Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೀಡಾನ್‌ರೆನ್ ಉದ್ಯಮ ಭೋಜನಕೂಟದಲ್ಲಿ ಪ್ರಧಾನ ಮಂತ್ರಿ ಶ್ರೀ . ನರೇಂದ್ರ ಮೋದಿ ಅವರ ಭಾಷಣ: (ನವೆಂಬರ್ ೧೧ , ೨೦೧೬ )

ಕೀಡಾನ್‌ರೆನ್ ಉದ್ಯಮ ಭೋಜನಕೂಟದಲ್ಲಿ ಪ್ರಧಾನ ಮಂತ್ರಿ  ಶ್ರೀ . ನರೇಂದ್ರ ಮೋದಿ  ಅವರ ಭಾಷಣ: (ನವೆಂಬರ್ ೧೧ , ೨೦೧೬ )


ಈ ಅದ್ಭುತ ದೇಶವನ್ನು ಮತ್ತೊಮ್ಮೆ ಸಂದರ್ಶಿಸಲು ನಾನು ಹರ್ಷಿಸುತ್ತೇನೆ. ಎಷ್ಟೊಂದು ಪರಿಚಿತ ಮುಖಗಳನ್ನು ನೋಡುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಈ ಅವಕಾಶವನ್ನು ಸೃಷ್ಟಿಸುವುದಕ್ಕಾಗಿ ಸಿಐಐ ಮತ್ತು ಕೀಡಾನ್‌ರೆನ್‌ಗಳಿಗೆ ನಾನು ವಂದನೆ ಸಲ್ಲಿಸುತ್ತೇನೆ. ನಿಮ್ಮೊಂದಿಗೆ ನನ್ನ ಭೇಟಿಗಳನ್ನು ಬಹಳ ಉಪಯೋಗಿ ಎಂದು ನಾನು ಯಾವಾಗಲೂ ಪರಿಗಣಿಸಿದ್ದೇನೆ.

ಕಳೆದ ವರ್ಷಗಳಲ್ಲಿ ನಾನು ಜಪಾನ್‌ಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಜಪಾನ್‌ನ ನಾಯಕತ್ವ, ಸರ್ಕಾರ, ಕೈಗಾರಿಕೆ ಮತ್ತು ಜನರೊಂದಿಗೆ ನನ್ನ ವೈಯಕ್ತಿಕ ಸಂಪರ್ಕ ಸುಮಾರು ದಶಕಗಳಿಗೂ ಹೆಚ್ಚು ಹಳೆಯದಾಗಿದೆ.

ಮಿತ್ರರೇ,

“ಜಪಾನ್” ಎಂಬ ಹೆಸರೇ ಭಾರತದಲ್ಲಿ ಗುಣಮಟ್ಟ, ಉತ್ಕೃಷ್ಟತೆ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಹೆಗ್ಗುರುತಾಗಿದೆ.
ಜಪಾನಿ ಜನರು ಸುಸ್ಥಿರ ಅಭಿವೃದ್ಧಿಯಲ್ಲಿ ಜಗತ್ತಿನ ನೇತೃತ್ವ ವಹಿಸಿದ್ದಾರೆ. ಸಾಮಾಜಿಕ ಜವಾಬ್ದಾರಿ ಮತ್ತು ನೀತಿಯುತ ನಡವಳಿಕೆಯ ಆಳವಾದ ಪ್ರಜ್ಞೆ ಇಲ್ಲಿದೆ.

ವಿಶೇಷವಾಗಿ ಏಷ್ಯಾ ಮತ್ತು ಆಫ್ರಿಕಾ ಸೇರಿದಂತೆ ಜಗತ್ತಿನ ಇತರೆ ಭಾಗಗಳಲ್ಲಿ ಅಭಿವೃದ್ದಿಯ ಪ್ರಕ್ರಿಯೆಗಳಿಗೆ ಜಪಾನ್‌ನ ಅಪಾರ ಕೊಡುಗೆಗಳ ಬಗ್ಗೆ ನಾವು ಪರಿಚಿತರಾಗಿದ್ದೇವೆ.

ನಮ್ಮ ನಾಗರಿಕತೆಯ ಪರಂಪರೆಯಲ್ಲಿ ಭಾರತದ ಮೂಲ ಮೌಲ್ಯಗಳ ಬೇರುಗಳಿವೆ. ಗೌತಮಬುದ್ಧ ಮತ್ತು ಮಹಾತ್ಮಗಾಂಧಿಯವರ ಸತ್ಯದ ಬೋಧನೆಗಳ ಮೂಲಕ ಇದು ಸ್ಫೂರ್ತಿ ಪಡೆಯುತ್ತಿದೆ. ಸಂಪತ್ತು ಮತ್ತು ಮೌಲ್ಯ ಸೃಷ್ಟಿಯ ಮೇಲೆ ಒತ್ತು ನೀಡುವುದು, ಉದ್ಯಮಶೀಲತೆಯ ದೃಢವಾದ ಪ್ರಜ್ಞೆ ಮತ್ತು ತನ್ನ ಆರ್ಥಿಕ ಸ್ಥಿತಿಯನ್ನು ಸಮೃದ್ಧಿಗೊಳಿಸುವ ಮತ್ತು ಆಧುನೀಕರಿಸುವ ಅನ್ವೇಷಣೆ ಅಲ್ಲದೆ, ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳಿಂದ ಅದು ತನ್ನ ರೆಕ್ಕೆಗಳನ್ನು ಪಡೆದಿದೆ.

ಇದೇ ಕಾರಣ ಭಾರತ ಮತ್ತು ಜಪಾನ್ ಜೊತೆಯಾಗಿ ಕೆಲಸ ಮಾಡಲು ಸೂಕ್ತ ರೀತಿಯಲ್ಲಿ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತವೆ.

ವಾಸ್ತವವಾಗಿ;

ನಾವು ಜೊತೆಯಾಗಿ ನಿಲ್ಲಲು ನಮ್ಮ ಭೂತಕಾಲ ಬಯಸಿದೆ.

ನಾವು ಒಟ್ಟುಗೂಡಿ ಕೆಲಸ ಮಾಡಲು ನಮ್ಮ ವರ್ತಮಾನ ಪ್ರೋತ್ಸಾಹಿಸುತ್ತಿದೆ.

ಮಿತ್ರರೇ,

ಈ 21ನೇ ಶತಮಾನ ಏಷ್ಯಾದ ಶತಮಾನ ಎಂದು ನಾನು ಹೇಳುತ್ತಲೇ ಇದ್ದೇನೆ. ಜಾಗತಿಕ ಬೆಳವಣಿಗೆಯ ನೂತನ ಕೇಂದ್ರವಾಗಿ ಏಷ್ಯಾ ಹೊರಹೊಮ್ಮಿದೆ. ಉತ್ಪಾದನೆ ಮತ್ತು ಸೇವೆಗಳಲ್ಲಿ ಇದು ಸ್ಪರ್ಧಾತ್ಮಕವಾಗಿದೆ. ಜಾಗತಿಕ ನವೀನತೆಯ ಕೇಂದ್ರವಾಗುತ್ತಿದೆ. ಪ್ರತಿಭಾನ್ವಿತ ಕಾರ‍್ಯಪಡೆಯ ಕೇಂದ್ರವಾಗಿದೆ ಮತ್ತು ಜಾಗತಿಕ ಜನಸಂಖ್ಯೆಯ
ಶೇ.೬೦ರಷ್ಟು ಜನರ ಮನೆಯಾಗಿದೆ. ಅಲ್ಲದೆ, ಅದು ಸತತವಾಗಿ ವಿಸ್ತಾರವಾಗುತ್ತಿರುವ ಮಾರುಕಟ್ಟೆಯಾಗಿದೆ.

ಭಾರತ ಮತ್ತು ಜಪಾನ್, ಏಷ್ಯಾ ಪ್ರವರ್ಧಮಾನಕ್ಕೆ ಬರುವಲ್ಲಿ ಪ್ರಮುಖಪಾತ್ರ ವಹಿಸುವುದನ್ನು ಮುಂದುವರಿಸಬೇಕಿದೆ. ಪ್ರಾದೇಶಿಕ, ಆರ್ಥಿಕ ಸ್ಥಿತಿ ಮತ್ತು ಅಭಿವೃದ್ಧಿಗೆ ಚಾಲನೆ ನೀಡಲು ಮತ್ತು ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕೆ ನಮ್ಮ ವಿಶೇಷ ಯೋಜನಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಗಳ ಅಡಿಯ ಜಪಾನ್ ಮತ್ತು ಭಾರತದ ನಡುವಿನ ಬೆಳೆಯುತ್ತಿರುವ ದೃಷ್ಟಿಕೋನಗಳ ಒಗ್ಗೂಡಿಕೆ ಸಾಮರ್ಥ್ಯ ಹೊಂದಿದೆ.

ಶಕ್ತಿಶಾಲಿ ಭಾರತ -ಶಕ್ತಿಶಾಲಿ ಜಪಾನ್ ನಮ್ಮ ಎರಡೂ ದೇಶಗಳನ್ನು ಸಮೃದ್ಧಿಗೊಳಿಸುವುದು ಮಾತ್ರವಲ್ಲದೆ, ಇದು ಏಷ್ಯಾ ಮತ್ತು ಜಗತ್ತನ್ನು ಸ್ಥಿರಗೊಳಿಸುವ ಅಂಶವಾಗಿದೆ.

ಮಿತ್ರರೇ,

ಇಂದು, ಭಾರತ ಅನೇಕ ಪ್ರಮುಖ ಪರಿವರ್ತನೆಗಳ ಹಾದಿಯಲ್ಲಿದೆ. ತನ್ನ ಸಾಮರ್ಥ್ಯವನ್ನು ನಿಜವಾಗಿಸುವಲ್ಲಿ ಭಾರತಕ್ಕೆ ಸಹಾಯ ಮಾಡುವಂತಹ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನಾವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದೇವೆ. ಇದರ ಫಲಿತಾಂಶಗಳು ಈಗಾಗಲೇ ಗೋಚರಿಸಲಾರಂಭಿಸಿವೆ.

ದುರ್ಬಲ ಅಂತಾರಾಷ್ಟ್ರೀಯ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿಯೂ ಶಕ್ತಿಶಾಲಿ ಬೆಳವಣಿಗೆ ಮತ್ತು ಅಪಾರ ಅವಕಾಶಗಳು ಭಾರತದಿಂದ ಬರುವ ಸುದ್ದಿಯಾಗಿವೆ. ನಂಬಲಾಗದ ಅವಕಾಶಗಳು ಮತ್ತು ಭಾರತದ ನಂಬಿಕಾರ್ಹ ನೀತಿಗಳು ಇದರಲ್ಲಿ ಸೇರಿವೆ.

2015ರಲ್ಲಿ ಭಾರತದ ಆರ್ಥಿಕ ಸ್ಥಿತಿ ಇತರೆ ಪ್ರಮುಖ ಆರ್ಥಿಕ ಸ್ಥಿತಿಗಳಿಗಿಂತ ವೇಗವಾಗಿ ಬೆಳೆದಿದೆ. ಇದೇ ಒಲವು ಮುಂದುವರಿಯುವ ಮೌಲ್ಯಮಾಪನವನ್ನು ವಿಶ್ವಬ್ಯಾಂಕ್ ಮತ್ತು ಐಎಂಎಫ್ ನೀಡಿವೆ. ಕಡಿಮೆ ಕಾರ್ಮಿಕ ವೆಚ್ಚಗಳು, ಬೃಹತ್ ಸ್ವದೇಶಿ ಮಾರುಕಟ್ಟೆ ಮತ್ತು ಬೃಹತ್ ಆರ್ಥಿಕ ಸ್ಥಿರತೆಗಳು ಒಂದಾಗಿ ಭಾರತವನ್ನು ಅತ್ಯಂತ ಆಕರ್ಷಕ ಹೂಡಿಕೆ ಗುರಿಯಾಗಿ ಮಾಡಿವೆ.

ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ನಾವು ಸುಮಾರು 55 ಶತಕೋಟಿ ಡಾಲರ್‌ಗಳನ್ನು ವಿದೇಶಿ ನೇರ ಬಂಡವಾಳವಾಗಿ ಸ್ವೀಕರಿಸಿದ್ದೇವೆ. ಇದು ಭಾರತದಲ್ಲಿ ಇದುವರೆಗಿನ ಅತ್ಯಂತ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆ ಮಾತ್ರವಲ್ಲದೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಅತ್ಯುನ್ನತ ಬೆಳವಣಿಗೆಯಾಗಿದೆ.

ಇಂದು, ಪ್ರತಿ ಜಾಗತಿಕ ಕಂಪನಿ ಭಾರತದ ಯೋಜನೆ ಒಳಗೊಂಡಿದೆ. ಮತ್ತು ಜಪಾನ್‌ನ ಕಂಪನಿಗಳು ಇದಕ್ಕೆ ಹೊರತಾಗಿಲ್ಲ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಇಂದು ಜಪಾನ್ ಭಾರತದ ನಾಲ್ಕನೇ ಅತ್ಯಂತ ದೊಡ್ಡ ಮೂಲ ಎಂಬುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಗ್ರೀನ್ ಫೀಲ್ಡ್ (ದೇಶದ ಹೊರಗಿನ ಕಂಪನಿಯೊಂದು ನೂತನ ಸೌಲಭ್ಯಗಳನ್ನು ನಿರ್ಮಿಸುವುದರೊಂದಿಗೆ ಯೋಜನೆಗಳನ್ನು ಆರಂಭಿಸುವುದು) ಮತ್ತು ಬ್ರೌನ್ ಫೀಲ್ಡ್ (ನೂತನ ಉತ್ಪಾದನೆಯನ್ನು ಆರಂಭಿಸಲು ದೇಶದ ಹೊರಗಿನ ಸಂಸ್ಥೆಯೊಂದು ಇಲ್ಲಿ ಪ್ರಸ್ತುತ ಸೌಲಭ್ಯವನ್ನು ಖರೀದಿಸಿ ಕಾರ‍್ಯಾರಂಭ ಮಾಡುವುದು.) ಯೋಜನೆಗಳು; ಉತ್ಪಾದನೆ ಮತ್ತು ಸೇವೆಗಳು; ಮೂಲಸೌಕರ್ಯ ಮತ್ತು ವಿಮೆ; ಮತ್ತು ವಿದ್ಯುನ್ಮಾನ ವಾಣಿಜ್ಯ ಮತ್ತು ಷೇರುಗಳಲ್ಲಿ ಹೂಡಿಕೆ ಕ್ಷೇತ್ರಗಳಿಗೆ ಜಪಾನಿ ಹೂಡಿಕೆಗಳು ವಿಸ್ತರಿಸಿವೆ.
ಇನ್ನು ಬಹಳಷ್ಟು ಹೆಚ್ಚಿನ ಜಪಾನಿ ಹೂಡಿಕೆಗಳ ಹರಿವನ್ನು ನಾವು ಬಯಸುತ್ತೇವೆ. ಇದಕ್ಕಾಗಿ ನಾವು ಸಕ್ರಿಯವಾಗಿ ನಿಮ್ಮ ಕಾಳಜಿಗಳ ಕಡೆಗೆ ಗಮನಹರಿಸುತ್ತೇವೆ ಮತ್ತು ಜಪಾನಿ ಕೈಗಾರಿಕಾ ಪಟ್ಟಣಗಳನ್ನು ಒಳಗೊಂಡು ವಿಶೇಷ ಯಾಂತ್ರಿಕ ವ್ಯವಸ್ಥೆಗಳನ್ನು ನಾವು ಮತ್ತಷ್ಟು ಸದೃಢಗೊಳಿಸಲಿದ್ದೇವೆ.

ಜಪಾನಿ ಪ್ರವಾಸಿಗರಿಗೆ ನಾವು ಕೊಡುಗೆಯಾಗಿ ನೀಡುತ್ತಿರುವ ವೀಸಾ ಆನ್ ಅರೈವಲ್(ದೇಶಕ್ಕೆ ಬಂದ ತಕ್ಷಣ ವೀಸಾ ನೀಡಿಕೆ), ಇ-ಟೂರಿಸ್ಟ್ ವೀಸಾ ಮತ್ತು 10 ವರ್ಷದ ಉದ್ಯಮ ವೀಸಾಗಳನ್ನು ಬಳಸಿಕೊಳ್ಳಲು ನಾನು ನಿಮಗೆ ಪ್ರೋತ್ಸಾಹ ನೀಡುತ್ತೇನೆ. ಜಪಾನ್‌ನೊಂದಿಗೆ ಸಾಮಾಜಿಕ ಭದ್ರತಾ ಒಪ್ಪಂದವನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ. ಇದು ಉಭಯ ಪಕ್ಷದ ಹೆಚ್ಚುತ್ತಿರುವ ಸಂಖ್ಯೆಯ ವೃತ್ತಿಪರರಿಗೆ ಒಳ್ಳೆಯ ಸುದ್ದಿಯಾಗಿದೆ.

ಮಿತ್ರರೇ,

ಭಾರತದ ಅಭಿವೃದ್ಧಿ ಅಗತ್ಯಗಳು ಬೃಹತ್ ಮತ್ತು ಗಣನೀಯವಾಗಿವೆ. ನಮ್ಮ ಅಭಿವೃದ್ಧಿ ಆದ್ಯತೆಗಳ ಕ್ಷಿಪ್ರ ಸಾಧನೆಯನ್ನು ನಾವು ಅರಸುತ್ತೇವೆ. ಆದರೆ, ಇದು ಪರಿಸರಸ್ನೇಹಿಯಾಗಿರಬೇಕೆಂದು ಬಯಸುತ್ತೇವೆ.

ರಸ್ತೆ ಮತ್ತು ರೈಲ್ವೆ ಮಾರ್ಗಗಳನ್ನು ನಾವು ಇನ್ನಷ್ಟು ಕ್ಷಿಪ್ರಗತಿಯಲ್ಲಿ ನಿರ್ಮಿಸಲು ಇಚ್ಛಿಸುತ್ತೇವೆ.
ಖನಿಜಗಳು ಮತ್ತು ಹೈಡ್ರೋಕಾರ್ಬನ್‌ಗಳನ್ನು ಹಸಿರು ಮಾರ್ಗದಲ್ಲಿ ಆವಿಷ್ಕರಿಸಲು ನಾವು ಇಚ್ಛಿಸುತ್ತೇವೆ.

ಬುದ್ಧಿವಂತ ರೀತಿಯಲ್ಲಿ ಮನೆಗಳು ಮತ್ತು ನಾಗರಿಕ ಸೌಲಭ್ಯಗಳನ್ನು ನಿರ್ಮಿಸಲು ನಾವು ಇಚ್ಛಿಸುತ್ತೇವೆ. ಮತ್ತು
ನಾವು ಹೆಚ್ಚು ಶುದ್ಧವಾದ ರೀತಿಯಲ್ಲಿ ಶಕ್ತಿ (ವಿದ್ಯುತ್) ಉತ್ಪಾದಿಸಲು ಇಚ್ಛಿಸುತ್ತೇವೆ.

ಹೆಚ್ಚುವರಿಯಾಗಿ ಎರಡನೇ ಪೀಳಿಗೆಯ ಭವಿಷ್ಯದ ಮೂಲಸೌಕರ್ಯ ಯೋಜನೆಗಳು ಇದ್ದು ಅವುಗಳಲ್ಲಿ: ಬದ್ಧತೆಯ ಸರಕು ಸಾಗಣೆ ವಲಯ, ಕೈಗಾರಿಕಾ ವಲಯಗಳು, ಉನ್ನತ ವೇಗದ ರೈಲು ಮಾರ್ಗಗಳು, ಸ್ಮಾರ್ಟ್ ನಗರಗಳು, ಕರಾವಳಿ ವಲಯಗಳು ಮತ್ತು ಮೆಟ್ರೋ ರೈಲು ಯೋಜನೆಗಳು ಸೇರಿವೆ.

ಇವೆಲ್ಲವೂ ಜಪಾನಿ ಕೈಗಾರಿಕೆಗೆ ಹಿಂದೆಂದೂ ಇಲ್ಲದಂತಹ ಅವಕಾಶಗಳನ್ನು ನೀಡುತ್ತಿವೆ. ಭಾರತದಲ್ಲಿ ತಯಾರಾದ ಮತ್ತು ಜಪಾನ್‌ನಿಂದ ತಯಾರಾದ ಜೋಡಿ ಈಗಾಗಲೇ ಅದ್ಭುತವಾಗಿ ಒಂದಾಗಿ ಕೆಲಸ ಮಾಡಲು ಆರಂಭಿಸಿದೆ.

ಜಪಾನೀ ಕಾರು ತಯಾರಕರು ಭಾರತದಲ್ಲಿ ತಯಾರಿಸಿದ ಕಾರುಗಳು ಈಗಾಗಲೇ ಜಪಾನ್‌ನಲ್ಲಿ ಮಾರಾಟವಾಗಲಾರಂಭಿಸಿವೆ. ಈಗಾಗಲೇ ಭಾರತದಲ್ಲಿರುವ ನಿಮ್ಮೆಲ್ಲರಿಗೂ ನಾನು ವಂದನೆ ಮತ್ತು ಅಭಿನಂದನೆ ಹೇಳಲು ಬಯಸುತ್ತೇನೆ.

ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಚಾಲನೆ ನೀಡುವುದಕ್ಕಾಗಿ ನಮ್ಮ ನೀತಿ ಮತ್ತು ಕ್ರಮಗಳನ್ನು ಮತ್ತಷ್ಟು ಪರಿಷ್ಕರಿಸಲು ನಾವು ಬದ್ಧರಾಗಿದ್ದೇವೆ ಎಂಬ ಭರವಸೆಯನ್ನು ಭಾರತದಲ್ಲಿ ಹೂಡಿಕೆ ಮಾಡಲು ಅವಕಾಶಗಳ ಆವಿಷ್ಕರಣದಲ್ಲಿರುವವರಿಗೆ ನಾನು ನೀಡುತ್ತೇನೆ.

ಮಿತ್ರರೇ,

ಉದ್ಯಮಕ್ಕಾಗಿ ಅವಕಾಶವಿರುವ ವಾತಾವರಣ ಸೃಷ್ಟಿಸುವುದು ಮತ್ತು ಹೂಡಿಕೆಗಳನ್ನು ಆಕರ್ಷಿಸುವುದು ನನ್ನ ಅಗ್ರ ಆದ್ಯತೆಯಾಗಿ ಉಳಿದಿದೆ. ಸ್ಥಿರ, ಊಹಿಸಲು ಸಾಧ್ಯವಾದ ಮತ್ತು ಪಾರದರ್ಶಕ ನಿಬಂಧನೆಗಳು ಭಾರತದಲ್ಲಿ ಉದ್ಯಮ ನಡೆಸುವ ರೀತಿಯನ್ನು ಪುನರ್ ನಿರೂಪಿಸುತ್ತಿವೆ.

ವಿದ್ಯುನ್ಮಾನ ಆಡಳಿತ ಇನ್ನು ಕೇವಲ ಅಲಂಕಾರಿಕ ಪದವಾಗಿ ಉಳಿದುಕೊಂಡಿಲ್ಲ, ಇದು ಮೂಲ ಸೌಲಭ್ಯವಾಗಿದೆ. ಸರಕು ಮತ್ತು ಸೇವೆಗಳ ತೆರಿಗೆ ಸಂಬಂಧಿಸಿದಂತೆ ನೂತನ ಶಾಸನವನ್ನು ಯಶಸ್ವಿಯಾಗಿ ರೂಪಿಸಿದ್ದೇವೆ.

ಇತ್ತೀಚೆಗೆ ಒಪ್ಪಿಗೆ ನೀಡಲಾಗಿರುವ ದಿವಾಳಿತನ ಕುರಿತಾದ ಸಂಹಿತೆ (ಇನ್‌ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಟ್ಸಿ ಕೋಡ್)ನಿಂದ ಹೂಡಿಕೆದಾರರಿನೆ ನಿರ್ಗಮನ ಮತ್ತಷ್ಟು ಸುಲಭವಾಗಲಿದೆ. ವಾಣಿಜ್ಯ ವಿಷಯಗಳ ಕ್ಷಿಪ್ರ ಇತ್ಯರ್ಥವನ್ನು ಖಾತ್ರಿ ಪಡಿಸಿಕೊಳ್ಳುವುದಕ್ಕಾಗಿ ವಾಣಿಜ್ಯ ನ್ಯಾಯಾಲಯಗಳು ಮತ್ತು ವಾಣಿಜ್ಯ ವಿಭಾಗಗಳನ್ನು ನಾವು ಸ್ಥಾಪಿಸುತ್ತಿದ್ದೇವೆ.

ನ್ಯಾಯ ನಿರ್ಣಾಯಕ ಕಾನೂನನ್ನು ತಿದ್ದುಪಡಿ ಕೈಗೊಂಡಿರುವುದರಿಂದ ನಮ್ಮಲ್ಲಿ ಈಗ ನ್ಯಾಯ ನಿರ್ಣಾಯಕ ವ್ಯವಸ್ಥೆಯ ಪ್ರಕ್ರಿಯೆಗಳು ಮತ್ತಷ್ಟು ಕ್ಷಿಪ್ರಗತಿಯಲ್ಲಿ ಸಾಗಲಿವೆ. ಪ್ರಸಕ್ತ ವರ್ಷ ಜೂನ್‌ನಲ್ಲಿ ನಮ್ಮ ವಿದೇಶಿ ನೇರ ಬಂಡವಾಳ ಹೂಡಿಕೆ ಕುರಿತ ಆಡಳಿತವನ್ನು ನಾವು ಮತ್ತಷ್ಟು ಸಡಿಲಗೊಳಿಸಿದ್ದೇವೆ. ಅಲ್ಲದೆ ನಾವು ನೂತನ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿಯನ್ನು ಕೂಡ ಪ್ರಕಟಿಸಿದ್ದೇವೆ.

ಭಾರತ ಪಾಲಿಸುತ್ತಿರುವ ಆರ್ಥಿಕ ಸುಧಾರಣೆಗಳ ನೂತನ ದಿಶೆಯನ್ನು ಇವೆಲ್ಲವೂ ತೋರಿಸುತ್ತದೆ. ಭಾರತವನ್ನು ಅತ್ಯಂತ ಮುಕ್ತ ಆರ್ಥಿಕ ಸ್ಥಿತಿಯನ್ನಾಗಿ ಮಾಡುವುದು ನನ್ನ ನಿರ್ಧಾರವಾಗಿದೆ. ನಮ್ಮ ಪ್ರಯತ್ನದ ಪರಿಣಾಮ ಈಗಾಗಲೇ ಅನುಭವವಾಗುತ್ತಿದ್ದು ಜಾಗತಿಕವಾಗಿ ಇದನ್ನು ಗುರುತಿಸಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ವಿದೇಶಿ ನೇರ ಹೂಡಿಕೆಯ ಒಳಹರಿವು ಶೇ.52ರಷ್ಟು ಹೆಚ್ಚಾಗಿದೆ.

ವಿಶ್ವಬ್ಯಾಂಕ್ ಹೊರತಂದ ವಿಶ್ವ ಸರಕು ಸಾಗಣೆ ಪ್ರದರ್ಶನ ಸೂಚ್ಯಂಕ 2016ರ ವರದಿಯಲ್ಲಿ
ಭಾರತ 19 ಸ್ಥಾನಗಳಷ್ಟು ಮೇಲೇರಿದೆ.

ವ್ಯವಹಾರ ಎಷ್ಟು ಸುಲಭವಾಗಿ ನಡೆಸಬಹುದು ಎಂಬ ವಿಷಯದಲ್ಲಿ ನಾವು ಸಾಕಷ್ಟು ಸುಧಾರಣೆ ಕೈಗೊಂಡಿದ್ದೇವೆ. ಈ ಕ್ಷೇತ್ರದಲ್ಲಿ ನಮ್ಮ ರ‍್ಯಾಂಕಿಂಗ್ ಗಮನಾರ್ಹವಾಗಿ ಸುಧಾರಿಸಿದೆ.

ಎರಡು ವರ್ಷಗಳಲ್ಲಿ ಭಾರತ ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 32 ಸ್ಥಾನಗಳಷ್ಟು ಮೇಲೇರಿದೆ. ವಿಶ್ವ ಹೂಡಿಕೆ ವರದಿ 2015ರ ಪ್ರಕಾರ ಜಗತ್ತಿನಲ್ಲಿ ಅಗ್ರ 10 ವಿದೇಶಿ ನೇರ ಹೂಡಿಕೆ ಗುರಿಗಳಲ್ಲಿ ಮೊದಲ ಸ್ಥಾನ ಹೊಂದಿದೆ.

ಮಿತ್ರರೇ,

ಪ್ರಮಾಣ, ವೇಗ ಮತ್ತು ಕೌಶಲ್ಯಗಳು ಭಾರತಕ್ಕೆ ಅಗತ್ಯ ಎಂದು ನಾನು ಬಹಳ ಕಾಲದಿಂದ ಹೇಳುತ್ತಿದ್ದೇನೆ. ಜಪಾನ್ ಈ ಎಲ್ಲಾ ಮೂರು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ಹೊಂದಿದೆ.

ಬದ್ಧತೆಯ ಸರಕು ವಲಯಗಳು, ದಿಲ್ಲಿ, ಮುಂಬಯಿ ಕೈಗಾರಿಕಾ ವಲಯ, ಮೆಟ್ರೋ ರೈಲು ಮತ್ತು ಉನ್ನತ ವೇಗದ ರೈಲುಗಳಂತಹ ನಮ್ಮ ಬೃಹತ್ ಯೋಜನೆಗಳಲ್ಲಿ ಈ ದೇಶದ ತೊಡಗಿಸಿಕೊಳ್ಳುವಿಕೆ ಅದರ ಪ್ರಮಾಣ ಮತ್ತು ವೇಗವನ್ನು ಸೂಚಿಸುತ್ತದೆ.

ಅನೇಕ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಈಗಾಗಲೇ ನಡೆಯುತ್ತಿದ್ದು ಈ ನಮ್ಮ ಆದ್ಯತೆಯ ಪ್ರಮುಖ ಕ್ಷೇತ್ರಕ್ಕೆ ನಮ್ಮ ಪಾಲುದಾರಿಕೆ ಈಗ ವಿಸ್ತರಿಸಿದೆ. ಜಪಾನ್‌ನ ತಂತ್ರಜ್ಞಾನಗಳು ಮತ್ತು ಭಾರತದ ಮಾನವ ಸಂಪನ್ಮೂಲಗಳ ಜೋಡಿ ಎಲ್ಲರಿಗೂ ಗೆಲುವಿನ ಪರಿಸ್ಥಿತಿಯನ್ನು ಸೃಷ್ಟಿಸಲಿದೆ ಎಂದು ಇಲ್ಲಿ ಕುಳಿತಿರುವ ಜಪಾನ್ ಉದ್ಯಮ ಮತ್ತು ಕೈಗಾರಿಕೆಯ ನಾಯಕರು ನನ್ನೊಂದಿಗೆ ಒಪ್ಪಿಗೆ ಸೂಚಿಸಲಿದ್ದಾರೆ.

ನಿಮ್ಮ ಹಾರ್ಡ್‌ವೇರ್ ಮತ್ತು ನಮ್ಮ ಸಾಫ್ಟ್‌ವೇರ್‌ನ ಜೋಡಿ ಅದ್ಭುತವಾದ ಜೋಡಿ ಎಂದು ನಾನು ಈ ಹಿಂದೆಯೂ ಹೇಳಿದ್ದೇನೆ. ಇದು ಉಭಯ ದೇಶಗಳಿಗೆ ಲಾಭಕರವಾಗಲಿದೆ. ನಾವು ಮತ್ತಷ್ಟು ಹತ್ತಿರವಾಗಿ ಮತ್ತು ದೃಢವಾಗಿ ಕೈಜೋಡಿಸೋಣ. ನಾವು ಮುಂದಡಿಯಿಟ್ಟು ಮತ್ತಷ್ಟು ದೊಡ್ಡ ಸಾಮರ್ಥ್ಯಗಳು ಮತ್ತು ಪ್ರಖರವಾದ ನಿರೀಕ್ಷೆಗಳನ್ನು ಆವಿಷ್ಕರಿಸೋಣ.

ವಂದನೆಗಳು,

ತುಂಬಾ ವಂದನೆಗಳು.

******