ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೆದ ಲೇಖನವೊಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಲೇಖನದಲ್ಲಿ ಭಾರತೀಯ ಕೃಷಿಯನ್ನು ಪರಿವರ್ತಿಸಲು ಹಾಗೂ ರೈತರ ಜೀವನವನ್ನು ಸುಧಾರಿಸಲು ತಂತ್ರಜ್ಞಾನ ಮತ್ತು ಸಂಶೋಧನೆ ಅತ್ಯಗತ್ಯ ಎಂದು ಬರೆದಿದ್ದಾರೆ. ಪೌಷ್ಟಿಕಾಂಶ ಭದ್ರತೆಯ ಮಹತ್ವವನ್ನು ತಿಳಿಸುವ ಜೊತೆಗೆ ಈ ಲೇಖನದಲ್ಲಿ, ಹೆಚ್ಚಿನ ಮೌಲ್ಯದ ಬೆಳೆಗಳು, ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳಬಲ್ಲ ಕೃಷಿ ಪದ್ಧತಿಗಳು, ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ರೈತರಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಉತ್ತಮಪಡಿಸುವ ಬಗ್ಗೆಯೂ ವಿವರಿಸಲಾಗಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
“ಭಾರತೀಯ ಕೃಷಿಯನ್ನು ರೂಪಾಂತರಿಸಲು ಹಾಗೂ ರೈತರ ಜೀವನವನ್ನು ಸುಧಾರಿಸಲು ತಂತ್ರಜ್ಞಾನ ಮತ್ತು ಸಂಶೋಧನೆ ಅತ್ಯಗತ್ಯ ಎಂದು ಕೇಂದ್ರ ಸಚಿವರಾದ ಶ್ರೀ @ChouhanShivraj ಅವರು ಬರೆದಿದ್ದಾರೆ.
ಪೌಷ್ಟಿಕಾಂಶ ಭದ್ರತೆಯ ಮಹತ್ವವನ್ನು ವಿವರಿಸುತ್ತಾ, ಹೆಚ್ಚಿನ ಮೌಲ್ಯದ ಬೆಳೆಗಳು, ಹವಾಮಾನ ಬದಲಾವಣೆ ತಡೆದುಕೊಳ್ಳಬಲ್ಲ ಕೃಷಿ ಪದ್ಧತಿಗಳು, ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ರೈತರಿಗೆ ಸುಧಾರಿತ ಮಾರುಕಟ್ಟೆ ಲಭ್ಯತೆ ದೊರಕಿಸುವ ಬಗ್ಗೆಯೂ ಲೇಖನದಲ್ಲಿ ಅವರು ವಿವರಿಸಿದ್ದಾರೆ.
ತಪ್ಪದೇ ಓದಿ!”
*****
Union Minister Shri @ChouhanShivraj writes that technology and research are central to transforming Indian agriculture and improving farmers' lives. He highlights the importance of nutrition security, with greater focus on high-value crops, climate-resilient farming, efficient use of resources and better market access for farmers. Do read! https://t.co/Kau2MOub1j
— PMO India (@PMOIndia) October 21, 2026