Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನಲ್ಲಿ ಪ್ರಧಾನಮಂತ್ರಿ

ಗುಜರಾತ್ ನಲ್ಲಿ ಪ್ರಧಾನಮಂತ್ರಿ

ಗುಜರಾತ್ ನಲ್ಲಿ ಪ್ರಧಾನಮಂತ್ರಿ


  • ಗಾಂಧಿನಗರದಲ್ಲಿ ತಾಯಿ ಹಿರಾ ಬಾ ಅವರಿಂದ ಆಶೀರ್ವಾದ ಪಡೆದ ಮೋದಿ
  • ಲಿಮ್ಖೇದದಲ್ಲಿ ಗುಡ್ಡಗಾಡು ಅಭಿವೃದ್ಧಿ ಯೋಜನೆಗಳ ಅನಾವರಣ
  • ನವಸಾರಿಯಲ್ಲಿ ದಿವ್ಯಾಂಗಿಗಳಿಗೆ ಸಾಧನ ಸಲಕರಣೆಗಳ ವಿತರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ಗೆ ಆಗಮಿಸಿದ್ದರು. ತಮ್ಮ ಜನ್ಮ ದಿನವಾದ ಇಂದು, ಮುಂಜಾನೆ, ಗಾಂಧಿನಗರದಲ್ಲಿ ತಮ್ಮ ತಾಯಿ ಹಿರಾ ಬಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್  ಸೇರಿದಂತೆ ಹಲವು ನಾಯಕರು ಪ್ರಧಾನಮಂತ್ರಿಯವರಿಗೆ ದೂರವಾಣಿ ಮೂಲಕ ಶುಭ ಕೋರಿದರು.

ಇಂದು ಗಾಂಧಿನಗರದಲ್ಲಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಟಿ.ಎಸ್. ಠಾಕೂರ್ ಅವರು ರಾಜಭವನಕ್ಕೆ ಭೇಟಿ ನೀಡಿದ, ಪ್ರಧಾನಿಯವರಿಗೆ ಜನ್ಮ ದಿನದ ಶುಭ ಕೋರಿದರು.
ಪ್ರಧಾನಮಂತ್ರಿಯವರು ಸಮಾಜದ ವಿವಿಧ ವರ್ಗಗಳಿಂದ ಸಾಮಾಜಿಕ ತಾಣ ಮತ್ತು ನರೇಂದ್ರ ಮೋದಿ ಆಪ್ ಮೂಲಕ ಶುಭಾಶಯ ಸ್ವೀಕರಿಸಿದರು. 
ಇಂದು ದಹೋದ್ ಜಿಲ್ಲೆಯ ಲಮ್ಖೇದದಲ್ಲಿ ಗುಡ್ಡುಗಾಡು ಕಲ್ಯಾಣಕ್ಕೆ ವಿವಿಧ ಯೋಜನೆ ಅನಾವರಣ ಮಾಡಿದ ಪ್ರಧಾನಮಂತ್ರಿಯವರು ದೊಡ್ಡ ಸಂಖ್ಯೆ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಗುಜರಾತ್ ಗೆ ನೀರು ಸರಬರಾಜು ದೊಡ್ಡ ಸವಾಲಾಗಿದೆ ಎಂದ ಅವರು, ಈ ಸವಾಲನ್ನು ಯಶಸ್ವಿಯಾಗಿ ಎದುರಿಸುವುದಾಗಿ ಹೇಳಿದರು.
ತಮ್ಮ ಸರ್ಕಾರ ಬಡವರು ಮತ್ತು ಅಂಚಿನಲ್ಲಿರುವವರ ಕಲ್ಯಾಣಕ್ಕೆ ಬದ್ಧವಾದ ಸರ್ಕಾರವಾಗಿದೆ ಎಂಬುದನ್ನು ಅವರು ಪುನರುಚ್ಚರಿಸಿದರು. ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ಮಂತ್ರ ಈಗ ಎಲ್ಲೆಡೆ ಅಣುರಣಿಸುತ್ತಿದೆ ಎಂದರು.  
ನವಸಾರಿಯಲ್ಲಿ ದಿವ್ಯಾಂಗದವರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡುವ ಸಮಾರಂಭದಲ್ಲಿ ಪ್ರಧಾನಿ ಪಾಲ್ಗೊಂಡಿದ್ದರು. ಈ ಘಟನೆಯ ಸಂಪೂರ್ಣ ಪ್ರಮಾಣದ ಮೂಲಕ ಇಂದು ಸ್ಥಾಪಿಸಲ್ಪಟ್ಟಿರುವ ದಾಖಲೆಗಳನ್ನು ಪ್ರಸ್ತಾಪಿಸಿದಪ್ರಧಾನಿ ಈ ಸಾಧನೆಗಾಗಿ ನವಸಾರಿಗೆ ಅಭಿನಂದನೆ ಸಲ್ಲಿಸಿದರು. ನವಸಾರಿ ಈ ಹಿಂದೆ ಓದುವ ಆಸಕ್ತಿಯಿಂದ ಹೆಜ್ಜೆಗುರುತು ಮೂಡಿಸಿತ್ತು ಇಂದು, ದಿವ್ಯಾಂಗದವರ ಬಗ್ಗೆ ಕಾಳಜಿ ತೋರುವ ಮೂಲಕ ಗೌರವ ಪಡೆದಿದೆ ಎಂದರು.
ಚಲ್ತಾ ಹೈ (ನಡೆಯುತ್ತದೆ) ಎಂಬಂತ ನುಡಿಗಟ್ಟುಗಳು ಈಗ ಇತಿಹಾಸವಾಗಿದೆ; ವಿಶ್ವ ಭಾರತದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದೆ ಮತ್ತು ನಾವು ಈ ಅವಕಾಶ ಕೈತಪ್ಪಲು ಬಿಡುವುದಿಲ್ಲ ಎಂದರು. ಈ ಹಿಂದೆ ಹೆಚ್ಚಿನ ಒತ್ತು ನೀಡದ ಕ್ಷೇತ್ರಗಳಿಗೆ ಗಮನ ಹರಿಸಲು ಅಕ್ಸೆಸಬಲ್ ಇಂಡಿಯಾ ಅಭಿಯಾನದಲ್ಲಿ ಗುರಿ ಹೊಂದಲಾಗಿದೆ ಎಂದರು.

AKT/HS –  150865