Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತಿನ ಅಹಮ್ಮದಾಬಾದ್ ನಲ್ಲಿ ಟ್ರಾನ್ಸ್ಟಾಡಿಯಾ “ ಎರೆನಾ ಯೋಜನೆ” ಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

s20170630110479


ಎಲ್ಲ ಹಿರಿಯರೇ,

 

ಹಿಂದೂಸ್ಥಾನದ ಹೆಸರನ್ನು ಬೆಳಗಿರುಸುತ್ತಿರುವ ನನ್ನ ಪ್ರೀತಿಯ ಕ್ರೀಡಾಪಟುಗಳೇ,

10 ವರ್ಷದ ಹಿಂದೆ ಈ ಕ್ರೀಡಾಂಗಣ ಹೇಗಿತ್ತು ಎಂಬುದನ್ನು ಇಲ್ಲಿನ ಸ್ಥಳದ ಪರಿಚಯ ಇರುವವರು ಅರಿತಿದ್ದಾರೆ. ಇದು ಪಾಳುಬಿದ್ದ ಡೈರಿಯ ಒಂದು ಕಟ್ಟಡವಾಗಿತ್ತು ಹಾಗೂ ಇಲ್ಲಿ ಬೀದಿ ನಾಯಿಗಳು ಬೀಡುಬಿಡುತ್ತಿದ್ದವು. ಯಾರೂ ಕೇಳುವವರಿಲ್ಲದ ಸ್ಥಳವಾಗಿತ್ತು. ಕನಸು ಕಾಣುವ ಸಾಮರ್ಥ್ಯವಿದ್ದರೆ ಪ್ರಪಂಚ ಹೇಗೆ ಬದಲಾಗುತ್ತದೆ ಎಂಬುದನ್ನು ತಾವು ಇಲ್ಲಿ ಬಂದು ನೋಡಬಹುದು.

 

ಇಲ್ಲಿಂದ ತೆರಳುವು ಮುನ್ನ ಒಮ್ಮೆ ಈ ಕ್ರೀಡಾಂಗಣದ ಎಲ್ಲ ವಿಭಾಗಗಳನ್ನು ನೋಡಿಕೊಂಡು ಹೋಗುವಂತೆ ಇಲ್ಲಿ ಬಂದಿರುವ ಎಲ್ಲರಿಗೂ ನಾನು ಮನವಿ ಮಾಡುತ್ತೇನೆ. ನಮ್ಮ ಕ್ರೀಡಾಪಟುಗಳು ಹೊರದೇಶಗಳಲ್ಲಿ ಕಾಣುತ್ತಿದ್ದ ಅತ್ಯಾಧುನಿಕ ಸೌಲಭ್ಯಗಳನ್ನು ಇಲ್ಲಿಯೂ ಕೂಡಾ ಕಾಣಬಹುದು ಎಂದು ತಮಗೆ ಮನವರಿಕೆಯಾಗುತ್ತದೆ.

ನಮ್ಮ ದೇಶದ ಕ್ರೀಡಾಪಟುಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೋ ಆಗೆಲ್ಲ ಅವರೊಂದಿಗೆ ಬೆರೆಯುತ್ತೇನೆ, ಅವರೊಂದಿಗೆ ಪ್ರೀತಿ ವಿಶ್ವಾಸದಿಂದ ಮಾತುಕತೆ ನಡೆಸುತ್ತೇನೆ, ಅವರ ಕಷ್ಟ ಸುಖಗಳನ್ನು ಆಲಿಸುತ್ತೇನೆ. ಅವರ ಪರಿಶ್ರಮದಲ್ಲಿ ಯಾವುದೇ ಕೊರತೆಯಾಗಿಲ್ಲ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ವಿಶ್ವದ ಇನ್ನಿತರ ದೇಶಗಳ ನಡುವೆ ನಮ್ಮ ದೇಶದ ಧ್ವಜವನ್ನು ಎತ್ತರಕ್ಕೇರಿಸುವ ಅವರ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ನಮ್ಮೆದುರು ಸಮರ್ಥ ಯುವ ಪೀಳಿಗೆ ಇದೆ, ಯುವ ಭಾರತ ನನ್ನ ಮುಂದಿದೆ, ಯುವ ಭಾರತ!

 

ನಮ್ಮ ಆಲೋಚನೆಗಳು ತಮಗೆ ಆಶ್ಚರ್ಯ ಉಂಟುಮಾಡಬಹುದು. ನಾನು ಯಾವುದೇ ಕ್ರೀಡಾಪಟುಗಳನ್ನು ಈ ಬಗ್ಗೆ ವಿಚಾರಿಸಿಲ್ಲ.  ಕೆಲವೊಮ್ಮೆ ಒಬ್ಬ ಕ್ರೀಡಾಪಟು ವಿಮಾನದಲ್ಲಿ ಪ್ರಯಾಣಿಸುವಾಗ, ರೈಲಿನಲ್ಲಿ ಪ್ರಯಾಣಿಸುವಾಗ ಸಹ  ಪ್ರಯಾಣಿಕರು ಅವರನ್ನು ಏನು ಮಾಡುತ್ತಿದ್ದೀರಾ ಎಂದು ಕೇಳಿರುತ್ತಾರೆ. ಕೆಲವು ಕ್ರೀಡಾಪಟುಗಳು ಹೇಳುತ್ತಾರೆ ನಾನು ರಾಷ್ಟ್ರೀಯ ಕೀಡೆಗಳಲ್ಲಿ ಆಡುತ್ತೇನೆ, ಇನ್ನೂ ಕೆಲವರು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಆಡುತ್ತೇನೆ ಎಂದು ಹೇಳುತ್ತಾರೆ. ಸಹಪ್ರಯಾಣಿಕ ಅವರನ್ನು ಕೇಳುತ್ತಾನೆ, ನೀನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಆಡುತ್ತೀಯಾ ನಿಜ, ಆದರೆ ಕೆಲಸ ಏನು ಮಾಡುತ್ತೀಯಾ? ಎಂಬ ಪ್ರಶ್ನೆ ಮುಂದಿಡುತ್ತಾರೆ.

 

ಕ್ರೀಡೆ ದೇಶಸೇವೆಯ ಒಂದು ಅಂಗ. ಕ್ರೀಡೆಯಲ್ಲಿ ಕೂಡ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಇದು ನಮ್ಮ ದೇಶದಲ್ಲಿ ಯಾರಿಗೂ ಅರ್ಥವಾದಂತಿಲ್ಲ. ಒಬ್ಬ ಕ್ರೀಡಾಪಟು ನಾನು ರಾಷ್ಟ್ರೀಯ ಕ್ರೀಡೆಗಳಲ್ಲಿ ಆಡುತ್ತೇನೆ ಎಂದೊಡನೆ ಪ್ರಶ್ನೆ ಕೇಳಿದಾತ, ಆಟವಾಡುತ್ತೀಯಾ, ಒಳ್ಳೆಯದು ಮತ್ತಿನ್ನೇನು ಮಾಡುತ್ತೀಯಾ ಎಂದು ಪ್ರಶ್ನಿಸುತ್ತಾರೆ ಇದು ಇವರೆಲ್ಲರಿಗೂ ಅನುಭವವಾಗಿರಬೇಕು. ದೇಶದ ಗಡಿಯಲ್ಲಿ ಒಬ್ಬ ಯೋಧ ಕಾವಲು ಕಾಯುತ್ತಿರುತ್ತಾನೆ, ಯಾರಾದರೂ ಅವನನ್ನು ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾರೆ, ಆಗ ಆ ಯೋಧ ಗಡಿಯಲ್ಲಿ ಯೋಧನಾಗಿ ನಿಂತಿದ್ದೇನೆ ಎಂದು ಉತ್ತರಿಸುತ್ತಾನೆ. ಆಗ ಪ್ರಶ್ನೆ ಕೇಳಿದಾತ ಅವನನ್ನು ಮತ್ತೆ ಕೇಳುತ್ತಾನೆ ಕೆಲಸ ಏನು ಮಾಡುತ್ತೀಯಾ? ಇದಕ್ಕಿಂತ ಖೇದಕರವಾದ ವಿಷಯವೇನಿದೆ.

 

ನಮ್ಮ ಸಮಾಜದಲ್ಲಿ ನಮ್ಮ ಕ್ರೀಡಾಪಟುಗಳಿಗೂ ಇದೇ ಪರಿಸ್ಥಿತಿ ಒದಗಿ ಬಂದಿದೆ. ಕೇವಲ ಸಮಾಜದಲ್ಲಿ ಮಾತ್ರ ಅಲ್ಲ ಕುಟುಂಬದಲ್ಲೂ ಇದೇ ಪರಿಸ್ಥಿತಿ, ಈ ಕ್ರೀಡಾಪಟುಗಳ ಅನುಭವಕ್ಕೆ ಬಂದಿರಬಹುದು, ಇವರು ಪ್ರಾರಂಭದಲ್ಲಿ  ಆಟವಾಡಿ ಮನೆಗೆ ಹಿಂದಿರುಗಿದಾಗ ಮನೆಯವರು ಆತನನ್ನು ಏನು ಆಟವಾಡಿಕೊಂಡೇ ಇರುತ್ತೀಯೋ ಅಥವಾ ಓದು ಬರಹ ಮಾಡುತ್ತೀಯೋ? ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತೀಯೋ ಇಲ್ಲವೋ ಎಂದು ಪ್ರಶ್ನೆ ಮಾಡಿರುತ್ತಾರೆ. ಕೆಲವರು ಪುಲೇಲ ಗೋಪಿಚಂದ ಅವರಿಗೂ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡದಿರು ಎಂದು ಹೇಳಿರಬಹುದು.

 

ನಮ್ಮ ದೇಶದಲ್ಲಿ ಈ ಪರಿಸ್ಥಿತಿ ಇದೆ. ಇದನ್ನು ನಾನು ಬದಲಾಯಿಸಬಯಸುತ್ತೇನೆ. ಕ್ರೀಡೆ ಒಬ್ಬ ವ್ಯಕ್ತಿಯನ್ನು ಅವರ ಜೀವನದಲ್ಲಿ ಎತ್ತರಕ್ಕೇರಿಸುವ ಅವಕಾಶ ಕಲ್ಪಿಸಿಕೊಡುತ್ತದೆ. ಈ ಕ್ರೀಡಾಪಟುಗಳ ಕಾರಣದಿಂದಾಗಿ ದೇಶದ 125 ಕೋಟಿ ಜನ ವಿಶ್ವದ ಎದುರು ತಲೆ ಎತ್ತಿ ನಿಲ್ಲುವಂತಾಗಿದೆ. ಪ್ರಪಂಚದ ಯಾವುದೇ ದೇಶದಲ್ಲಿ ನಾನು ನನ್ನ ಭಾಷಣದ ಮಧ್ಯೆ ಅವರ ಕ್ರೀಡಾಪಟುಗಳ ಹೆಸರನ್ನು ಉಲ್ಲೇಖಿಸಿದರೆ ಅಲ್ಲಿ ನೆರೆದಿರುವ ಜನತೆ ಐದೈದು ನಿಮಿಷಗಳ ಕಾಲ ಕರತಾಡನ ಮಾಡುತ್ತಾರೆ. ಕೇವಲ ನನ್ನ ಭಾಷಣದ ಮಧ್ಯೆ ಅಲ್ಲಿನ ಕ್ರೀಡಾಪಟುಗಳ ಹೆಸರನ್ನು ಉಲ್ಲೇಖಿಸಿದರೆ.

 

ಎರಡು ದಿನಗಳ ಹಿಂದೆ ನಾನು ಪೋರ್ಚುಗಲ್ ಪ್ರವಾಸದಲ್ಲಿದ್ದೆ. ಅಲ್ಲಿನ ಪುಟ್‍ಬಾಲ್ 

ಆಟಗಾರರನ್ನು ನಾನು ನೆನಪಿಸಿಕೊಂಡೆ, ಅಲ್ಲಿನ ವಾತಾವರಣವೇ ಸಂಪೂರ್ಣ ಬದಲಾಯಿತು. ಅಲ್ಲಿನ ವಾತಾವರಣ ಕರತಾಡನದಿಂದ ಪ್ರತಿಧ್ವನಿಸತೊಡಗಿತು. ಕ್ರೀಡಾಪಟುಗಳ ಬಗ್ಗೆ ಈ ವಿಶ್ವಾಸ, ಗೌರವ ನಮ್ಮ ದೇಶದ ಪರಂಪರೆಯಾಗಬೇಕು, ನಮ್ಮ ಕುಟುಂಬದ ಪರಂಪರೆಯಾಗಬೇಕು. ದೇಶದ ಸಾಮಾಜಿಕ ಪರಂಪರೆಯ ರೂಪದಲ್ಲಿ ಹೊರಹೊಮ್ಮಬೇಕು. ಕ್ರೀಡಾ ವ್ಯವಸ್ಥೆಗಳಲ್ಲಿ ಅಭಿವೃದ್ಧಿಯಾಗಬೇಕು.

 

ಇಂದು ನನಗೆ ಕ್ರೀಡೆಯ ಮಹಾಕುಂಭ ಕಾರ್ಯಕ್ರಮದ App ಲೋಕಾರ್ಪಣೆ ಮಾಡುವ ಅವಕಾಶ ಲಭಿಸಿದೆ. ಎಲ್ಲರೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುವಾಗಬೇಕೆಂದೇನೂ ಇಲ್ಲ. ಮಿತ್ರರೆ, ಆಟವಾಡುವುದರಿಂದ ಜೀವನದಲ್ಲಿ ಕಂಡುಬರುವ ಸೊಗಸೇ ಬೇರೆಯಾಗಿರುತ್ತದೆ. ಕ್ರೀಡೆ, ಬದುಕುವುದನ್ನು ಹೇಳಿಕೊಡುತ್ತದೆ. ಕ್ರೀಡಾಪಟುಗಳ ಜೀವನದಿಂದ ನಾವು ಹಲವು ವಿಷಯಗಳನ್ನು ಅರಿತುಕೊಳ್ಳಬಹುದು. ಕೆಲವೊಮ್ಮೆ ಜನರು, ಹೆಚ್ಚಿನದಾಗಿ ರಾಜಕೀಯ ನಾಯಕರುಗಳಿಗೆ ಪರಾಜಯವನ್ನು ಅರಗಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕೆಂದು ಹೇಳುತ್ತಾರೆ, ಆದರೆ ಕ್ರೀಡಾಪಟುಗಳ ಪರಾಜಯವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಂಡಿದ್ದೇನೆ. ಕ್ರೀಡಾಪಟುಗಳಲ್ಲಿ ಪರಾಜಯವನ್ನು ಜಯವನ್ನಾಗಿ ಪರಿವರ್ತಿಸುವ ಶಕ್ತಿ ಇದೆ.  ಈ ಶಕ್ತಿ ಕ್ರೀಡಾಕ್ಷೇತ್ರದಲ್ಲಿ ಕಂಡುಬರುತ್ತದೆ. ಪ್ರತಿಕ್ಷಣ ಜಯ– ಅಪಜಯದ ಆಟ ನಡೆಯುತ್ತಿರುತ್ತದೆ. ಜೀವನದ ಜಯ – ಪರಾಜಯವನ್ನು ಆಟವನ್ನಾಗಿ ಸ್ವೀಕರಿಸಿ ಬದುಕಿದರೆ ಅದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ. ಇಂತಹ ಸೌಭಾಗ್ಯ ನಮ್ಮ ಕ್ರೀಡಾಪಟುಗಳಲ್ಲಿದೆ. ನಾವು ಸೌಲಭ್ಯಗಳನ್ನು ಅಭಿವೃದ್ದಿಪಡಿಸಬೇಕಾಗಿದೆ.

 

ಗುಜರಾತ್‍ನ ಕ್ರೀಡೆಯ ಈ ಮಹಾಕುಂಭ ಮೇಳದಲ್ಲಿ ಕಳೆದ ವರ್ಷ 30 ಲಕ್ಷ ಜನ ಭಾಗವಹಿಸಿದ್ದರು. ಎಲ್ಲರೂ ಚಾಂಪಿಯನ್‍ಗಳಾಗಬೇಕು ಎಂದೇನಿಲ್ಲ. ಮಿತ್ರರೇ,ಕ್ರೀಡೆಗಳು ನಡೆಯಬೇಕಿದ್ದರೆ ಚಪ್ಪಾಳೆ ತಟ್ಟಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದರಿಂದ ಕ್ರೀಡಾಪಟುಗಳ ಉತ್ಸಾಹ ವೃದ್ದಿಸುತ್ತದೆ. ಅವರಲ್ಲಿ ಒಂದು ಹೊಸ ಶಕ್ತಿ ಉತ್ಪನ್ನವಾಗುತ್ತದೆ. ಅವರ ಛಲ ಹೆಚ್ಚಾಗುತ್ತದೆ. ಕ್ರೀಡೆ ಒಂದು ಸ್ವಾಭಾವಿಕ ಸಂಸ್ಕೃತಿಯಾಗಬೇಕು. ಇದರಿಂದ ಕ್ರೀಡಾ ಮಹಾಕುಂಭಮೇಳದ ಪ್ರಾರಂಭವಾದ ಅತಿ ಕಡಿಮೆ ಸಮಯದಲ್ಲಿ ಗುಜರಾತ್ ಮತ್ತು ಗುಜರಾತಿನ ಜನತೆ, ಕ್ರೀಡೆ ಮತ್ತು ಗುಜರಾತ್, ಇದು ಯಾರ ಮನದಲ್ಲೂ ಹೊಂದಾಣಿಕೆಯಾಗುವುದಿಲ್ಲ.

 

ಗುಜರಾತಿ ಅಂದರೆ ಶಾಲಾ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಬೇಕಾದರೆ ಎರಡು ಪೆನ್‍ಗಳನ್ನು ಕೊಂಡೊಯ್ಯುತ್ತಾರೆ. ಸಂಜೆಯ ಸಮಯದಲ್ಲಿ ಮನೆಗೆ ಹಿಂದಿರುಗುವಾಗ ಒಂದು ಪೆನ್ ಮಾರಿ ಬಂದಿರುತ್ತಾರೆ. ಅವರ ರಕ್ತದ ಪ್ರತಿ ಕಣ ಕಣದಲ್ಲೂ ವ್ಯಾಪಾರವೇ ತುಂಬಿದೆ. ಅವರು ಯಾವುದಾದರೂ ಹೊಸ ವಸ್ತುವನ್ನು ತೆಗೆದುಕೊಂಡು ಹೋದರೆ ಅದನ್ನು ತಮ್ಮ ಸ್ನೇಹಿತರಿಗೆ ತೋರಿಸಿ ಅದನ್ನು ಮಾರಿ ಬರುತ್ತಾರೆ. ಇಂತಹ ಗುಜರಾತಿನಲ್ಲಿ ಅನೇಕ ಕ್ರೀಡಾ ಪ್ರತಿಭೆಗಳಿವೆ. ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನ ಆನಂದವೇನಿದೆ? ಕಳೆದ 25 ವರ್ಷಗಳಲ್ಲಿ ಗುಜರಾತ್‍ನ ಕ್ರೀಡಾಪಟುಗಳಿಗೆ 10 ಚಿನ್ನದ ಪದಕ ಲಭಿಸಿದೆ. 25 ವರ್ಷಗಳಲ್ಲಿ 10 ಚಿನ್ನದ ಪದಕ.. ಈ ಕ್ರೀಡಾ ಮಹಾಕುಂಭದ ಪರಿಣಾಮವಾಗಿ ಕೇವಲ ಒಂದು ವರ್ಷದಲ್ಲಿ 10 ಚಿನ್ನದ ಪದಕಗಳು ಲಭಿಸಿವೆ.

ತಾವುಗಳು ಒಮ್ಮೆಯಾದರೂ ದೀಪಾ ಅವರನ್ನು ಭೇಟಿಯಾಗಬೇಕೆಂದು ನಾನು ವಿನಂತಿಸುತ್ತೇನೆ. 

 

ಒಬ್ಬ ಕ್ರೀಡಾಪಟುವಾಗಿ ದೀಪಾ ಅವರ ಬಗ್ಗೆ ದೇಶದ ಎಲ್ಲರೂ ತಿಳಿದಿದ್ದಾರೆ. ಇವರಿಗಿಂತ ದೊಡ್ಡ  ಪ್ರೇರಕಶಕ್ತಿಯನ್ನು ನಾನು ಎಂದೂ ನೋಡಿಲ್ಲ. ಅವರ ಶರೀರದ ಅರ್ಧ ಭಾಗ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಅವರು ಯಾವಾಗ ಮಾತನಾಡಿದರೂ, ಹೊಸ ಕನಸಿನ ಬಗ್ಗೆ ಮಾತನಾಡುತ್ತಾರೆ, ಹುರುಪಿನಿಂದ ಮಾತನಾಡುತ್ತಾರೆ, ನವ ಉತ್ಸಾಹದ ಮಾತನಾಡುತ್ತಾರೆ. ಇಂತಹ ವ್ಯಕ್ತಿಗಳೇ ನಮ್ಮ ಯುವಜನರ ಹೀರೋಗಳು. ಇಂತಹವರಿಂದ ದೇಶದಲ್ಲಿ ಕ್ರೀಡೆಯ ವಾತಾವರಣ ಸೃಷ್ಟಿಸಿ, ಯುವ ಜನರಿಗೆ ಕ್ರೀಡೆಗಳ ಬಗ್ಗೆ ಪ್ರೋತ್ಸಾಹಿಸಬೇಕಾಗಿದೆ. ಆವಶ್ಯಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ. ದೇಶದಲ್ಲಿ ಪ್ರಥಮ ಬಾರಿಗೆ ಕ್ರೀಡೆಯಲ್ಲಿ ಸಾರ್ವಜನಿಕ ಖಾಸಗಿ ಪಾಲುದಾರಿಕೆಯ ಹೊಸ ಮಾದರಿಯನ್ನು ಗುಜರಾತ್ ಪ್ರಾರಂಭಿಸಿದೆ. ಸರಕಾರ ಮತ್ತು ಉದ್ಯಮಿಗಳು ಜತೆಗೂಡಿ ನಮ್ಮ ಯುವ ಪೀಳಿಗೆಗೆ ಯಾವ ರೀತಿ ವ್ಯವಸ್ಥೆಗಳನ್ನು ರೂಪಿಸಬಹುದೆಂಬುದಕ್ಕೆ ಗುಜರಾತ್ ಉದಾಹರಣೆ.

ಮುಂಬರುವ ಒಲಂಪಿಕ್ ಕ್ರೀಡೆಗಳಲ್ಲಿ ಭಾರತದ ಹೆಸರು ಪ್ರತಿಧ್ವನಿಸಲಿದೆ ಎಂಬ ವಿಶ್ವಾಸ ನನಗಿದೆ. ಅಧಿಕ ಶಕ್ತಿಯಿಂದ, ಅತ್ಯಧಿಕ ವ್ಯಾಪಕವಾಗಿ ಕೇಳಿಬರಲಿದೆ, ವಿಶ್ವದ ಚಿಕ್ಕ ಪುಟ್ಟ ರಾಷ್ಟ್ರಗಳೂ ಕೂಡಾ ಒಲಂಪಿಕ್‍ನ ಯಶಸ್ಸಿನಿಂದಾಗಿ ಪ್ರಪಂಚದಾದ್ಯಂತ ತಮ್ಮ ಹೆಸರನ್ನು ಸ್ಥಾಪಿಸಿವೆ. 125 ಕೋಟಿ ಜನಸಂಖ್ಯೆಯ ಹಿಂದೂಸ್ಥಾನವೂ ಕೂಡ ಈ ಕನಸನ್ನು ನನಸು ಮಾಡಬಹುದಾಗಿದೆ. ಈ ಸಾಮರ್ಥ್ಯ ನಮ್ಮ ದೇಶಕ್ಕಿದೆ. ಯುವಕರಿಗೆ ಒಂದು ಅವಕಾಶ ಬೇಕಿದೆ, ಯುವಕರಿಗೆ ಒಂದು ವ್ಯವಸ್ಥೆ ಬೇಕಿದೆ, ಕುಟುಂಬದ ಸಂಪೂರ್ಣ ಬೆಂಬಲ ಬೇಕಿದೆ. ಇದೇ ಯುವಜನತೆ ನಮ್ಮ ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಹೊಂದಿದ್ದಾರೆ. ಆದ್ದರಿಂದ ಒಂದು ವ್ಯವಸ್ಥೆಯ ಸ್ಧಾಪನೆಯಾಗಿದೆ.

 

ನಾನು ದೇಶದ ಯಾವುದೇ ಕ್ರೀಡಾಪಟುವನ್ನು ಭೇಟಿಯಾದರೂ ಅವರಲ್ಲಿ ಈ ವ್ಯವಸ್ಥೆಯನ್ನು ಒಮ್ಮೆ ನೋಡಿ ಬರುವಂತೆ ಮನವಿ ಮಾಡುತ್ತೇನೆ. ಇದರಲ್ಲಿ ಮತ್ತೆ ಯಾವ ಸುಧಾರಣೆಯನ್ನು ಮಾಡಬಹುದು. ಮತ್ತೇನನ್ನು ಇದರಲ್ಲಿ ಸೇರಿಸಬಹುದು, ದೇಶದಲ್ಲಿ ಈ ರೀತಿಯ ವ್ಯವಸ್ಥೆಯನ್ನು ಹೇಗೆ ಅಭಿವೃದ್ಧಿ ಮಾಡಬಹುದು, ಕ್ರೀಡಾಂಗಣದತ್ತ ಹೇಗೆ ಜನರನ್ನು ಆಕರ್ಷಿಸಬಹುದು ಎಂಬ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡುತ್ತೇನೆ. ಮಿತ್ರರೆ, ಇಂದು ನಮ್ಮ ಬಾಲ್ಯ ವಿಡಿಯೋ ಗೇಮ್‍ನಿಂದಾಗಿ ಹಾಳಾಗುತ್ತಿದೆ. ನನಗೆ ಕ್ರೀಡಾಂಗಣದಲ್ಲಿ ಮಕ್ಕಳನ್ನು ಕಾಣಬೇಕಾಗಿದೆ. 

 

ನಾನು ಗುಜರಾತ್‍ನಲ್ಲಿ ಇದ್ದಾಗ ಯಾವಾಗಲಾದರೂ ಶಾಲೆಗಳಿಗೆ ಭೇಟಿ ನೀಡುತ್ತಿದ್ದೆ. ಸತತವಾಗಿ ಎರಡು – ಮೂರು ದಿನಗಳು ಶಾಲೆಗಳಿಗೆ ಭೇಟಿ ನೀಡುತ್ತಿದ್ದೆ. ದಿನದಲ್ಲಿ ಎಷ್ಟು ಬಾರಿ ಬೆವರು ಹರಿಸಿದಿರಿ, ಇದು ನಾನು ಮಕ್ಕಳಲ್ಲಿ ಸಾಮಾನ್ಯವಾಗಿ ಕೇಳುತ್ತಿದ್ದ ಪ್ರಶ್ನೆ. ಎಷ್ಟು ದೂರ ಓಡಿದಿರಿ, ಮರಗಳನ್ನು ಹತ್ತುತ್ತೀರೋ ಇಲ್ಲವೋ, ಮೆಟ್ಟಿಲುಗಳನ್ನು ಎಷ್ಟು ವೇಗವಾಗಿ ಹತ್ತಬಲ್ಲಿರಿ? ಮಕ್ಕಳ ಉತ್ತರ, ಇಲ್ಲ ಬೆವರು – ಗಿವರು ಏಕೆ ಬರುತ್ತದೆ, ಶಾಲೆಗೆ ಬರುತ್ತೇವೆ, ಶಾಲೆ ಮುಗಿದ ನಂತರ ನೇರ ಮನೆಗೆ ತೆರಳುತ್ತೇವೆ, ಮತ್ತೆ ಮನೆಯಿಂದ ಹೊರಬಹುವುದಿಲ್ಲ ಎಂಬ ಮಕ್ಕಳ ಉತ್ತರ ನನಗೆ ಕೆಲವೊಮ್ಮೆ ದು:ಖವನ್ನುಂಟು ಮಾಡುತ್ತಿತ್ತು.

 

ಇಂತಹ ಬಾಲ್ಯ ನಮ್ಮ ಪ್ರಗತಿಯ ಲಕ್ಷಣವಲ್ಲ. ಮಕ್ಕಳನ್ನು ಕ್ರೀಡೆಗಳನ್ನಾಡುವಂತೆ ಪ್ರೋತ್ಸಾಹಿಸುವುದು ಪ್ರತಿಯೊಂದು ಕುಟುಂಬದ ಜವಾಬ್ಧಾರಿ. ಯಾವುದೇ ವಸ್ತುಗಳಿಲ್ಲದೆಯೂ ಆಟವಾಡಬಹುದಾಗಿದೆ. ಕ್ರಿಕೆಟ್‍ನಲ್ಲಿ ನಾವು ಉತ್ತಮವಾಗಿ ಆಡುತ್ತಿದ್ದೇವೆ. ಇದು ಹೆಮ್ಮೆಯ ವಿಷಯ. ಆದರೆ ಫುಟ್‍ಬಾಲ್ ಮತ್ತು ಹಾಕಿಯನ್ನು ಮರೆಯುತ್ತಿದ್ದೇವೆ, ಇದು ನನಗೆ ಅರ್ಥವಾಗದ ವಿಷಯ. ಇವುಗಳನ್ನು ನಾವು ಮರೆಯುವಂತಿಲ್ಲ.

 

ನನ್ನ ಮಿತ್ರರಾದ ಬೂಟಿಯಾ ಇಲ್ಲಿ ಆಸೀನರಾಗಿದ್ದಾರೆ ಇವರು ಫುಟ್‍ಬಾಲ್ ಕ್ರೀಡೆಯಲ್ಲಿ ದೇಶದ ಹೆಸರನ್ನು ಬೆಳಗಿಸಿದ್ದಾರೆ. ಈ ಬಾರಿಯ 19 ವರ್ಷದೊಳಗಿನವರ ಫಿಫಾ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ನಮ್ಮ ದೇಶದ ಯುವಜನರಲ್ಲಿ ಫುಟ್‍ಬಾಲ್ ಬಗ್ಗೆ ಆಸಕ್ತಿ ಹೆಚ್ಚಲಿ ಎಂಬ ಬಯಕೆಯಿಂದ ನಾನು ವಿಶ್ವದ ಫುಟ್‍ಬಾಲ್ ಕ್ರೀಡಾಪಟುಗಳನ್ನು ಭಾರತಕ್ಕೆ ಕರೆತರುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಕ್ರಿಕೆಟ್ ಹೊರತಾಗಿಯೂ ಅನೇಕ ಕ್ರೀಡೆಗಳಿವೆ ಅವುಗಳಲ್ಲಿ ನಾವು ಸಾಧನೆಯನ್ನು ಮಾಡಬೇಕಿದೆ ಎಂಬುದನ್ನು ಮನದಟ್ಟು ಮಾಡಿಕೊಡಲು ವಿಶ್ವದ ಕ್ರೀಡಾಪಟುಗಳು ಇಲ್ಲಿಗೆ ಬರಬೇಕಿದೆ. ಶೂಟಿಂಗ್ ಕ್ಷೇತ್ರದಲ್ಲಿ, ಬಿಲ್ಲುಗಾರಿಕೆ ಕ್ಷೇತ್ರದಲ್ಲಿ ಭಾರತದ ಯುವ ಕ್ರೀಡಾಪಟುಗಳು ಒಳ್ಳೆಯ ಪ್ರದರ್ಶನವನ್ನು ನೀಡುತ್ತಿದ್ದಾರೆ. ಮಿತ್ರರೇ, ಕ್ರೀಡಾ ಕ್ಷೇತ್ರದಲ್ಲು ಕೂಡಾ ಹೆಣ್ಣುಮಕ್ಕಳು ಗಂಡುಮಕ್ಕಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದ್ದಾರೆ ಎಂಬುದನ್ನು ತಾವು ಕಾಣುತ್ತಿದ್ದೀರಿ. ಹೆಣ್ಣುಮಕ್ಕಳು ದೇಶದ ಹೆಸರನ್ನು ಬೆಳಗುತ್ತಿದ್ದಾರೆ. ದೇಶದ ಗೌರವವನ್ನು ಎತ್ತಿ ಹಿಡಿಯುವುದರಲ್ಲಿ ಒಂದಕ್ಕಿಂತ ಒಂದು ಉತ್ತಮ ಕೆಲಸವನ್ನು ನಮ್ಮ ದೇಶದ ಹೆಣ್ಣುಮಕ್ಕಳು ಮಾಡುತ್ತಿದ್ದಾರೆ. ನಮ್ಮ ದೇಶದ ಹೆಣ್ಣುಮಕ್ಕಳಲ್ಲಿ ಇಂತಹ ಸಾಮರ್ಥ್ಯವಿದೆಯೆಂದಾದರೆ ಅದಕ್ಕಿಂತ ಹೆಚ್ಚಿಗೆ ಇನ್ನೇನು ಪ್ರೇರಣೆ ಬೇಕು? ಇದಕ್ಕಿಂತ ಹೆಚ್ಚಿಗೆ ಏನು ಪ್ರೇರಣೆ ಬೇಕು?

 

ಬನ್ನಿ ಮಿತ್ರರೇ, ದೇಶಾದ್ಯಂತ ಕ್ರೀಡೆಯನ್ನು ಜೀವನದ ಒಂದು ಭಾಗವನ್ನಾಗಿ ಮಾಡುವ ಅಭಿಯಾನವನ್ನು ಪ್ರಾರಂಭಿಸೋಣ. ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸೋಣ, ಉದ್ಯಮಿಗಳು ಮುಂದೆ ಬನ್ನಿ, ಕುಟುಂಬಗಳು ಮುಂದೆ ಬನ್ನಿ, ಸರಕಾರಗಳು ಮುಂದೆ ಬನ್ನಿ, ಸಮಾಜ ಕೂಡಾ ಮುಂದೆ ಬರಲಿ, ಎಲ್ಲರೂ ಮುಂದಿ ಬಂದು ಕ್ರೀಡಾ ಜಗತ್ತಿನಲ್ಲಿ ಭಾರತದ ಹೆಸರನ್ನು ಬೆಳಗಿಸೋಣ.

 

ಈ ಬಯಕೆಯೊಂದಿಗೆ ತಮಗೆಲ್ಲರಿಗೂ ಶುಭಾಶಯಗಳು.

 

ಇದು ಒಂದು ಮಹತ್ವಪೂರ್ಣ ಕಾರ್ಯಕ್ರಮ, ನವ ಹಿಂದೂಸ್ಥಾನ ನನ್ನೆದುರು ಇದೆ. ಇಲ್ಲಿಂದ ಹಿಂದಿರುಗುವ ಮನಸ್ಸಾಗುತ್ತಿಲ್ಲ ಅಂತಹ ವಾತಾವರಣವಿದೆ. ಆದರೆ ಇಲ್ಲಿಂದ ಹಿಂದಿರುಗುತಿದ್ದಂತೆ ರಾತ್ರಿ 12 ಗಂಟೆಗೆ ಸಂಸತ್ ಭವನದಲ್ಲಿ ಭವ್ಯ ಭಾರತದ ಅದೃಷ್ಟದ ಬಾಗಿಲು ಅಲ್ಲಿ ತೆರೆಯಲಿದೆ. ಆದ್ದರಿಂದ ನನಗೆ ಇಲ್ಲಿಂದ ನೇರವಾಗಿ ಸಂಸತ್ ಭವನ ತಲುಪಬೇಕಿದೆ. ಆದರೂ ಸಿಕ್ಕ ಸಮಯದಲ್ಲಿ ನಿಮ್ಮೊಡನೆ ಕಳೆಯುವ ಅವಕಾಶ ಲಭಿಸಿದೆ. ನಾನು ಎಲ್ಲ ಕ್ರೀಡಾಪಟುಗಳಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಮಾತುಗಳಿಗಿಂತ ನಿಮ್ಮ ಬೆವರಿಗೆ ಹೆಚ್ಚಿನ ಶಕ್ತಿ ಇದೆ. ತಮ್ಮ ಪರಿಶ್ರಮಕ್ಕೆ ಹೆಚ್ಚಿನ ಶಕ್ತಿ ಇದೆ. 

 

ಬನ್ನಿ ಮಿತ್ರರೇ, ಮುಂದೆ ಬನ್ನಿ ಇವರುಗಳೇ ದೇಶದ ಹೆಸರನ್ನು ಬೆಳಗಿಸಿದವರು. ಇಂತಹವರುಗಳಲ್ಲಿ ಇತ್ತೀಚೆಗೆ ತಾವು ಶ್ರೀಕಾಂತ್ ಅವರ ಹೆಸರನ್ನು ಕೇಳಿರಬಹುದು. ಶ್ರೀಕಾಂತ್ ಸ್ವಲ್ಪ ನಿನ್ನ ಕೈಯನ್ನು ಮೇಲೆತ್ತು. ಶ್ರೀಕಾಂತ್ ಈಗ ತಾನೆ ಹಿಂದೂಸ್ತಾನದ ಹೆಸರನ್ನು ಬೆಳಗಿಸಿ ವಾಪಸಾಗಿದ್ದಾರೆ. 

 

ಸಹೋದರ, ಸಹೋದರಿಯರೇ, ಇವರೇ ನಮ್ಮ ದೇಶದ ಆಸ್ತಿ. ಎಲ್ಲರೂ ಎದ್ದು ನಿಂತು ಕರತಾಡನದ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸೋಣ.

ಧನ್ಯವಾದಗಳು.