Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೌಶಲ ಅಭಿವೃದ್ಧಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಗ್ರೇಟ್ ಬ್ರಿಟನ್ ನ ಯುನೈಟೆಡ್ ಕಿಂಗ್ಡಮ್ ಮತ್ತು ಉತ್ತರ ಐರ್ಲೆಂಡ್ ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗ್ರೇಟ್ ಬ್ರಿಟನ್ ನ ಯುನೈಟೆಡ್ ಕಿಂಗ್ಡಮ್ ಮತ್ತು ಉತ್ತರ ಐರ್ಲೆಂಡ್ ನಡುವೆ ಕೌಶಲ ಅಭಿವೃದ್ಧಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ಎಂ.ಓ.ಯು. ಎರಡು ದೇಶಗಳ ನಡುವೆ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಹಾಗೂ ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿ ಆಪ್ತ ದ್ವಿಪಕ್ಷೀಯ ಸಹಕಾರಕ್ಕೆ ದಾರಿ ಮಾಡಿಕೊಡಲಿದೆ.

ವಿದೇಶಗಳೊಂದಿಗಿನ ಸಹಯೋಗವು ಭಾರತದ ಕೌಶಲ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಆ ಮೂಲಕ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳಿಗಾಗಿಗ ಕೌಶಲ್ಯವಂತರಾಗಿಸಲು ನೆರವಾಗುತ್ತದೆ. ಈ ಎಂ.ಓ.ಯು. ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನ ಕೈಗಾರಿಕೆಗಳು ಮತ್ತು ತರಬೇತಿ ಸಂಸ್ಥೆಗಳ ನಡುವೆ ನಾವಿನ್ಯಪೂರ್ಣ ಪಾಲುದಾರಿಕೆಯ ಚೌಕಟ್ಟು ಸೃಷ್ಟಿಸಲು ಮತ್ತು ಭಾರತದಲ್ಲಿ ಕೌಶಲ ತರಬೇತಿ ಪ್ರಯತ್ನಗಳನ್ನು ಹೆಚ್ಚಳ ಮಾಡಲು ಮತ್ತು ಅವರ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತದೆ. ಈ ತಿಳಿವಳಿಕೆ ಒಪ್ಪಂದದ ಜಾರಿಗೆ ಸಂಬಂಧಿಸಿದ ಯೋಜನೆಗಳ ಆರ್ಥಿಕ ಹೂಡಿಕೆಯನ್ನು ಎರಡೂ ಪಕ್ಷಕಾರರು ಪರಸ್ಪರ ಒಪ್ಪುವ ಪ್ರತ್ಯೇಕ ವೈಯಕ್ತಿಕ ವ್ಯವಸ್ಥೆಯಲ್ಲಿ ವಿನ್ಯಾಸಗೊಳಿಸಲಾಗುತ್ತದೆ.

ಹಿನ್ನೆಲೆ:

ಕೌಶಲ ಅಭಿವೃದ್ಧಿಯು ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಗೆ ರಾಷ್ಟ್ರೀಯ ಪ್ರಾಮುಖ್ಯವೆನಿಸಿದೆ ಮತ್ತು ದ್ವಿಪಕ್ಷೀಯ ಪಾಲುದಾರಿಕೆಯ ಮಹತ್ವದ ಭಾಗವಾಗಿದೆ. 2016ರ ನವೆಂಬರ್ ನಲ್ಲಿ ಇಬ್ಬರೂ ಪ್ರಧಾನಮಂತ್ರಿಯವರು, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಸಹಯೋಗದ ಆದ್ಯತೆಯ ಕ್ಷೇತ್ರ ಎಂದು ಅನುಮೋದಸಿದ್ದರು.

*****