2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ, ಪುರುಷರ ಶಾಟ್ ಪುಟ್ F56/F57 ವಿಭಾಗದಲ್ಲಿ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಗೆದ್ದ ಹೋಕಾಟೊ ಹೊಟೊಝೆ ಸೆಮಾ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದಿನ ಆವೃತ್ತಿಗಿಂತ ಉತ್ತಮ ಪ್ರದರ್ಶನ ನೀಡುವ ಮೂಲಕ ಅವರು ಅಪಾರ ಉತ್ಸಾಹ ಮತ್ತು ಸಮರ್ಪಣಾ ಭಾವವನ್ನು ಪ್ರದರ್ಶಿಸಿದ್ದಾರೆ ಎಂದು ಉಲ್ಲೇಖಿಸಿರುವ ಶ್ರೀ ಮೋದಿ, ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದು, ಅವರು ಮುಂದೆಯೂ ಭಾರತಕ್ಕೆ ಹೆಮ್ಮೆ ತರುವಂತಾಗಲಿ ಎಂದು ಹಾರೈಸಿದ್ದಾರೆ.
ಪ್ರಧಾನಮಂತ್ರಿ ಅವರ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:
“ಹೋಕಾಟೊ ಹೊಟೊಝೆ ಸೆಮಾ ಅವರು 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ, ಪುರುಷರ ಶಾಟ್ ಪುಟ್ F56/F57 ವಿಭಾಗದಲ್ಲಿ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಹಿಂದಿನ ಆವೃತ್ತಿಗಿಂತ ಉತ್ತಮ ಪ್ರದರ್ಶನ ನೀಡುವ ಮೂಲಕ ಅವರು ಅಪಾರ ಉತ್ಸಾಹ ಮತ್ತು ಸಮರ್ಪಣಾ ಭಾವವನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಅವರು ಭಾರತಕ್ಕೆ ಹೀಗೆಯೇ ಹೆಮ್ಮೆ ತರುತ್ತಿರಲಿ: ಪ್ರಧಾನಮಂತ್ರಿ @narendramodi”
*****
Hokato Hotozhe Sema has won Bronze in the Men's Shot Put F56/F57 event at the Asian Para Games 2026 with a fine throw. Improving on his performance from the previous edition, he has shown great passion and dedication. Congrats to him. May he keep making India proud: PM @narendramodi
— PMO India (@PMOIndia) October 20, 2026