Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನ ಬಾಜಿಪುರದಲ್ಲಿ ಪ್ರಧಾನಿಯವರಿಂದ ನೀರಾವರಿ ಮತ್ತು ನೀರು ಪೂರೈಕೆ ಯೋಜನೆಗೆ ಚಾಲನೆ, ಪಶು ಮೇವು ಘಟಕದ ಉದ್ಘಾಟನೆ

ಗುಜರಾತ್ ನ ಬಾಜಿಪುರದಲ್ಲಿ ಪ್ರಧಾನಿಯವರಿಂದ ನೀರಾವರಿ ಮತ್ತು ನೀರು ಪೂರೈಕೆ ಯೋಜನೆಗೆ ಚಾಲನೆ, ಪಶು ಮೇವು ಘಟಕದ ಉದ್ಘಾಟನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ದಕ್ಷಿಣ ಗುಜರಾತ್ ನ ಬಾಜಿಪುರದಲ್ಲಿ ಎಸ್.ಯು.ಎಂ.ಯು.ಎಲ್. ಪಶು ಆಹಾರ ಘಟಕವನ್ನು ಉದ್ಘಾಟಿಸಿದರು. ಇದೇ ವಳೆ ಅವರು ಮೂರು ಏತ ನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ತಾಪಿ ಜಿಲ್ಲೆಯ ವ್ಯಾರಾ ಪಟ್ಟಣ ಮತ್ತು ಜೇಸಿನ್ ಪುರ – ಡೋಲ್ವಾನ್ ಸಮೂಹದ ಕುಡಿಯುವ ನೀರಿನ ಪೂರೈಕೆ ಯೋಜನೆಯನ್ನೂ ಉದ್ಘಾಟಿಸಿದರು.

ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ದೀರ್ಘ ಕಾಲದಿಂದ ಈ ರಂಗದಲ್ಲಿ ಕೆಲಸ ಮಾಡಿದ್ದಾಗಿ ಹೇಳಿದರು. ಎಸ್.ಯು.ಎಂ.ಯು.ಎಲ್. – ಸೂರತ್ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ – ಹತ್ತಿರದ ಪ್ರದೇಶಗಳ ಹಲವು ಜನರನ್ನು ಸಬಲೀಕರಿಸಿದೆ ಎಂದರು. ಉಂಬೇರ್ ಗಾವ್ ನಿಂದ ಅಂಬಾಜಿ ಶ್ರೇಣಿಯು ಪರಿವರ್ತನೆಯಾಗಿದೆ ಮತ್ತು ಇದು ಗುಜರಾತ್ ನ ಗುಡ್ಡಗಾಡು ಸಮುದಾಯಕ್ಕೆ ಲಾಭದಾಯಕವಾಗಿದೆ ಎಂದರು. ಎಸ್.ಯು.ಎಂ.ಯು.ಎಲ್.ನಲ್ಲಿ ನಾವು ಸಕಾರಾತ್ಮಕವಾದ ಫಲಿತಾಂಶವನ್ನು ಕಾಣುತ್ತಿದ್ದೇವೆ, ಇದು ಸಹಕಾರ ಮತ್ತು ಸರಕಾರ ಒಟ್ಟಾಗಿ ದುಡಿದಾಗ ಮಾತ್ರ ಸಾಧ್ಯ ಎಂದು ಪ್ರಧಾನಿ ಹೇಳಿದರು. ರೈತರು ಮತ್ತು ಡೈರಿಗಳು ಹೆಚ್ಚು ನಿಕಟವಾಗಿ ಕೆಲಸ ಮಾಡಿದಾಗ ಎಸ್.ಯು.ಎಂ.ಯು.ಎಲ್. ಉತ್ತಮ ಕಾರ್ಯ ಆಗುವುದನ್ನು ಪ್ರದರ್ಶಿಸಬಹುದು ಎಂದರು.

ತಪಿ ಜಿಲ್ಲೆ ಗುಜರಾತ್ ನ ಹೊಸ ಜಿಲ್ಲೆಗಳಲ್ಲಿ ಒಂದಾಗಿದ್ದು, ಅದು ಗಣನೀಯ ಪ್ರಗತಿ ಸಾಧಿಸುತ್ತಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಹೇಳಿದರು.

ಕೃಷಿ ವಲಯದಲ್ಲಿ ಮೌಲ್ಯವರ್ಧನೆಗೆ ಕರೆ ನೀಡಿದ ಪ್ರಧಾನಿ, ತಲಾ ಹಾಲು ಉತ್ಪಾದನೆಯ ಹೆಚ್ಚಳಕ್ಕೆ ಗಮನ ಹರಿಸುವಂತೆ ತಿಳಿಸಿದರು.

***

AKT/SH