Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾರ್ಗಿಲ್ ವಿಜಯ್ ದಿವಸದಂದು ಧೀರ ಯೋಧರಿಗೆ ತಲೆಬಾಗಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಾರ್ಗಿಲ್ ವಿಜಯ ದಿವಸದಂದು ಭಾರತಕ್ಕಾಗಿ ಹೋರಾಡಿದ ಎಲ್ಲ ವೀರ ಯೋಧರಿಗೆ ತಲೆ ಬಾಗಿದ್ದಾರೆ.

“ಕಾರ್ಗಿಲ್ ವಿಜಯ್ ದಿವಸದಂದು ನಾನು ಭಾರತಕ್ಕಾಗಿ ಕೊನೆಯ ಉಸಿರು ಇರುವ ತನಕ ಹೋರಾಟ ನಡೆಸಿದ ಎಲ್ಲ ಧೀರ ಯೋಧರಿಗೆ ತಲೆಬಾಗುತ್ತೇನೆ. ಅವರ ಐತಿಹಾಸಿಕ ಬಲಿದಾನ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ.

ಒಳ ನುಸುಳುಕೋರರಿಗೆ ಮರೆಯಲಾರದ ಮತ್ತು ತಕ್ಕ ಉತ್ತರ ನೀಡಿದ ನಮ್ಮ ಧೈರ್ಯಶಾಲಿ ಯೋಧರನ್ನು ಭಾರತ ಎಂದೆಂದಿಗೂ ಮರೆಯುವುದಿಲ್ಲ.

ನಮಗೆ ಅರ್ಹ ಕಾರ್ಗಿಲ್ ವಿಜಯದ ಖಾತ್ರಿ ಒದಗಿಸಿದ 1999ರಲ್ಲಿನ ಭಾರತದ ರಾಜಕೀಯ ನಾಯಕತ್ವದ ದೃಢ ನಿಲುವಿನ ಪ್ರದರ್ಶನವನ್ನೂ ನಾವು ಹೆಮ್ಮೆಯಿಂದ ಸ್ಮರಿಸುತ್ತೇವೆ,” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.