Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ಕ್ಷಯ ಕೊನೆಗಾಣಿಸಿ”ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ಭಾಷಣ

“ಕ್ಷಯ ಕೊನೆಗಾಣಿಸಿ”ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ಭಾಷಣ

“ಕ್ಷಯ ಕೊನೆಗಾಣಿಸಿ”ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ಭಾಷಣ

“ಕ್ಷಯ ಕೊನೆಗಾಣಿಸಿ”ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ದೆಹಲಿಯಲ್ಲಿ ನಡೆದ “ಕ್ಷಯ ಕೊನೆಗಾಣಿಸಿ” ಶೃಂಗಸಭೆಯ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.

“ದೆಹಲಿ ಕ್ಷಯ ಕೊನೆಗಾಣಿಸಲಿದೆ” ಶೃಂಗಸಭೆಯು ಕ್ಷಯ ರೋಗ ನಿರ್ಮೂಲನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ರೋಗವನ್ನು ನಿರ್ಮೂಲನೆ ಮಾಡಲು ಕೈಗೊಂಡಿರುವ ಪ್ರತಿಯೊಂದು ಹೆಜ್ಜೆಯೂ ಬಡಜನರ ಬದುಕು ಉತ್ತಮಪಡಿಸುವುದರೊಂದಿಗೆ ಸಂಪರ್ಕಿತವಾಗಿದೆ ಎಂದರು.

ಜಾಗತಿಕ ಗುರಿ 2030 ಆಗಿದ್ದರೂ, ಭಾರತವು ಕ್ಷಯರೋಗವನ್ನು 2025ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಹಾಕಿಕೊಂಡಿದೆ ಎಂದು ಪ್ರಧಾನಮಂತ್ರಿಯವರು ಪ್ರಕಟಿಸಿದರು. ಈ ಗುರಿ ಸಾಧನೆಗೆ ಸರ್ಕಾರ ಸಮಗ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕಿದ್ದು, ತಾವು ಎಲ್ಲ ಮುಖ್ಯಮಂತ್ರಿಗಳಿಗೆ ಈ ಅಭಿಯಾನದಲ್ಲಿ ಸೇರುವಂತೆ ವೈಯಕ್ತಿಕವಾಗಿ ಪತ್ರ ಬರೆದಿರುವುದಾಗಿ ತಿಳಿಸಿದರು.

ಕ್ಷಯ ರೋಗದ ಮುಂಚೂಣಿಯಲ್ಲಿರುವ ತಜ್ಞ ವೈದ್ಯರು ಮತ್ತು ಕಾರ್ಯಕರ್ತರು ಕ್ಷಯ ರೋಗ ನಿರ್ಮೂಲನೆಯ ಅಭಿಯಾನದಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂದರು. ಈ ರೋಗ ಗೆದ್ದು ಬಂದ ರೋಗಿಗಳು ಕೂಡ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಇಂದ್ರಧನುಷ್ ಮತ್ತು ಸ್ವಚ್ಛ ಭಾರತ ಯೋಜನೆಗಳ ಉದಾಹರಣೆ ನೀಡಿದ ಪ್ರಧಾನಿ, ಸರ್ಕಾರ ಹೇಗೆ ತನ್ನ ನಿಶ್ಚಿತ ಗುರಿಗಳತ್ತ ಪ್ರಗತಿ ಸಾಧಿಸಲು ತ್ವರಿತ ಹೆಜ್ಜೆ ಇಡುತ್ತಿದೆ ಎಂಬುದನ್ನು ಪ್ರತಿಪಾದಿಸಿದರು.

*****