Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳುನಾಡು ದಿನದಂದು ತಮಿಳುನಾಡಿನ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡು ದಿನದ ಸಂದರ್ಭದಲ್ಲಿ ತಮಿಳುನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ತಮಿಳುನಾಡಿನ ಕಠಿಣ ಪರಿಶ್ರಮಿ ಮತ್ತು ಉದ್ಯಮಶೀಲ ಜನರು ಭಾರತದ ಪ್ರಗತಿಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ್ದಾರೆ ಎಂದು ಶ್ರೀ ಮೋದಿ ಶ್ಲಾಘಿಸಿದ್ದಾರೆ. ಉತ್ಪಾದನೆ, ವಾಹನಗಳು ಮತ್ತು ಜವಳಿಗಳಿಂದ ಹಿಡಿದು ವಿದ್ಯುನ್ಮಾನ, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಉದಯೋನ್ಮುಖ ಕೈಗಾರಿಕೆಗಳವರೆಗೆ, ರಾಜ್ಯವು ನಾವಿನ್ಯತೆ, ಕೌಶಲ್ಯ ಮತ್ತು ಕೈಗಾರಿಕಾ ಉತ್ಕೃಷ್ಟತೆಯ ಮೂಲಕ ತನ್ನನ್ನು ತಾನು ಗುರುತಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

“ತಮಿಳುನಾಡಿನ ಜನರು ತಮ್ಮ ಸಾಂಸ್ಕೃತಿಕ ಅಸ್ಮಿತೆ ಮತ್ತು ಸಂಪ್ರದಾಯಗಳ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದಾರೆ. ತಮಿಳು ಸಂಸ್ಕೃತಿಯು ನಮ್ಮ ರಾಷ್ಟ್ರದ ನಾಗರಿಕ ಪ್ರಯಾಣವನ್ನು ಅಸಂಖ್ಯಾತ ರೀತಿಯಲ್ಲಿ ಶ್ರೀಮಂತಗೊಳಿಸಿದೆ,” ಎಂದು ಶ್ರೀ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿಯವರು ಈ ಬಗ್ಗೆ ʻಎಕ್ಸ್‌ʼ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ತಮಿಳುನಾಡು ದಿನದ ವಿಶೇಷ ಸಂದರ್ಭದಲ್ಲಿ ತಮಿಳುನಾಡಿನ ಜನತೆಗೆ ಹಾರ್ದಿಕ ಶುಭಾಶಯಗಳು!

ತಮಿಳುನಾಡಿನ ಕಠಿಣ ಪರಿಶ್ರಮಿ ಮತ್ತು ಉದ್ಯಮಶೀಲ ಜನರು ಭಾರತದ ಪ್ರಗತಿಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ್ದಾರೆ. ಉತ್ಪಾದನೆ, ವಾಹನಗಳು ಮತ್ತು ಜವಳಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಉದಯೋನ್ಮುಖ ಕೈಗಾರಿಕೆಗಳವರೆಗೆ, ರಾಜ್ಯವು ನಾವೀನ್ಯತೆ, ಕೌಶಲ್ಯ ಮತ್ತು ಕೈಗಾರಿಕಾ ಉತ್ಕೃಷ್ಟತೆಯ ಮೂಲಕ ತನ್ನನ್ನು ತಾನು ಗುರುತಿಸಿಕೊಂಡಿದೆ.

ತಮಿಳುನಾಡಿನ ಜನರು ತಮ್ಮ ಸಾಂಸ್ಕೃತಿಕ ಅಸ್ಮಿತೆ ಮತ್ತು ಸಂಪ್ರದಾಯಗಳ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದಾರೆ. ತಮಿಳು ಸಂಸ್ಕೃತಿಯು ನಮ್ಮ ರಾಷ್ಟ್ರದ ನಾಗರಿಕತೆಯ ಪ್ರಯಾಣವನ್ನು ಅಸಂಖ್ಯಾತ ರೀತಿಯಲ್ಲಿ ಶ್ರೀಮಂತಗೊಳಿಸಿದೆ.

ಈ ಸಂದರ್ಭವು ಮುಂದಿನ ದಿನಗಳಲ್ಲಿ ತಮಿಳುನಾಡಿನ ಪ್ರತಿಯೊಬ್ಬ ವ್ಯಕ್ತಿಗೂ ಸಂತೋಷ, ಯಶಸ್ಸು ಮತ್ತು ಹೊಸ ಅವಕಾಶಗಳನ್ನು ತರಲಿ.

தமிழ்நாட்டு மக்கள் அனைவருக்கும் இந்த சிறப்பான தமிழ்நாடு தினத்தில் மனம் நிறைந்த  நல்வாழ்த்துகள்!

தொழில்முனைவோடு கடின உழைப்பும் மிக்கவர்களாய் விளங்கும் தமிழ்நாட்டு மக்கள் இந்தியாவின் வளர்ச்சிக்கு மகத்தான பங்களிப்பை வழங்கியுள்ளனர். உற்பத்தித் துறை முதல் வாகனங்கள் மற்றும் ஜவுளித்துறை, மின்னணுவியல், விண்வெளி தொழில்நுட்பம், மருத்துவம் மற்றும் வளர்ந்துவரும் தொழில்துறைகள் வரை, தமிழகம் தனித்துவமிக்க கண்டுபிடிப்பு, திறன் மற்றும் தொழில்துறை சிறப்புகளை தன்னகத்தே கொண்டு சிறந்து விளங்குகிறது.

தமிழ்நாட்டு மக்கள் தங்கள் பண்பாடு, தனித்துவம் மற்றும் பாரம்பரியம் குறித்து பெருமிதம் கொள்கின்றனர். தமிழ் கலாச்சாரம் நம் நாட்டின் நாகரிகப் பயணத்தைப் பல வழிகளில் செழுமையாக்கியுள்ளது.

இந்த நன்னாள் தமிழ்நாட்டில் உள்ள ஒவ்வொருவருக்கும் இன்றும் வரும் காலங்களிலும் மகிழ்ச்சியையும், வெற்றியையும், புதிய வாய்ப்புகளையும் வாரி வழங்கட்டும்.

 

*****