ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಮನ್ ವೆಲ್ತ್ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚು ಗೆದ್ದ ದೀಪಕ್ ಲಾಥರ್ ಅವರನ್ನು ಅಭಿನಂದಿಸಿದ್ದಾರೆ.
“ನಮ್ಮ ವೈಟ್ ಲಿಫ್ಟರುಗಳು ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ ! ನನ್ನ ಯುವ ಸ್ನೇಹಿತರಾದ ದೀಪಕ್ ಲಾಥರ್ ಪುರುಷರ 69 ಕಿಲೋ ಗ್ರಾಮ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ. ಈ ಯುವಕನಿಗೆ ಅಭಿನಂದನೆಗಳು ಮತ್ತು ಆತನ ಭವಿಷ್ಯದ ಎಲ್ಲಾ ಸಾಧನೆಗಳಿಗೆ ಶುಭ ಹಾರೈಕೆಗಳು “ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.
ಗೋಲ್ಡ್ ಕೋಸ್ಟ್ ನಲ್ಲಿ 69 ಕಿಲೋ ಗ್ರಾಂ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ದೀಪಕ್ ಲಾಥರ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ವೈಟ್ ಲಿಫ್ಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
Our weightlifters are in superb form! My young friend Deepak Lather wins a Bronze in the Men's 69 kg category. Congratulations to this youngster and all the best for his future endeavours: PM @narendramodi #GC2018 @GC2018 pic.twitter.com/H93XVJnFhh
— PMO India (@PMOIndia) April 6, 2018