Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಬೆಳ್ಳಿ ಪದಕ ಜಯಿಸಿರುವ ರಾಮ್ ರತನ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ ಡಿಸ್ಕಸ್ ಥ್ರೋ ಎಫ್ 51/52/53 ವಿಭಾಗದಲ್ಲಿ, ಶ್ಲಾಘನೀಯ ಪ್ರದರ್ಶನದೊಂದಿಗೆ ರಜತ ಪದಕ ಜಯಿಸಿರುವ ರಾಮ್ ರತನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ಯಾರಾ ಅಥ್ಲೆಟಿಕ್ಸ್‌ ನಲ್ಲಿ ಭಾರತ ಸಂಭ್ರಮಿಸಲು ಮತ್ತೊಂದು ಅವಕಾಶ ಎಂದು ಉಲ್ಲೇಖಿಸುತ್ತಾ ಶ್ರೀ ಮೋದಿ ಅವರು, ರಾಮ್ ರತನ್ ಅವರ ಪ್ರಯತ್ನಗಳು ಹಾಗೂ ಅವರು ಬದ್ಧ ಪ್ರದರ್ಶನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಯವರ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:

“ಪ್ಯಾರಾ ಅಥ್ಲೆಟಿಕ್ಸ್‌ ನಲ್ಲಿ ಭಾರತ ಮತ್ತೊಮ್ಮೆ ಸಂಭ್ರಮಿಸಲು ಕಾರಣ ದೊರೆತಿದೆ!

ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಪುರುಷರ ಡಿಸ್ಕಸ್ ಥ್ರೋ (ಎಫ್ 51/52/53) ವಿಭಾಗದಲ್ಲಿ ರಾಮ್ ರತನ್ ಸಿಂಗ್ ಅವರು ಅತ್ಯುತ್ತಮ ಪ್ರದರ್ಶನದೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ. ರಾಮ್ ರತನ್ ಅವರ ಪ್ರಯತ್ನಗಳು ಮತ್ತು ಅವರು ತೋರಿದ ದೃಢನಿಶ್ಚಯ ಹೆಮ್ಮೆ ತಂದಿದೆ: ಪ್ರಧಾನಮಂತ್ರಿ @narendramodi

 

*****