ಪಿಎಂಇಂಡಿಯಾ
ಕಾರ್ಗಿಲ್ ವಿಜಯ ದಿವಸದಂದು, ನಮ್ಮ ರಾಷ್ಟ್ರವು ಧೈರ್ಯಶಾಲಿ ಯೋಧರ ಅಸಾಧಾರಣ ಧೈರ್ಯ ಮತ್ತು ಭಾರತವನ್ನು ಸುರಕ್ಷಿತಗೊಳಿಸುವ ಬದ್ಧತೆಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಅತ್ಯಂತ ಭೀಕರ ಪರಿಸ್ಥಿತಿಗಳನ್ನು ಎದುರಿಸಿದ ಅವರ ಶೌರ್ಯ ಎಂದೆಂದಿಗೂ ರಾಷ್ಟ್ರೀಯ ಹೆಮ್ಮೆಯ ಮೂಲವಾಗಿ ಉಳಿಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರ ಅಚಲ ದೇಶಭಕ್ತಿ ಮತ್ತು ಕರ್ತವ್ಯದ ಮೇಲಿನ ಶ್ರದ್ಧೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಅವರು ತಿಳಿಸಿದರು.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹಂಚಿಕೊಂಡಿದ್ದಾರೆ:
“ಕಾರ್ಗಿಲ್ ವಿಜಯ್ ದಿವಸ್, ನಮ್ಮ ರಾಷ್ಟ್ರವು ಧೈರ್ಯಶಾಲಿ ಸೈನಿಕರ ಅಸಾಧಾರಣ ಧೈರ್ಯ ಮತ್ತು ಭಾರತವನ್ನು ಸುರಕ್ಷಿತಗೊಳಿಸುವ ಬದ್ಧತೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಅತ್ಯಂತ ಭೀಕರ ಪರಿಸ್ಥಿತಿಗಳ ನಡುವೆಯೂ ಅವರ ಶೌರ್ಯ ಎಂದೆಂದಿಗೂ ರಾಷ್ಟ್ರೀಯ ಹೆಮ್ಮೆಯ ಮೂಲವಾಗಿ ಉಳಿಯುತ್ತದೆ. ಅವರ ಅಚಲ ದೇಶಭಕ್ತಿ ಮತ್ತು ಕರ್ತವ್ಯದ ಮೇಲಿನ ಶ್ರದ್ಧೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.”
*****
On Kargil Vijay Diwas, our nation expresses gratitude to the brave soldiers for their extraordinary courage and commitment towards securing India. Their valour in the face of the most formidable conditions will forever remain a source of national pride. Their unwavering…
— Narendra Modi (@narendramodi) July 26, 2026