಡೆಸುವುದು, ನಿರಂತರವಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ಪ್ರಜಾಪ್ರಭುತ್ವ ರೀತಿಯಲ್ಲಿ ಅದರ ಆಡಳಿತವನ್ನು ನಡೆಸುವುದು ಮತ್ತು ಜನರ ದುಡ್ಡಿನಿಂದಲೇ [ಸಂಸ್ಥೆಯನ್ನು] ಬೆಳೆಸುವುದು, ಇದಕ್ಕಾಗಿ ಇದೇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಹಕಾರವನ್ನು ಪಡೆದಿರುವುದು ಇವೆಲ್ಲ ತಮ್ಮಷ್ಟಕ್ಕೆ ತಾವೇ ಇಡೀ ದೇಶಕ್ಕೆ ಮಹಾನ್ ಆದರ್ಶಪ್ರಾಯವಾದಂಹವು.
ದೆಹಲಿಯಲ್ಲಿರುವ ನನ್ನ ವಿದ್ವಾಂಸ ಮಿತ್ರರು, ಮೀಡಿಯಾ ವ್ಯಕ್ತಿಗಳು ಇವರಲ್ಲೆಲ್ಲ ಸಾರ್ವಜನಿಕ ರೀತಿಯಲ್ಲಿ ನಾನು ವಿಶೇಷವಾಗಿ ಕೋರಲು ಬಯಸುತ್ತೇನೆ: ಯಾರೋ ವ್ಯಕ್ತಿಯ ಅರುವತ್ತು ವರ್ಷ ಪೂರ್ಣ ಗೊಂಡಾಗ ಪತ್ರಿಕೆಗಳಲ್ಲಿ ಅವರ ಬಗ್ಗೆ ದೊಡ್ಡ ದೊಡ್ಡ ಲೇಖನಗಳು ಮುದ್ರಿತವಾಗುತ್ತವೆ. ಒಂದು ಸರಕಾರ ನೂರುದಿನಗಳನ್ನು ಪೂರೈಸಿದರೆ ಪತ್ರಿಕೆಗಳಲ್ಲಿ ದೊಡ್ಡ ಲೇಖನ ಬರುತ್ತದೆ. ಒಬ್ಬ ವ್ಯಕ್ತಿಯ ಎಪ್ಪತ್ತೈದು ವರ್ಷ ಪೂರ್ಣ ಗೊಂಡರೆ ಜಯಜಯಕಾರ ಹಾಕುತ್ತಾರೆ. ಈ ಸಪ್ತ ಋಷಿಗಳು ಮಾಡಿರುವ ಕೆಲಸವನ್ನು ಈ ಸಂಸ್ಥೆಯ ಶತಮಾನೋತ್ಸವ ವಾಗುತ್ತಿರುವ ವಿಷಯವನ್ನು ಕೂಡ ಇಡೀ ಹಿಂದೂಸ್ತಾನದ ಮೀಡಿಯಾದಲ್ಲಿ ಘನತರವಾಗಿ ಬರೆದು ಜನರಿಗೆ ಗೊತ್ತಾಗುವಂತೆ ಮಾಡಿದರೆ ಒಳ್ಳೆಯದಾಗುತ್ತದೆ. ಹೀಗಾಗುವುದರಿಂದ ದೇಶದ ಇತರ ಭಾಗಗಳಲ್ಲಿ ಶಿಕ್ಷಣಕ್ಕೆ ಅರ್ಪಿಸಿಕೊಂಡು ಕೆಲಸಮಾಡುತ್ತಿರುವ ಮತ್ತು ಸಮಾಜಕ್ಕೆ ಸಮರ್ಪಿತರಾದ ಜನರಿಗೆ ಪ್ರೇರಣೆ ಸಿಗುತ್ತದಾದ್ದರಿಂದ, ಸ್ಫೂರ್ತಿ ದೊರಕುತ್ತದಾದ್ದರಿಂದ ಮತ್ತು ಇಂತಹ ಘಟನೆ ದೇಶದ ಇನ್ನಾವುದೋ ಮೂಲೆಯಲ್ಲಿ ಇಂತಹುದೇ ಚಳುವಳಿ ಎದ್ದು ನಿಲ್ಲಿಸುವ ಸಂಭವವಿರುತ್ತೆಯಾದ್ದರಿಂದ ಮಾಧ್ಯಮಗಳು ಇದಕ್ಕೆ ಸೂಕ್ತ ಪ್ರಚಾರ ನೀಡುವುದು ಅತ್ಯಗತ್ಯ.
ಸೋದರ-ಸೋದರಿಯರೇ,
ಸ್ವಾತಂತ್ರ್ಯ ಚಳುವಳಿ ನಡೆಯುತ್ತಿದ್ದಾಗ ಆಗ ಮಹಾತ್ಮ ಗಾಂಧಿಯವರೂ ಕೂಡ ಸ್ವಾತಂತ್ರ್ಯಾಂದೋಲನಕ್ಕಾಗಿ ಸೈನಿಕರನ್ನು ತಯಾರಿಸುವುದಕ್ಕೋಸ್ಕರ ಗುಜರಾತ್ ವಿದ್ಯಾಪೀಠ ಎಂಬ ಹೆಸರಿನ ವಿದ್ಯಾ ಸಂಸ್ಥೆಯನ್ನು ತೆರೆದಿದ್ದರು. ಲೋಕ ಮಾನ್ಯ ತಿಲಕರು ಇದೇ ಕಾರ್ಯಕ್ಕಾಗಿ ಮತ್ತು ರಾಷ್ಟ್ರವನ್ನು ತನ್ನ ಕಾಲಿನ ಮೇಲೆ ನಿಲ್ಲಿಸುವುದಕ್ಕಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. 21ನೆಯ ಶತಮಾನದಲ್ಲಿ ವಿಶ್ವಕ್ಕೆ ಭಾರತದ ಶಕ್ತಿಯನ್ನು ಪರಿಚಯಿಸ ಬೇಕಾದರೆ ಹೀಗೆ [ಈ ಸಂಸ್ಥೆಯಲ್ಲಿ ಓದಿದ] ಈ ನಮ್ಮ ಯುವ ತಲೆಮಾರು ತಮ್ಮ ಕೌಶಲ ಮತ್ತು ತಮ್ಮ ಶಿಕ್ಷಣಗಳಿಂದಲೇ ಜಗತ್ತಿಗೆ ಅದನ್ನು ಮನವರಿಕೆ ಮಾಡಿಕೊಡಬೇಕು.
ಸೋದರ ಸೋದರಿಯರೇ,
ವಿಶ್ವದಲ್ಲಿ ಭಾರತದ ಅನನ್ಯತೆ ಏನಿದೆ ಎಂದು [ತಿರಸ್ಕಾರದಿಂದ ಕೇಳವ] ಒಂದು ಕಾಲವಿತ್ತು. ಇವರೋ ಒಂದು ಹಾವಾಡಿಗ ಗೊಲ್ಲ ಜನಾಂಗ; ಇವರು ಮಾಯಮಾಟ ಮಾಡುವ ಮೂಢ ಜನರು. ಹಾವು ಮತ್ತು ಇಲಿಗಳ ಹೊರತಾಗಿ ಇವರಿಗೆ ಯಾವ ಜ್ಞಾನವೂ ಇಲ್ಲ- ವಿಶ್ವದಲ್ಲಿ ಹಿಂದೂಸ್ತಾನದ ಗುರುತು ಇದಾಗಿತ್ತು. ಆದರೆ ಕೆಲವು ವರ್ಷಗಳ ಮೊದಲು ಹಿಂದೂಸ್ತಾನದ 18-20 ವರ್ಷದ ನವಯುವಕರು ಕಂಪ್ಯೂಟರ್ ಕೀಬೋರ್ಡಿನ ಮೇಲೆ ತಮ್ಮ ಬೆರಳುಗಳನ್ನು ಆಡಿಸಲು ಪ್ರಾರಂಭಿಸಿದಾಗ ಪ್ರಪಂಚ ತಿರುಗಲು ಪ್ರಾರಂಭವಾಯಿತು. ವಿಶ್ವ ಭಾರತದ ಬಗ್ಗೆ ಯೋಚಿಸುವ ರೀತಿಯನ್ನು ಬದಲಾಯಿಸ ಬೇಕಾಯಿತು. ಭಾರತದ ಹತ್ತಿರ ಅದ್ಭುತ ಶಕ್ತಿ ಇದೆಯೆಂದು ಅವರುಗಳು ಒಪ್ಪ ಬೇಕಾಯಿತು; ಸಾಮರ್ಥ್ಯವಿದೆ ಎಂದು ಒಪ್ಪ ಬೇಕಾಯಿತು. ಈ ಎಲ್ಲದರ ಮೂಲಾಧಾರ ಶಿಕ್ಷಣ. ನೂರು ವರ್ಷಗಳಲ್ಲಿ ಇಲ್ಲಿಯ ಸಮಾಜ ಜೀವನದಲ್ಲಿ ಬದಲಾವಣೆ ತರಲು ಶಿಕ್ಷಣದ ಮೂಲಕ ಇಡೀ ಕರ್ನಾಟಕದ ಜೀವನಕ್ಕೆ ಶಕ್ತಿ ತುಂಬಲು ಮತ್ತು ಇದರ ಮೂಲಕ ಇಡೀ ದೇಶದ ಜನರಿಗೆ ಶಕ್ತಿ ನೀಡಲು ತಮ್ಮದು ಬಹುದೊಡ್ಡ ಕೊಡುಗೆ.
ನಾನು ಹಿಂದಿನ ಸಲ ಬಂದಾಗ ನಮ್ಮ ಪ್ರಭಾಕರಜೀ ಯವರು ನನಗೆ ಹೇಳಿದ್ದರು 32 ವರ್ಷಗಳಿಂದ ಜನತೆ ತನಗೆ ಈ ಕೆಲಸ ಕೊಡುತ್ತಿದ್ದಾರೆ ಎಂದು. ಇದು ಸಣ್ಣ ಮಾತಲ್ಲ ಪ್ರಭಾಕರ್-ಜೀಯವರೇ. ನಾನು ನಿಮಗೆ ಶುಭಾಶಯಗಳನ್ನು ಹೇಳುತ್ತೇನೆ, ನಿಮ್ಮ ಇಡೀ ತಂಡಕ್ಕೆ ಶುಭಾಶಯಗಳನ್ನು ಹೇಳುತ್ತೇನೆ. ಇಷ್ಟೆಲ್ಲ ತಲೆಮಾರುಗಳಿಗೆ ಸೇರಿದ ಎಷ್ಟೊಂದು ಜನರು ಕೆಲಸ ಮಾಡಿರ ಬಹುದು. ಆದರೆ ಸಂಸ್ಥೆಯ ಒಳಿತು, ಶಿಕ್ಷಣದ ಒಳಿತು, ವಿದ್ಯಾರ್ಥಿಗಳ ಒಳಿತು ಇವುಗಳಲ್ಲಿ ಯಾರೂ ರಾಜಿ ಮಾಡಿಕೊಂಡಿಲ್ಲ ಇದು ತನ್ನಷ್ಟಕ್ಕೆ ತಾನೇ ಒಂದು ದೊಡ್ಡ ವಿಷಯವಾಗಿದೆ. ಆದರೆ ಇಲ್ಲಿಯ ಉತ್ತಮ ಕಾರ್ಯಗಳನ್ನು ಕಣ್ಣಾರೆ ನನ್ನೆದುರೇ ಕಂಡು, ನನಗೆನಿಸುತ್ತದೆ ನಾನೂ ತಮ್ಮಲ್ಲಿ ಏನಾದರೂ ಬೇಡಿಕೊಂಡೇ ಹೋಗೋಣವೆಂದು. ಕೇಳಬಹುದು ತಾನೆ, ಸಿಗುತ್ತದೆ ತಾನೆ?
ಇವನೆಂತಹ ಪ್ರಧಾನ ಮಂತ್ರಿ ನಮ್ಮನ್ನೇ ಬೇಡಲು ಬಂದಿದ್ದಾನೆ ಎಂದು ನೀವಂದುಕೊಳ್ಳ ಬಹುದು. ಈ ಪ್ರಧಾನ ಮಂತ್ರಿಯೇ ಹೀಗೆ ಸ್ವಾಮಿ. ಇವನು ಜನರ ಬಳಿ
ಬೇಡಿಯೇ ಬದುಕು ಸಾಗಿಸುತ್ತಾನೆ. ನಾನು ಇವತ್ತು ನಿಮ್ಮಿಂದ ಏನ್ನ್ನೋ ಬೇಡಲು ಇಚ್ಛಿಸುತ್ತೇನೆ. ಮತ್ತು ನನಗೆ ವಿಶ್ವಾಸವಿದೆ, ಆ ಸಪ್ತರ್ಷಿಗಳ ಮೇಲೆ ವಿಶ್ವಾಸವಿದೆ, ಇವತ್ತಿನ ವ್ಯವಸ್ಥೆಯಮೇಲೆ ವಿಶ್ವಾಸವಿದೆ, ನನ್ನೆದುರು ಕುಳಿತಿರುವ ಲಕ್ಷಾಂತರ ನವಯುವಕರ ಮೇಲೆ ವಿಶ್ವಾಸವಿದೆ, ಆದ್ದರಿಂದಲೇ ಬೇಡುವುದಕ್ಕೆ ಧೈರ್ಯ ಮಾಡುತ್ತಿದ್ದೇನೆ. ಕೇಳಲೇ? ಧ್ವನಿ ಸ್ವಲ್ಪ ಏರಿಸಿ ಹೇಳಿ , ಜೋರಾಗಿ ಬರಬೇಕು, ಕೇಳಲೇ, ನಿಜವಾಗಿ ಕೇಳಲೇ?
ನೀವು ನನಗೆ ಹೇಳಿ ಯಾವ ಸಂಸ್ಥೆಯ ಬಳಿ ಒಂದೂ ಕಾಲು ಲಕ್ಷ ವಿದ್ಯಾರ್ಥಿಗಳಿದ್ದಾರೋ, ಇಷ್ಟೊಂದು ಶಾಲಾ ಕಾಲೇಜುಗಳನ್ನು ನಡೆಸುತ್ತದೆಯೋ, ಅಂತಹ ನಮ್ಮ ಕೆ ಎಲ್ ಇ 2020ರ ಟೋಕಿಯೋ ಒಲಂಪಿಕ್ಸ್-ನಲ್ಲಿ ಗೋಲ್ಡ್ ಮೆಡಲ್ ತರುವ ಖಚಿತ ಸಂಕಲ್ಪ ಮಾಡಬಹುದೆ, ಅದು ಕೆ ಎಲ್ ಇಯದೇ ಆಗಬೇಕು. ಮಾಡುವಿರಾ ಸ್ನೇಹಿತರೇ, ಮಾಡುವಿರಾ; ಸಾಧ್ಯವಿದೆ ಸ್ನೇಹಿತರೇ, ನಿಮಗೆ ಖಂಡಿತ ಸಾಧ್ಯವಿದೆ. ನನ್ನ ಪ್ರೀತಿಯ ನವತರುಣತರೇ, ನಿಮ್ಮಿಂದ ಆವಿಷ್ಕಾರಗಳಾಗಬೇಕೆಂದು ನನ್ನ ಬಯಕೆ; ಆವಿಷ್ಕಾರವೇ ಅಭಿವೃದ್ಧಿಯ ಮೂಲಬೇರು. ಆವಿಷ್ಕಾರಗಳಾಗದಿದ್ದರೆ ಸಂಶೋಧನೆಗಳಾಗುವುದಿಲ್ಲ; ಸಂಶೋಧನೆಗಳಾಗದಿದ್ದರೆ ಬದುಕು ನಿಂತ ನೀರಂತಾಗುತ್ತದೆ; ಮತ್ತು ಯಾರು ಸಂಶೋಧನೆಗಳನ್ನು ಮಾಡುತ್ತಾ ಸಾಗುತ್ತಾರೋ ಅವರು ಮುಂದೆ ಹೋಗಿ ಬಿಡುತ್ತಾರೆ. ನಾವು ಕೇವಲ ಉತ್ಪನ್ನಗಳನ್ನು ಕೊಳ್ಳುವವರಾಗಿ ಬಿಡುತ್ತೇವೆ. ನಾನು ಹಿಂದಿನ ಸಲ ತಮ್ಮ ಬಳಿ ಬಂದಾಗ ನೋಡಿದ್ದೆ – ಇಂತಹ ಉತ್ತಮ ವಿಜ್ಞಾನಿಗಳು ನಿಮ್ಮ ಬಳಿ ಇದ್ದಾರೆ, ಇಂತಹ ಉತ್ತಮ ಸಂಸ್ಥೆಗಳಿವೆ, ಇಂತಹ ಉತ್ತಮ ತಾಂತ್ರಿಕ-ಜ್ಞಾನವಂತರಿದ್ದಾರೆ. ಪ್ರತಿವರ್ಷ ಏನಾದರೊಂದು ಅಂತರ ರಾಷ್ಟ್ರೀಯವಾಗಿ ಗೌರವಕ್ಕೆ ಪಾತ್ರವಾಗುವಂತಹ, ಮಾನವ ಜಾತಿಗಾಗೆ ಉಪಯೋಗಕ್ಕೆ ಬರುವಂತಹ ಆವಿಷ್ಕಾರವನ್ನು ಕೆ ಎಲ್ ಇ ಮಾಡಿ ಕೊಡಲು ಸಾಧ್ಯವಿಲ್ಲವೆ, ಕೊಡುವಿರಿ ತಾನೆ? ಖಂಡಿತವಾಗಿ ಕೊಡುವಿರಾ?
ಸೋದರ ಸೋದರಿಯರೇ ಇನ್ನೊಂದು ಮಾತು. ಇವತ್ತು ವಿಶ್ವದಲ್ಲಿರುವ ಪ್ರಥಮ ನೂರು ವಿಶ್ವ ವಿದ್ಯಾಲಯಗಳಲ್ಲಿ ನಾವಿಲ್ಲ. ನಾಚಿಕೆ ಎನಿಸುತ್ತದೆ. ಭಾರತ ಸರಕಾರ ಈ ಸಾಲಿನ ವಾರ್ಷಿಕ ಆಯವ್ಯಯದಲ್ಲಿ ಒಂದು ಮಹತ್ವ ಪೂರ್ಣ ನಿರ್ಣಯ ಮಾಡಿದೆ, ಸರಕಾರದ ಹತ್ತು ಮತ್ತು ಖಾಸಗಿಯವರ ಹತ್ತು ವಿಶ್ವ ವಿದ್ಯಾಲಯಗಳು ಈ ಮೊದಲ ನೂರರಲ್ಲಿ ಸ್ಥಾನ ಪೆಯಲು ಸಂಕಲ್ಪ ಮಾಡಿ, ಕ್ರಮ ಕೈಗೊಳ್ಳಬೇಕೆಂದು. ಈ ಕಾರ್ಯಕ್ಕಾಗಿ ಯಾರು ಮುಂದೆ ಬರಲು ಬಯಸುತ್ತಾರೋ ಅವರಿಗೆ ಸರಕಾರದ ಕಡೆಯಿಂದ ವಿಶೇಷ ಆರ್ಥಿಕ ಸಹಾಯವನ್ನು ನಿಡಲಾಗುವುದು. ಈ ಕಾರ್ಯಕ್ಕಾಗಿ ಯಾರು ಮುಂದೆ ಬರಲು ಬಯಸುತ್ತಾರೋ ಅವರಿಗೆ ಸರಕಾರೀ ಅಧಿಕಾರಿಗಳ ಬಂಧನದಿಂದ – ಆ ಪರ್-ಮಿಶನ್ ಮಾಡಿದ್ದೀರಾ, ಈ ಪರ್-ಮಿಶನ್ ಮಾಡಿದ್ದೀರಾ, ಆ ನಿಯಮ ಪಾಲನೆ ಈನಿಯಮ ಪಾಲನೆ ಇಂತಹವುಗಳಿಂದ ಕೂಡ ಮುಕ್ತಿ ಕಲ್ಪಿಸಲಾಗುವುದು. ಕೆಲಸ ಮಾಡಲು ಸ್ವಾತಂತ್ರ್ಯಭರಿತ ಮೈದಾನ ಸಿಗುವುದು. ನಾನು ಆಹ್ವಾನಿಸುತ್ತಿದ್ದೇನೆ ಹತ್ತು ಖಾಸಗಿ ವಿಶ್ವವಿದ್ಯಾಲಯಗಳನ್ನು. ಮತ್ತೆ ಆಹ್ವಾನಿಸುತ್ತಿದ್ದೇನೆ ಹತ್ತು ಸರಕಾರೀ ವಿಶ್ವಿದ್ಯಾಲಯಗಳನ್ನು – ಈ ಕೊಡುಗೆಯನ್ನು ಸ್ವೀಕರಿಸಲು, ಧೈರ್ಯ ಮಾಡಿ ಮುಂದೆ ಬನ್ನಿ. ವಿಶ್ವದ ಮೊದಲ ನೂರು ವಿಶ್ವ ವಿದ್ಯಾಲಯಗಳಲ್ಲಿ ಈಗ ನಮ್ಮ ವಿಶ್ವ ವಿದ್ಯಾಲಯ ಯಾವುದೂ ಇಲ್ಲವಷ್ಟೆ. ನಾವು ,ಮಾಡಿ ತೋರಿಸೋಣ. ದೇಶ ನಿನ್ನೆ ಎಲ್ಲಿತ್ತು ಅಲ್ಲಿಂದ ಈಗ ಮುಂದುವರೆದಿದೆ ಅಷ್ಟರಿಂದಲೇ ತೃಪ್ತಿ ಬೇಡ. ವಿಶ್ವದಲ್ಲಿ ಉತ್ತಮಕ್ಕಿಂತ ಉತ್ತಮವಾದದ್ದೇನಿದೆ ಅಲ್ಲಿಗೆ ತಲುಪುವ ಪ್ರಯತ್ನ ಮಾಡಬೇಕು ಎಂಬುದು ಹಿಂದೂಸ್ತಾನದ ಕನಸಾಗಬೇಕು. ಅದರ ಪೂರ್ತಿಗಾಗಿ ನಾವು ಮುನ್ನಡೆಯಬೇಕು.
ಸೋದರ-ಸೋದರಿಯರೇ, ಈ ದಿನ ನಾನು ಕರ್ನಾಟಕದ ನೆಲದಲ್ಲಿ ನಿಂತಿದ್ದೇನೆ. ಟಿವಿಯ ಮಾಧ್ಯಮದ ಮೂಲಕ ದೇಶವೂ ನನ್ನ ಮಾತುಗಳನ್ನು ಕೇಳುತ್ತಿದೆ. ಆದ್ದರಿಂದ ನಾನು ಇನ್ನೊಂದು ಮಾತನ್ನೂ ಹೇಳ ಬಯಸುತ್ತೇನೆ. ಹೇಳಲೇ? ನೀವೂ ಕೇಳಲು ಇಷ್ಟಪಡುತ್ತೀರಾ? 8ನೆಯ ತಾರೀಖು [8ನೆಯ ನವೆಂಬರ್ 2016] ರಾತ್ರಿ 8 ಗಂಟೆಗೆ ತಾವು ನೋಡಿರುತ್ತೀರಿ. 2012,2013,2014 – ಈ ವರ್ಷಗಳಲ್ಲಿ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿದ್ದವು: ಕಲ್ಲಿದ್ದಲು ಆವಂಟನೆಗಳಲ್ಲಿ ಅಷ್ಟು ಲಕ್ಷ ಕೋಟಿ ತಿಂದರು ಇಷ್ಟು ಲಕ್ಷ ಕೋಟಿ ತಿಂದರು ಎಂದು. ಹಾಗೆಯೇ 2ಜಿ ಸ್ಕ್ಯಾಮಿನಲ್ಲಿ ಇಷ್ಟೊಂದು ಲಕ್ಷ ಕೋಟಿ ದುರುಪಯೋಗವಾಗಿದೆ ಎಂದು. 8ನೆಯ ತಾರೀಖಿನ ನಂತರ ನೀವು ಅವರ ಅವಸ್ಥೆಯನ್ನು ನೋಡಿದ್ದೀರಿ. 4000 ರೂಪಾಯಿಗಾಗಿ ಸರದಿ ಸಾಲಿನಲ್ಲಿ ನಿಲ್ಲ ಬೇಕಾಗಿ ಬಂತು. ಪ್ರೀತಿಯ ದೇಶವಾಸಿಗಳೇ, ಈ ಸರಕಾರ ಪ್ರಾಮಾಣಿಕ ಮನುಷ್ಯರಿಗೆ ತೊಂದರೆ ಮಾಡಲು ಇಚ್ಛಿಸುವುದಿಲ್ಲ; ಆದರೆ ಸೋದರ ಸೋದರಿಯರೇ ಅಪ್ರಾಮಾಣಿಕರನ್ನು ಬಿಡುವುದೂ ಸಲ್ಲದು. ಹದಿನೇಳು ವರ್ಷಗಾಗಿ ಹೋದವು.
ನೀವು ನನಗೆ ಹೇಳಿ; ದೇಶವನ್ನು ಲೂಟಿ ಮಾಡಲಾಗಿದೆ, ಯಾರು ಲೂಟಿ ಮಾಡಿದ್ದು; ಭ್ರಷ್ಟಾಚಾರವಾಗಿದೆ, ಯಾರಿಂದ ಆಗಿದೆ; ದೊಡ್ಡ [ಮೌಲ್ಯದ] ನೋಟುಗಳಿಗಾಗಿ ರೈಡ್ ಆಗಿದೆ, ಯಾರ ಮನೆಗಳ ಮೇಲೆ ಆಗಿದೆ? ನನಗೆ ವಿಚಿತ್ರ ವೆನಿಸುತ್ತದೆ ನಮ್ಮ ಕಾಂಗ್ರೆಸ್-ಸ್ನೇಹಿತರು ಕೇಳುತ್ತಿದ್ದಾರೆ ನಾವು 1000 ಮೌಲ್ಯದ ನೋಟುಗಳನ್ನು ಏಕೆ ಅಮಾನ್ಯಗೊಳಿಸಿದೆವೆಂದು; 500ರ ನೋಟುಗಳನ್ನು ಏಕೆ ಅಮಾನ್ಯಗೊಳಿಸಿದೆವೆಂದು. ನಾನು ಅವರನ್ನು ಕೇಳ ಬಯಸುತ್ತೇನೆ, ಸೋದರಾ ನೀವು ನಾಲ್ಕಾಣೆ ನಾಣ್ಯವನ್ನು ಅಮಾನ್ಯಗೊಳಿಸಿದಾಗ ಏಕೆಂದು ನಾನು ಕೇಳಿದ್ದೆನೆ ಎಂದು. ಕಾಂಗ್ರೆಸ್ ಸರಕಾರ ನಾಲ್ಕಾಣೆ ನಾಣ್ಯವನ್ನು ರದ್ದುಪಡಿಸಿತ್ತೆಂದು ನಿಮಗೆ ಗೊತ್ತಿದೆ. ಇಡೀ ದೇಶ ಯಾವುದೇ ರೀತಿ ಗೊಣಗಾಟ ಮಾಡಿಲ್ಲ. ನಿಜ, ನಿಮ್ಮ ಶಕ್ತಿ ಅಷ್ಟಿತ್ತು. ಅಮಾನ್ಯಗೊಳಿಸಬೇಕೆಂಬ ಬಗ್ಗೆ ನಿಮ್ಮದೂ ಸಹಮತವಿತ್ತು ಆದರೆ ದೊಡ್ಡ ನೋಟುಗಳನ್ನು ರದ್ದುಪಡಿಸುವ ಸಾಮರ್ಥ್ಯ ನಿಮ್ಮದಾಗಿರಲಿಲ್ಲ. ನಾಲ್ಕಾಣೆಯಿಂದ ಗಾಡಿ ಓಡಿಸಬೇಕಿತ್ತು . ಇವತ್ತು ಇದೇ ಜನರು ನನ್ನ ಬಗ್ಗೆ ಹೇಳುತ್ತಾರೆ –ಮೋದಿಯವರು ಸಾವಿರದ ನೋಟಿನ ಜಾದು ಮಾಡುತ್ತಿದ್ದಾರೆ ಎಂದು.
ಸೋದರ-ಸೋದರಿಯರೇ, ಯಾರೆಲ್ಲ ನನ್ನ ಭಾಷಣವನ್ನು ಕೇಳುತ್ತಾರೋ, ನನ್ನ ಮಾತುಗಳನ್ನು ಕೇಳುತ್ತಾರೋ [ಅವರಿಗೆಲ್ಲ ಗೊತ್ತಿದೆ] ನಾನು ಈ ಮಾತುಗಳನ್ನು ಮೊದಲ ಬಾರಿಗೆ ಹೇಳುತ್ತಿಲ್ಲ. ಐದು ವರ್ಷಗಳ ಹಿಂದೆ ನಾನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದೆ ಕಾಂಗ್ರೆಸ್ ಪಕ್ಷದಲ್ಲಿ ದಮ್ ಇಲ್ಲವೆಂದು, ನಾಲ್ಕಾಣೆ ರದ್ದು ಪಡಿಸುತ್ತಿರುವರೆಂದು, ನನ್ನದು ನಡೆಯುವುದಾದರೆ ಸಾವಿರದ ನೋಟನ್ನು ರದ್ದು ಪಡಿಸಿ ಬಿಡುವೆನೆಂದು. ಈಗಲೂ ಅದರ ವೀಡಿಯೊ ಎಲ್ಲದರೂ ನಡೆಯುತ್ತಿರಬಹುದು, ನೀವುಗಳು ಅದನ್ನು ನೋಡಬಹುದು.
ಸೋದರ-ಸೋದರಿಯರೇ, ನಾನು ದೇಶದ ಜನರಿಂದ ಏನನ್ನೂ ಅಡಗಿಸಿಲ್ಲ. ಮೊದಲ ದಿನವೇ ಹೇಳಿದ್ದೆ ನಾನು; ನನ್ನ ಪ್ರೀತಿಯ ಸೋದರ ಸೋದರಿಯರೇ ನಾನು ನಿಮಗೆ ಸುಳ್ಳು ಹೇಳಿದರೆ ನನ್ನ ಮೇಲೆ ಸಿಟ್ಟುಗೊಳ್ಳುವ ಸಂಪೂರ್ಣ ಅಧಿಕಾರ ನಿಮ್ಮದು. ನಾನು ಮೊದಲ ದಿನವೇ ಹೇಳಿದ್ದೆ: ಈ ಕೆಲಸಕ್ಕಾಗಿ ನನಗೆ 50 ದಿನಗಳನ್ನು ನೀಡಿ, 30 ದಿಸೆಂದರ್ ವರೆಗೆ ಸಮಯ ಕೊಡಿ. ಹೇಳಿದ್ದೆನೋ ಇಲ್ಲವೋ? ನಾನು ಮೊದಲ ದಿನವೇ ಹೇಳಿದ್ದೆ 30 ದಿಸೆಂಬರ್ ವರೆಗೆ [ಜನರಿಗೆ] ಸ್ವಲ್ಪ ಕಷ್ಟವಾಗಬಹುದು, ಹೇಳಿದ್ದೆನೋ ಇಲ್ಲವೋ? ಸೋದರ ಸೋದರಿಯರೇ ನಾನು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ದೇಶದಲ್ಲಿ ಪ್ರಾಮಾಣಿಕತೆ ಎಂಬುದು [ಅಪುರೂಪವೇನಲ್ಲ]. ಕೋಟಿ ಕೋಟಿ ಜನರೇನಿದ್ದಾರೆ ಅವರೆಲ್ಲ ಪ್ರಾಮಾಣಿಕತೆಯಿಂದ ಬದುಕುತ್ತಿದ್ದಾರೆ; ಪ್ರಾಮಾಣಿಕತೆಗಾಗಿಯೇ ಬದುಕುತ್ತಾರೆ, ಪ್ರಾಮಾಣಿಕರಾಗಿರುವುದರಿಂದ ಸಹಿಸುತ್ತಾರೆ. ಈಗ ನೀವು ಹೇಳಿ – ಪ್ರಾಮಾಣಿಕರನ್ನು ರಕ್ಷಿಸುವ ಕಾರ್ಯ ಸರಕಾರದ್ದು ಹೌದೋ ಅಲ್ಲವೋ? ಅಪ್ರಾಮಾಣಿಕರಿಗೆ ಶಿಕ್ಷ ವಿಧಿಸುವುದಕ್ಕಾಗಿ 50 ದಿನ ಸ್ವಲ್ಪ ಕಷ್ಟಗಳನ್ನೆದುರಿಸಬೇಕಾದರೆ ನೀವು ನನಗೆ ಸಹಾಯ ಮಾಡುತ್ತೀರಿ, ಮಾಡುತ್ತೀರೋ ಇಲ್ಲವೋ? ಎರಡೂ ಕೈಗಳನ್ನು ಮೇಲೆತ್ತಿ ಹೇಳಿರಿ ಸಹೋದರ-ಸಹೋದರಿಯರೇ. ಚಪ್ಪಾಳೆಗಳ ಕಿವಿಗಡಚಿಕ್ಕುವ ಸದ್ದಿನಿಂದ ಹೇಳಿರಿ, ಈ ದೇಶ ನೋಡುತ್ತಿದೆ ದೇಶದ ಪ್ರತಿಯೊಬ್ಬ ನವಯುವಕ, ಪ್ರತಿಯೊಬ್ಬ ಹಿಂದೂಸ್ತಾನೀ [ನೋಡುತ್ತಿದ್ದಾನೆ]. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡು ಅಪ್ರಾಮಾಣಿಕರ ಪರವಾಗಿ ವಕಾಲತ್ತು ಮಾಡುತ್ತಿರುವವರೇ, ನೋಡಿ ಈ ದೃಶ್ಯವನ್ನು, ಜನತಾ ಜನಾರ್ದನ ಏನು ಬಯಸುತ್ತಾರೆಂಬುದನ್ನು.
ಸೋದರ-ಸೋದರಿಯರೇ, ನಮಗೆ ಗೊತ್ತಿದೆ ನಮ್ಮ ದೇಶದಲ್ಲಿ ಚುನಾವಣೆಗಳು ಆಗುತ್ತವೆ ಎಂಬುದು. ಮತದಾರರ ಪಟ್ಟಿ, ಇದೇನೂ ಒಂದು ರಹಸ್ಯ ಕೆಲಸವಲ್ಲ. ನೋಟು ಅಮಾನ್ಯ ಮಾಡುವುದು ನನ್ನ ಮಟ್ಟಿಗೆ ಬಹಳ ಆವಶ್ಯಕವಿತ್ತು; ಇದನ್ನು ಗುಟ್ಟಾಗಿಡುವುದೂ ಕೂಡ ಬಹಳ ಅವಶ್ಯವಿತ್ತು. ಅದೇನಾದರೂ ಲೀಕ್ ಆಗಿದ್ದರೆ ಈ ಅಪ್ರಾಮಾಣಿಕ ಜನರು ಪ್ರಭಾವ ಬೀರಿ ಎಲ್ಲಿಗಾದರೂ ಹೋಗಿ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಾರೆ. [ಈಗ ಮಾಡಿದ್ದರಿಂದ] ಜನರಿಗೆ ಖುಷಿಯಾಗಿದೆ. 8ನೆಯ ತಾರೀಖಿನ ದಿನದಂದು ಹಿಂದೂಸ್ತಾನದ ಬಡವರಿಗೆ ಸುಖ-ನಿದ್ರೆ ಬಂದಿದೆ. ಮತ್ತು [ಅಪ್ರಾಮಾಣಿಕ] ಶ್ರೀಮಂತರು ನಿದ್ದೆ ಮಾತ್ರೆಗಳನ್ನು ಕೊಳ್ಳಲು ಪೇಟೆಗೆ ಹೋದರು, ಆದರೆ ಕೊಡುವವರು ಯಾರೂ ಇರಲಿಲ್ಲ.
ಸೋದರ-ಸೋದರಿಯರೇ, ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿ ತಯಾರಾಗುತ್ತದೆ, ಇದರಲ್ಲಿ ರಹಸ್ಯವೇನೂ ಇಲ್ಲ. ಸರಕಾರ ತೊಡಗಿಕೊಳ್ಳುತ್ತದೆ, ಅಧ್ಯಾಪಕರು ತೊಡಗುತ್ತಾರೆ, ಆಶಾ ಕಾರ್ಯಕರ್ತರು ತೊಡಗುತ್ತಾರೆ, ಇಡೀ ಸರಕಾರೀ ವ್ಯವಸ್ಥೆ ತೊಡಗಿಕೊಳ್ಳುತ್ತದೆ. ಪ್ರತಿಯೊಂದು [ರಾಜಕೀಯ] ಪಕ್ಷದ ಕಾರ್ಯಕರ್ತರು ಕೆಲವೊಮ್ಮೆ ತೊಡಗಿಕೊಳ್ಳುತ್ತಾರೆ. ಇಷ್ಟೆಲ್ಲ ಆದರೂ ಮತದಾನದ ದಿನ ದೂರುಗಳು ಬರುತ್ತವೆ, ಬರುವುವೋ ಇಲ್ಲವೋ? ನನ್ನ ಹೆಸರು ಅಚ್ಚಾಗಿಲ್ಲ, ನಮ್ಮ ಮೊಹಲ್ಲಾದ ಹೆಸರು [ಅಚ್ಚಾಗದೇ] ಉಳಿದು ಹೋಗಿದೆ, ನಮ್ಮ ಕುಟುಂಬದ ಹೆಸರು ಉಳಿದು ಹೋಗಿದೆ, ನಮ್ಮ ಸೊಸೈಟಿಯ ಹೆಸರೇ ಇಲ್ಲ, ಹೇಳಿ – ಈ ತರಹದ ದೂರುಗಳು ಬರುತ್ತವೆಯೋ ಇಲ್ಲವೋ? ಇಂಥ ತೊಂದರೆಗಳು ಬರುತ್ತವೋ ಇಲ್ಲವೋ? ಇಷ್ಟು ದೊಡ್ಡ ಕೆಲಸ ಇಷ್ಟು ಮುಕ್ತವಾಗಿ ನಡೆಯುತ್ತದೆ ಆದರೂ ಸ್ವಲ್ಪವಲ್ಲ ಸ್ವಲ್ಪ ಕೊರತೆಗಳು ಉಳಿದು ಹೋಗುತ್ತವೆ, ಉಳಿದು ಹೋಗುತ್ತವೆಯೋ ಇಲ್ಲವೋ? ಈಗ ನೋಡಿ, ಹಿಂದೂಸ್ತಾನದಲ್ಲಿ ಚುನಾವಣೆ ನಡೆಯಿತೆಂದರೆ ಹತ್ತಿರ ಹತ್ತಿರ ಮೂರು ತಿಂಗಳು ಅದಕ್ಕಾಗಿ ಕೆಳೆದು ಹೋಗುತ್ತದೆ. 90 ದಿನಗಳವರೆಗೆ ಎಲ್ಲ ಕೆಲಸಗಳು ಸಂಪೂರ್ಣ ನಿಂತು ಹೋಗುತ್ತವೆ.
ಪ್ರತಿಯೊಬ್ಬರಿಗೂ ಚುನಾವಣಾ ಕೆಲಸವೇ ಇರುತ್ತದೆ. ಪ್ರತಿಯೊಬ್ಬ ಅಧಿಕಾರಿ, ಇಲಾಖೆ ಯಾವುದೇ ಆಗಿರಲಿ, ಮತ್ತೆ ಪ್ರತಿಯೊಬ್ಬರೂ, ಚುನಾವಣಾ ಕೆಲಸವನ್ನೇ ಮಾಡಬೇಕಾಗುತ್ತದೆ. ಸೋದರ-ಸೋದರಿಯರೇ, ಚುನಾವಣೆಯಲ್ಲಿ ಸರಕಾರದ ಸಾಮರ್ಥ್ಯವೆಲ್ಲ ತೊಡಗುತ್ತದೆ, ರಾಜಕೀಯ ಪಕ್ಷಳ ಸಹಕಾರವೂ ಸಿಗುತ್ತದೆ, ಮಾಧ್ಯಮಗಳು ಒಳಗೊಳ್ಳುತ್ತವೆ ಇಷ್ಟಾದರೂ ಶೇ. 60ರಿಂದ 70ರವರೆಗೆ ಮತದಾನವಾಗುತ್ತದೆ ಮತ್ತು 90ದಿನಗಳ ವರೆಗೆ ಗಾಡಿ ಚಲಿಸುತ್ತಿರುತ್ತದೆ. ನನ್ನ ಪ್ರೀತಿಯ ದೇಶವಾಸಿಗಳೇ, ನಾನಾದರೂ ಕೇವಲ 50 ದಿನಗಳ ಸಮಯವನ್ನು ಕೇಳಿದ್ದೇನೆ. ಸಹೋದರರೇ, ನಾನು ಕೇಳಿರುವುದು ದೇಶಕ್ಕಾಗಿ.
ಸೋದರ-ಸೋದರಿಯರೇ, ನೀವು ನೋಡಿರಬಹುದು: ನಾವು ಬಜೆಟ್ಟಿನಲ್ಲಿ ಒಂದು ಯೋಜನೆಯನ್ನು ಮಾಡಿದ್ದೆವು. ಯಾರೆಲ್ಲ ನನ್ನ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಕೇಳುತ್ತಾರೋ, ಅದರಲ್ಲಿಯೂ ನಾನು ಹೇಳಿದ್ದೇನೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಒಂದು ಉಪಾಯವೇ cashless society. ನಗದಾಗಿ ರೂಪಾಯಿ ಕೊಡುವವರ ಕಾರ್ಯಭಾರ ನಿಧನಿಧಾನವಾಗಿ ಕಡಿಮೆಯಾಗುತ್ತಾ ಹೋಗಬೇಕು. ಕ್ರೆಡಿಟ್-ಕಾರ್ಡ್, ಡೆಬಿಟ್-ಕಾರ್ಡ್, ಪ್ಲಾಸ್ಟಿಕ್-ಕರೆನ್ಸಿ ಇವುಗಳ ಮೂಲಕ ವ್ಯವಹಾರವಾಗಬೇಕು. ಇದಕ್ಕಾಗಿ ಭಾರತ ಸರಕಾರ ತನ್ನ ಬಜೆಟ್ಟಿಮಲ್ಲಿ ಕ್ರೆಡಿಟ್-ಕಾರ್ಡ್, ಡೆಬಿಟ್-ಕಾರ್ಡುಗಳ ಮೇಲೆ ಹಾಕುತ್ತಿದ್ದ ತೆರಿಗೆಯನ್ನು ನಾವು ತೆಗೆದು ಹಾಕಿದ್ದೇವೆ; ಮತ್ತು ಸರಕಾರೀ ವಿಭಾಗಗಳಿಗೆ ತಾವೂ ಕೂಡ ಇದನ್ನು ಕಡಿಮೆ ಮಾಡಿ ಅಥವ ತೆಗೆದು ಹಾಕಿ ಎಂದು ಹೇಳಿದೆವು. ಕೆಲವು ವಿಭಾಗಗಳು ತೆಗೆದು ಹಾಕಿದವು ಕೂಡ.
ಹಾಗೆ ಮಾಡಿದ್ದರ ಕಾರಣವೆಂದರೆ ಈ ದಿನ ಇದನ್ನು ಮಾಡಬೇಕಾಗಿತ್ತು. ನಾವು ಪ್ರಧಾನ ಮಂತ್ರಿ ಜನಧನ್ ಖಾತೆಗಳನ್ನು ತೆರೆಸಿದಾಗ, ಬಡವರಿಗಾಗಿ ಖಾತೆ ತೆರೆಸಿದಾಗ, ಜೊತೆಯಲ್ಲಿ ಅವರಿಗೆ ಕ್ರೆಡಿಟ್-ಕಾರ್ಡನ್ನೂ ಡೆಬಿಟ್-ಕಾರ್ಡನ್ನೂ ರೂಪೆ ಕಾರ್ಡುಗಳನ್ನೂ ನೀಡಿದ್ದೇವೆ. 20 ಕೋಟಿ ಜನರಿಗೆ ನೀಡಿದ್ದೇವೆ. ಮುಂದೆ ಬಡತನದಲ್ಲಿರುವ ವ್ಯಕ್ತಿಗಳೂ ಕೂಡ ಕಾರ್ಡಿನ ಮುಖಾಂತರ ತಮ್ಮ ವ್ಯವಹಾರಗಳನ್ನು ನಡೆಸುವ ಅಭ್ಯಾಸವಾಗುತ್ತದೆ, ಆದರೆ ನಿಧನಿಧಾನವಾಗಿ. ಇದಕ್ಕೆ ಸಮಯ ಹಿಡಿಯುತ್ತದೆ; ಆದರೆ ಈ ಕೆಲಸವನ್ನು ನಾವು ಎರಡು ವರ್ಷಗಳ ಹಿಂದೆ ಪ್ರಾರಂಭಿಸಿದ್ದೇವೆ ಸೋದರರೇ. ನಾನು ಇದನ್ನು ಇದ್ದಕ್ಕಿದ್ದಂತೆ ಮಾಡಿಲ್ಲ. ಈ ರೋಗ ತುಂಬ ಆಳಕ್ಕೆ ಹರಡಿದೆ. 70 ವರ್ಷಗಳಷ್ಟು ಹಳೆಯ ರೋಗವಿದಯ್ಯಾ. ಮತ್ತೆ ಪ್ರತಿಯೊಬ್ಬರಿಗೂ ಹರಡಿದೆ. ಸೋದರ-ಸೋದರಿಯರೇ, ನಾನೀಗ ಔಷಧಿ ಕೊಡಲು ಪ್ರಾರಂಭಿಸಿದ್ದೇನೆ; ಕ್ರಮಕ್ರಮವಾಗಿ ಹೆಚ್ಚಿಸುತ್ತಾ ಸಾಗಿದ್ದೇನೆ. ಮೊದಲು ಒಂದು dose ನೀಡಿದೆ; ಆಮೇಲೆ ಎರಡನೆಯದನ್ನು ಕೊಟ್ಟೆ; ಈಗ ಇನ್ನೊಂದಕ್ಕೆ ಹೆಚ್ಚಿಸಿದ್ದೇನೆ. ಅಪ್ರಾಮಾಣಿಕ ಜನರು ಮತ್ತು ಅಂತಹವರ ರಕ್ಷಣೆಗೆ ನಿಂತ ಬೇರೆಯವರು ಇದನ್ನು ಕಿವಿ ತೆರೆದು ಕೇಳಿಕೊಳ್ಳಿರಿ; 30 ದಿಸೆಂಬರಿನ ನಂತರ ಮೋದಿ ತಡೆಯುವವನಲ್ಲ.
ಯಾರು ಮೊದಲು ಗಂಗಾ ನದಿಯಲ್ಲಿ ನಾಲ್ಕಾಣೆಯನ್ನೂ ಹಾಕುತ್ತಿರಲಿಲ್ಲವೋ ಈಗ ಅವರು ನೋಟುಗಳನ್ನೇ ಹಾಕುತ್ತಿದ್ದಾರೆ. ನಾನೊಂದು ದಿನ ನೋಡುತ್ತಿದ್ದೆ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುತ್ತಿದ್ದ ಒಬ್ಬ ಮಹಿಳೆ ಹೇಳಿದಳು ತನಗೆ ಕಸ-ಕಡ್ಡಿಗಳ ರಾಶಿಯಲ್ಲಿ 57,000/- ರೂಪಾಯಿಗಳು ಸಿಕ್ಕಿದವೆಂದು; ಪಾಪದವಳು ಪೋಲೀಸ್-ಠಾಣೆಯಲ್ಲಿ ಜಮಾ ಮಾಡಲು ಹೊರಟುಬಿಟ್ಟಳು. ಏಕೆಂದು ಕೇಳಿದರೆ, ಸಾಹೇಬರೇ ಇಷ್ಟೊಂದು ರೂಪಾಯಿಗಳು ಸಿಕ್ಕಿವೆ, ಈಗ ತಾನೆ ನಾನು ಬಂದಾಗ ಪ್ರಭಾಕರರು ಸ್ವಾಗತಕ್ಕಾಗಿ ಹೂವಿನ ಎಸಳುಗಳನ್ನು ಚೆಲ್ಲುತ್ತಿದ್ದರು. [ಅದನ್ನು ಕೇಳಿ] ನಾನು ಹೇಳಿದೆ ಒಬ್ಬ ನಾಯಕ ಬಂದನೆಂದರೆ ಜನರು ಸಾವಿರ ಸಾವಿರ ರೂಪಾಯಿ ನೋಟುಗಳನ್ನೇ ಹರಡಿ ಹರಡಿ ಹಾಕುವ ದಿನಗಳು ದೂರವೇನಿಲ್ಲ. ಸೋದರ-ಸೋದರಿಯರೇ, ಶುದ್ಧೀಕರಿಸುವುದು ಅಗತ್ಯ. ಮತ್ತು ಇದಕ್ಕಾಗಿ ನಿಮ್ಮ ಸಹಾಯ ನನಗೆ ಬೇಕು. ತೊಂದರೆಗಳಾಗುತ್ತವೆ. ತೊಂದರೆಗಳು ಬರುವುದಿಲ್ಲವೆಂದು ನಾನು ಯಾವಾಗಲೂ ಹೇಳಿಲ್ಲ. ನನ್ನ ಸಂಪೂರ್ಣ ಪ್ರಯತ್ನ ಖಂಡಿತವಾಗಿ ಇರುತ್ತದೆ. ನೀವುಗಳು ನೋಡಿ, ಬ್ಯಾಂಕುಗಳಲ್ಲಿ ಬ್ಯಾಂಕಿನ ನೌಕರರು ಒಂದು ವರ್ಷದಲ್ಲಿ ಎಷ್ಟೊಂದು ಕೆಲಸ ಮಾಡುತ್ತಾರಲ್ಲಾ ಅದರಲ್ಲಿ ಅತಿ ಹೆಚ್ಚು ಕೆಲಸವನ್ನು ಈದಿನಗಳಲ್ಲಿ ಮಾಡಿದರೆಂಬುದನ್ನು ನಾನು ನೋಡುತ್ತಿದ್ದೆ. ನಾವೆಲ್ಲರೂ ಬ್ಯಾಂಕಿನ ಎಲ್ಲ ನೌಕರರಿಗಾಗಿ ದೊಡ್ಡ ಚಪ್ಪಾಳೆ ತಟ್ಟೋಣ. ಬ್ಯಾಂಕುಗಳಲ್ಲಿರುವ ನಮ್ಮ ಜನರು ಇವತ್ತು ಎಷ್ಟು ಒಳ್ಳೆಯ ಕೆಲಸವ ನ್ನು ಮಾಡುತ್ತಿದ್ದಾರೆ! ಅವರನ್ನು ನಾವು ಅಭಿನಂದಿಸೋಣ.
75 ವರ್ಷ ವಯಸ್ಸಿನ 70 ವರ್ಷ 60 ವರ್ಷ ವಯಸ್ಸುಗಳ ಬ್ಯಾಂಕುಗಳ ನಿವೃತ್ತ ನೌಕರರು ತಮ್ಮ ಸೇವೆಯನ್ನು ಕೊಡಲು ಮುಂದಾಗಿ ಬ್ಯಾಂಕುಗಳಿಗೆ ಹೋದರೆಂಬುದನ್ನು ನಾನು ನೋಡಿದ್ದೇನೆ. ಅವರುಗಳು ಹೇಳಿದರು, ಸಾಹೇಬರೇ, ಈ ಹೊತ್ತು ನಾವು ಉಚಿತವಾಗಿ ನಮ್ಮ ಸೇವೆ ಬೇಕೆಂದಾದರೂ ಈ ಕೆಲಸ ಮಾಡಲು ತಾವು ಸಿದ್ಧ, ತಮ್ಮ ಬಳಿ ಬ್ಯಾಂಕಿನ ಅನುಭವ ಇದೆ ಎಂದು. ದೇಶದಲ್ಲಿ ಇಂತಹ ಹಲವು ಉದಾಹರನೆಗಳಾದುವು. ಸಾಲಿನಲ್ಲಿ ನಿಂತಿದ್ದ ಹಲವು ನವಯುವಕರು ಅಲ್ಲಿಯೇ ಇದ್ದ ಹಿರಿಯ ನಾಗರೀಕರಿಗಾಗಿ ಮನೆಗಳಿಂದ ಕುರ್ಚಿಗಳನ್ನು ಎತ್ತಿ ತಂದರು, ಅವರು ಕುಳಿಕೊಳ್ಳುವ ವ್ಯವಸ್ಥೆ ಮಾಡಿದರು. ಸಾಲಿನಲ್ಲಿ ನಿಂತ ಜನರಿಗಾಗಿ ಮನೆಗಳಿಂದ ನೀರನ್ನು ತಂದು ಕುಡಿಯಲು ಕೊಡುತ್ತಿದ್ದರು; ನಾನು ಅಂತಹ ಮಾತೆಯರು ಸೋದರಿಯರನ್ನು ನೋಡಿದೆ. ಸೋದರ-ಸೋದರಿಯರೇ, ಸಿನಿಮಾ ಟಾಕೀಸುಗಳ ಹೊರಗೆ ಟಿಕೀಟುಗಳನ್ನು ಕೊಳ್ಳುವಾಗ ಆಗಾಗ ಜಗಳಗಳಾಗುತ್ತವೆ. ಇಂತಹದರಲ್ಲಿ ಇಷ್ಟು ದೊಡ್ಡ ರಾಷ್ಟ್ರ ಶಾಂತಿಯಿಂದ ಸಾಲಿನಲ್ಲಿ ನಿಂತಿದೆ ಮತ್ತು ತಮ್ಮ ಸರದಿಗಾಗಿ ಕಾಯುತ್ತಿದೆ, [ಏಕೆ?] ದೇಶ ಅಪ್ರಾಮಾಣಿಕತೆಯಿಂದ ಬೇಸತ್ತು ಹೋಗಿದೆ.ಸೋದರ-ಸೋದರಿಯರೇ ನೋವಿದೆ, ನನ್ನ ನಿರ್ಣಯದ ಕಾರಣವಾಗಿ ನಿಮಗೆಲ್ಲ pain ಇದೆ;ಆದರೆ ದೇಶಕ್ಕೆ gain ಹೆಚ್ಚು ಹೆಚ್ಚಾಗಿ ಆಗಿದೆ.
ನಾನು ನಿಮಗೆ ಬೆಂಬಲವಾಗಿ ನಿಲ್ಲುತ್ತೇನೆಂದು ಆಶ್ವಾಸನೆ ಕೊಡುತ್ತೇನೆ; ಪ್ರಾಮಾಣಿಕ ಜನರಿಗೆ ನಾನು ಹೇಳು ಬಯಸುತ್ತೇನೆ ಏನೆಂದರೆ ನೀವು ನಿಮ್ಮ ಗಳಿಕೆಯ ಐದುನೂರು ಮತ್ತು ಸಾವಿರ ರೂಪಾಯಿ ನೋಟುಗಳನ್ನು ತರಾತುರಿಯಲ್ಲಿ ಅಪ್ರಾಮಾಣಿಕರಿಗೆ ಕೊಡಬೇಡಿ. ದಿಸೆಂಬರ್ 30ರವರೆಗೆ ನಿಮಗೆ ಸಮಯವಿದೆ. ನಿಮ್ಮ ಐದುನೂರರ ನೋಟನ್ನು ನಾನೂರಕ್ಕೆ ಖರಿದಿಸುವವರು ಸಿಗಬಹುದು ಸಾವಿ ರೂಪಯುನೋಟನ್ನು ಎಂಟುನೂರಕ್ಕೆ ಕೊಳ್ಳುವವರೂ ಇದ್ದಾರೆ. ನಿಮ್ಮ ಐನೂರು ರೂಪಾಯಿ ಎಂದರೆ ಪೂರಾ ನಾನೂರ ತೊಂಬತ್ತೊಂಬತ್ತು ರೂಪಾಯಿ ಮತ್ತು ನೂರು ಪೈಸೆಗಳು; ಅಷ್ಟನ್ನು ಪಡೆಯುವುದು ನಿಮ್ಮ ಹಕ್ಕು ಮತ್ತು ಸರಕಾರ ನಿಮಗೆ ನೀಡಲು ಬದ್ಧವಾಗಿದೆ. ಸಾವಿರ ರೂಪಾಯಿಯ ನಿಮ್ಮ ಗಳಿಕೆಯ ನೋಟು ನಿಮ್ಮ ಹಕ್ಕು, ಸರಕಾರ [ನಿಮಗೆ ನೀಡಲು] ಬದ್ಧವಾಗಿದೆ. 30ನೆಯ ದಿಸೆಂಬರದ ವರೆಗೆ ಈ ಪ್ರಕ್ರಿಯೆ ನಡೆಯುವುದಿದೆ. ಪ್ರಕ್ರಿಯೆ ಸಂತೋಷಜನಕವಾಗುವುದಿದೆ. ಕೆಲವರು ತಮ್ಮ ಇಂತಹ ಹಣವನ್ನು ಗಂಗಾ ನದಿಯಲ್ಲಿ ತೇಲಿಬಿಡಬಹುದು, ಬೇರೆ ಕೆಲವರು ಕಸದ ರಾಶಿಯಲ್ಲಿ ಹಾಕಿಬಿಡಬಹುದು ಕೆಲವರು ಚೂರುಚೂರು ಮಾಡಿ ಬಿಸಾಕಬಹುದು. ಇಷ್ಟೆಲ್ಲ ಆದ ಮೇಲೆ ತನಗಾಗಿ ಒಂದಷ್ಟು ನೋಟುಗಳನ್ನು ಇರಿಸಿಕೊಳ್ಳ ಬಹುದು. ಇಂತಹ ನೋಟುಗಳ ಮೊತ್ತವೇ 200ರಿಂದ 400 ಕೋಟಿವರೆಗೆ ಆಗುತ್ತದೆ. ಆದರೆ ಅವರು ಅದನ್ನು ಬೇರೆ ರಸ್ತೆಯಿಂದ ಬ್ಯಾಂಕಿನಲ್ಲಿ ಜಮಾ ಮಾಡಿ ಪ್ರಾಮಾಣಿಕತೆಯ ನಾಟಕವನ್ನೇನಾದರೂ ಪ್ರಾರಂಭಿಸಿದರೆ ಭಾರತ ಸ್ವತಂತ್ರವಾದಾಗಿನಿಂದ ಇಲ್ಲಿಯವರೆಗಿನ ಅವರ ದಾಖಲೆಗಳನ್ನೆಲ್ಲ ತೆರೆಸಿಟ್ಟು ಬಿಡುತ್ತೇನೆ. [ಸಾಮಾನ್ಯ ರೀತಿಯಲ್ಲಿ] ಶೇ.200ರಷ್ಟು ಬೀಳುವಲ್ಲಿ ಶೇ.200 ದಂಡ ಹಾಕುತ್ತೇನೆ. ಇವರ ಲೂಟಿ ಬಹಳವಾಗಿಬಿಟ್ಟಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಲೂಟಿ ಮಾಡುವವರನ್ನು ನೀವು ಈಗಾಗಲೇ ನೋಡಿದ್ದೀರಿ. 70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಲಾಯಿತು. ನನಗೆ 70 ತಿಂಗಳು ಕೊಡಿ ನಾನು ದೇಶವನ್ನು ಶುದ್ಧೀಕರಿಸುತ್ತೇನೆ. ಮೋದಿ ಏನು ಮಾಡಿದ್ದಾರೆ?! ಜನೆವರಿ 8ನೆಯ ತಾರೀಖೂ 8 ಗಂಟೆಗೆ ಟಿವಿ ಹಾಕಿಕೊಂಡು ನೋಡಿ, ಮೋದಿ ಏನು ಮಾಡಿದರೆಂಬುದು ತಿಳಿಯುತ್ತದೆ.
ನನ್ನ ಪ್ರೀತಿಯ ದೇಶಬಂಧುಗಳೇ, ಕರ್ನಾಟಕದ ನನ್ನ ಸೋದರ ಸೋದರಿಯರೇ, ಮತ್ತು ಇಲ್ಲಿ ಸೇರಿರುವ ಬೇರೆಬೇರೆ ಊರುಗಳ ಜನರೇ, ನಿಮ್ಮೊಡನೆ ನನ್ನದೊಂದು ಪ್ರಾರ್ಥನೆ: ನಾನು ನೆರವೇರಿಸಲು ಹೊರಟಿರುವ ಈ ಪವಿತ್ರ ಕಾರ್ಯಕ್ಕೆ, ದೇಶದಲ್ಲಿ ಪ್ರಾಮಾಣಿಕ ವ್ಯಕ್ತಿಗಳಿಗಾಗಿ ಇದನ್ನು ಮಾಡ ಹೊರಟಿದ್ದೇನೆ; ನಿಮಗೆ ನನ್ನ ಪ್ರಾಮಾಣಿಕತೆಯ ಮೇಲೆ ಭರವಸೆ ಇದ್ದರೆ, ನಿಮಗೆ ನನ್ನ ಕೆಲಸದ ಮೇಲೆ ವಿಶ್ವಾಸವಿದ್ದರೆ, ನಿಮಗೆ ನನ್ನ ಮಾತಿನ ಮೇಲೆ ಭರವಸೆ ಇದ್ದರೆ, ನಾನು ಈಗ ಪ್ರಾರಂಭಿಸಿರುವ ನೋಟುಗಳ ಶುದ್ಧೀಕರಣದ ಚಳುವಳಿಗೆ, ನನಗೆ ನಿಮ್ಮ ಆಶೀರ್ವಾದ ಬೇಕು; [ದಯವಿಟ್ಟು] ಆಶೀರ್ವಾದ ಮಾಡಿ. ನಿಮ್ಮಲ್ಲಿ ವಿನಂತಿ.
ನೀವು ನಿಂತಲ್ಲೇ ಎರಡೂ ಕೈಗಳನ್ನು ಮೇಲೆತ್ತಿ ಹಾಗೆಯೇ ಚಪ್ಪಾಳೆ ತಟ್ಟಿ ನನಗೆ ಆಶೀರ್ವಾದ ಮಾಡಿ. ಈ ಪ್ರಾಮಾಣಿಕ ಮತ್ತು ಪವಿತ್ರ ಕಾರ್ಯಕ್ಕೆ ನಿಂತುಕೊಂಡು ಚಪ್ಪಾಳೆ ತಟ್ಟಿ. ಈ ಏರ್-ಕಂಡೀಶನ್ ಕೊಠಡಿಯಲ್ಲಿ ಕುಳಿತು ದಿನರಾತ್ರಿಯೂ ನನ್ನ ಕಾಲೆಳೆಯುವ ಮಹನೀಯರೇ, ಇಲ್ಲಿರುವವರು ಈ ಊರಿನ ಜನರು ಓದಿಬರೆದು ಮಾಡಿದವರು ಪ್ರಾಮಾಣಿಕತೆಗಾಗಿ ಕಷ್ಟ ಸಹಿಸುವ ಜನರು – ಇವರು ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ಈ ನಿಮ್ಮ ಆಶೀರ್ವಾದ ದೇಶವನ್ನು ಶುದ್ಧೀಕರಿಸಿಯೇ ಬಿಡುತ್ತದೆ. ನಾನು ನಿಮಗೆ ತುಂಬ ತುಂಬಾ ಕೃತಜ್ಞ. ನಿಮಗೆ ನಾನು ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು. ನನಗೆ ಸಂತೋಷದ ವಿಷಯ: ಸಾಮಾನ್ಯ ವಾಗಿ ಪತ್ರಕರ್ತರು ಕುರ್ಚಿಯ ಮೇಲೆ ನಿಂತು ಕೆಲಸಮಾಡುವುದಿಲ್ಲ; ಪತ್ರಕರ್ತರು ಕುರ್ಚಿಯ ಮೇಲೆ ನಿಂತಿರುವುದನ್ನು ನಾನು ಇವತ್ತು ನೋಡುತ್ತಿದ್ದೇನೆ. ನಾನು ನೂರು ನಮಸ್ಕಾರಗಳನ್ನು ಮಾಡುತ್ತೇನೆ, ಇಂದು ಈ ಪತ್ರಕರ್ತರಿಗೆ ನಾನು ನೂರು ನಮನಗಳನ್ನು ಅರ್ಪಿಸುತ್ತೇನೆ. ಇದು ಬಹ:ಳ ದೊಡ್ಡ ಮಾತು.
ಮತ್ತೊಮ್ಮೆ ಕೃತಜ್ಞತೆಗಳನ್ನು ಹೇಳುತ್ತಾ ತಮಗೆಲ್ಲರಿಗೂ ತುಂಬು ಧನ್ಯವಾದಗಳು.
In the 21st century, the youth will take India to new heights. For this, we need skilled youth: PM @narendramodi at Belagavi
— PMO India (@PMOIndia) November 13, 2016
Research and innovation are vital for us: PM @narendramodi
— PMO India (@PMOIndia) November 13, 2016
What was the news in 2012, 2013 and first half of 2014- the scams, the corruption...did you see their condition after 8th November: PM
— PMO India (@PMOIndia) November 13, 2016
This Government will never trouble innocent citizens & at the same time the Government wants to ensure those who are guilty are punished: PM
— PMO India (@PMOIndia) November 13, 2016
Delighted to join the centenary celebrations of Karnatak Lingayat Education Society in Belagavi. Had a very good interaction with students. pic.twitter.com/lgX3XWPn0j
— Narendra Modi (@narendramodi) November 13, 2016
Spoke about the importance of education, research, innovation & highlighted NDA’s efforts to eliminate corruption. https://t.co/oO5yYeXm1z
— Narendra Modi (@narendramodi) November 13, 2016
यह सरकार ईमानदार इंसान को परेशान करना नहीं चाहती, लेकिन बेईमानों को छोड़ना नहीं है। pic.twitter.com/rZJZmv2WPE
— Narendra Modi (@narendramodi) November 13, 2016
I asked the people to bless me & what they did overwhelmed me beyond words. This is a fight for the poor, against those who are corrupt. pic.twitter.com/bvVhYC8BNN
— Narendra Modi (@narendramodi) November 13, 2016