Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂನಲ್ಲಿ ಭಾರತೀಯ ಆರ್ಥಿಕ ಉಪಸ್ಥಿತಿಯ ವೇಗೋತ್ಕರ್ಷಕ್ಕಾಗಿ ಯೋಜನಾಭಿವೃದ್ಧಿ ನಿಧಿ ರಚನೆಗೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂನಲ್ಲಿ ಭಾರತೀಯ ಆರ್ಥಿಕ ಉಪಸ್ಥಿತಿಯ ವೇಗೋತ್ಕರ್ಷಕ್ಕಾಗಿ 500 ಕೋಟಿ ರೂಪಾಯಿಗಳ ಕಾಪು ನಿಧಿಯೊಂದಿಗೆ ಯೋಜನಾಭಿವೃದ್ಧಿ ನಿಧಿ (ಪಿ.ಡಿ.ಎಫ್) ರಚಿಸಲು ತನ್ನ ಅನುಮೋದನೆ ನೀಡಿದೆ.

ಈ ಪಿ.ಡಿ.ಎಫ್. ವಾಣಿಜ್ಯ ಇಲಾಖೆಯಲ್ಲಿರುತ್ತದೆ ಮತ್ತು ಎಕ್ಸಿಮ್ ಬ್ಯಾಂಕ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ. ಪಿ.ಡಿ.ಎಫ್. ನ ಆಡಳಿತವನ್ನು ವಾಣಿಜ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಅಂತರ ಸಚಿವಾಲಯ ಸಮಿತಿ ನಿರ್ವಹಿಸುತ್ತದೆ.

ಹಿನ್ನೆಲೆ:

ಸಿ.ಎಲ್.ಎಂ.ವಿ. ರಾಷ್ಟ್ರಗಳು ಅಂದರೆ ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂಗಳು ಪ್ರಾದೇಶಿಕ ಮೌಲ್ಯದ ಸರಣಿಯಲ್ಲಿ ವಿಶಿಷ್ಠ ಸ್ಥಾನ ಹೊಂದಿವೆ ಮತ್ತು ಚೀಣಾ/ಇಯುಗೆ ಮತ್ತು ವಿವಿಧ ವಾಣಿಜ್ಯ ಒಪ್ಪಂದಗಳಿಂದ ಇತರ ಮಾರುಕಟ್ಟೆಗಳಿಗೆ ಮಾರುಕಟ್ಟೆಯ ಪ್ರವೇಶದ ಆಹ್ವಾನ ನೀಡುತ್ತವೆ. ಭಾರತವನ್ನು ಪ್ರಾದೇಶಿಕ ಮೌಲ್ಯದ ಸರಣಿಯಲ್ಲಿ ತರುವುದರಿಂದ ಆಗುವ ಪ್ರಮುಖ ಲಾಭವೆಂದರೆ, ಭಾರತದ ಕಚ್ಚಾ ವಸ್ತುಗಳಿಗೆ ಮತ್ತು ಮಧ್ಯವರ್ತಿ ಸರಕುಗಳಿಗೆ ಭಾರತೀಯ ಉದ್ಯಮಗಳಿಗೆ ನಿರ್ದಿಷ್ಟ ಮೂಲದ ಕಚ್ಚಾ ಪದಾರ್ಥಗಳ ಜೊತೆಗೆ ದೀರ್ಘಕಾಲೀನ ಆಧಾರದ ಮತ್ತು ನಿರ್ದಿಷ್ಟ ಮಾರುಕಟ್ಟೆ ಲಭಿಸುತ್ತದೆ. ಈ ಮಧ್ಯೆ ಸಿಎಲ್.ಎಂ.ವಿ. ವಲಯದಲ್ಲಿ ಅವಕಾಶಗಳು ಹೇರಳವಾಗಿವೆ, ಭಾರತೀಯ ಉದ್ದಿಮೆದಾರರು, ಈ ದೇಶಗಳ ಪ್ರಯತ್ನಶೀಲರು ಸೀಮಿತ ಮಾಹಿತಿ, ಮೂಲಸೌಕರ್ಯ ಮತ್ತು ಇತರ ಸಂಭವನೀಯ ಅಪಾಯಗಳಿಂದಾಗಿ ಅವರ ಅವಕಾಶಗಳೂ ಸೀಮಿತವಾಗಿದ್ದವು. ಪಿಡಿಎಫ್ ಭಾರತೀಯ ಕೈಗಾರಿಕಾ ಸಮುದಾಯಕ್ಕೆ ಜಾಗತಿಕ ಉತ್ಪಾದನಾ ಜಾಲದೊಂದಿಗೆ ಸೇರ್ಪಡೆ ಹೊರತಾಗಿ ವಾಣಿಜ್ಯ ವಿಸ್ತರಣೆಗೆ ಮತ್ತು ಸ್ಪರ್ಧಾತ್ಮಕ ದರದ ಸರಬರಾಜು ಸರಣಿಯ ನಿರ್ವಹಣೆಯ ಲಾಭ ಒದಗಿಸುತ್ತದೆ.

*****

 AKT/AD/SH