Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಸ್ಟಮ್ಸ್ ವಿಚಾರದಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ತಜಕಿಸ್ತಾನ್ ನಡುವೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ತಜಕಿಸ್ತಾನಗಳ ನಡುವೆ ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

ಈ ಒಪ್ಪಂದವು ಕಸ್ಟಮ್ಸ್ ಅಪರಾಧಗಳ ತನಿಖೆ ಮತ್ತು ತಡೆಗೆ ಸೂಕ್ತ ಮಾಹಿತಿಯ ಲಭ್ಯತೆಗೆ ನೆರವು ನೀಡುತ್ತದೆ. ಈ ಒಪ್ಪಂದವು ವಾಣಿಜ್ಯಕ್ಕೆ ಅವಕಾಶ ನೀಡುವುದಲ್ಲದೆ, ಎರಡೂ ರಾಷ್ಟ್ರಗಳ ನಡುವೆ ವಹಿವಾಟಾದ ಸರಕುಗಳ ಸಮರ್ಥ ವಿಲೇವಾರಿಯ ಖಾತ್ರಿ ಒದಗಿಸುತ್ತದೆ.

ಹಿನ್ನೆಲೆ:

ಈ ಒಪ್ಪಂದವು ಎರಡೂ ರಾಷ್ಟ್ರಗಳ ಕಸ್ಟಮ್ಸ್ ಪ್ರಾಧಿಕಾರಗಳ ನಡುವೆ ಮಾಹಿತಿ ಮತ್ತು ಬೇಹುಗಾರಿಕೆ ವಿನಿಮಯಕ್ಕೆ ಕಾನೂನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ ಮತ್ತು ಕಸ್ಟಮ್ಸ್ ಕಾಯಿದೆಗಳ, ಕಸ್ಟಮ್ಸ್ ಅಪರಾಧಗಳ ತನಿಖೆ ಮತ್ತು ತಡೆಗೆ ಸೂಕ್ತ ಆನ್ವಯಿಕಕ್ಕೆ ನೆರವಾಗುತ್ತದೆ ಮತ್ತು ಕಾನೂನುಬದ್ಧ ವಾಣಿಜ್ಯಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಒಪ್ಪಂದವು ಭಾರತೀಯ ಕಸ್ಟಮ್ಸ್ ಹಿತ ಮತ್ತು ಅಗತ್ಯಗಳನ್ನು ಅದರಲ್ಲೂ ಘೋಷಿಸಿಕೊಂಡ ಕಸ್ಟಮ್ಸ್ ಮೌಲ್ಯದ ನಿಖರತೆ, ಸರಕಿನ ಮೂಲ ಮತ್ತು ಎರಡೂ ರಾಷ್ಟ್ರಗಳ ನಡುವೆ ವಹಿವಾಟಾದ ಸರಕಿನ ದರ ವರ್ಗೀಕರಣ ಮಾಹಿತಿಯ ವಿನಿಮಯ ಕ್ಷೇತ್ರದ ಕಾಳಜಿ ವಹಿಸುತ್ತದೆ.

*****

AKT/VBA/SH