ಪಿಎಂಇಂಡಿಯಾ
ಭಾರತದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಹೆಚ್ಚು ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕಳೆದ 12 ವರ್ಷಗಳಲ್ಲಿ ಶ್ರಮಿಸಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದ್ದಾರೆ. ಅತ್ಯಂತ ದುರ್ಬಲ ವರ್ಗದವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮ ಎಂದು ಖ್ಯಾತಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನದಂತಹ ಇತರ ಪ್ರಯತ್ನಗಳು ಔಷಧಗಳನ್ನು ಕೈಗೆಟುಕುವಂತೆ ಮಾಡಿದೆ ಎಂದು ಶ್ರೀ ಮೋದಿ ಅವರು ಗಮನ ಸೆಳೆದಿದ್ದಾರೆ.
ಸ್ಟೆಂಟ್ ಗಳು ಮತ್ತು ಮೊಣಕಾಲು ಇಂಪ್ಲಾಂಟ್ ಗಳು ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಅನೇಕರಿಗೆ ಅನುಕೂಲವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ.
ಈಗ ವೈದ್ಯಕೀಯ ಶಿಕ್ಷಣ ನೀಡುವ ಸಂಸ್ಥೆಗಳು ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಸೀಟುಗಳು ಲಭ್ಯವಿರುವುದರಿಂದ ಜನರಿಗೆ ವೈದ್ಯಕೀಯ ಶಿಕ್ಷಣ ಹೆಚ್ಚು ಸುಲಭವಾಗಿ ಲಭ್ಯವಾಗುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಗಮನಿಸಿದ್ದಾರೆ. ಆರೋಗ್ಯಕರ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಈವರೆಗೆ ಕೈಗೊಂಡಿರುವ ಕ್ರಮಗಳನ್ನು ಮುಂದುವರಿಸುವುದಾಗಿ ಒತ್ತಿ ಹೇಳಿರುವ ಅವರು, ಆರೋಗ್ಯ ಕ್ಷೇತ್ರವು ಹೇಗೆ ರೂಪಾಂತರಗೊಂಡಿದೆ ಎಂಬ ಬಗ್ಗೆ ನೋಟ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“ಗುಣಮಟ್ಟದ ಆರೋಗ್ಯ ಸೇವೆಯನ್ನು ಹೆಚ್ಚು ಕೈಗೆಟುಕುವಂತಾಗಿಸಲು ಮತ್ತು ಲಭ್ಯವಾಗುವಂತೆ ಮಾಡಲು ಕಳೆದ 12 ವರ್ಷಗಳಲ್ಲಿ ಭಾರತ ಶ್ರಮಿಸಿದೆ”.
“ಅತ್ಯಂತ ದುರ್ಬಲರಿಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವ ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮವಾದ ಆಯುಷ್ಮಾನ್ ಭಾರತ್ ಯೋಜನೆ ಹೊಂದಿರುವ ರಾಷ್ಟ್ರ ಎಂದು ನಾವು ಪ್ರಸಿದ್ಧರಾಗಿರುವುದು ಹೆಮ್ಮೆಯ ಸಂಗತಿ.”
“ಪಿಎಂ ಭಾರತೀಯ ಜನೌಷಧಿ ಪರಿಯೋಜನದಂತಹ ಇತರ ಪ್ರಯತ್ನಗಳು ಔಷಧಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಿಸಿವೆ. ಕೈಗೆಟುಕುವ ಬೆಲೆಗಳಲ್ಲಿ ಸ್ಟೆಂಟ್ ಗಳು ಮತ್ತು ಮೊಣಕಾಲು ಇಂಪ್ಲಾಂಟ್ ಗಳು ದೊರೆಯುತ್ತಿರುವುದರಿಂದ ಅನೇಕ ಜನರಿಗೆ ಸಹಾಯವಾಗಿದೆ.
ಅದೇ ವೇಳೆ, ಹೆಚ್ಚಿನ ಸಂಸ್ಥೆಗಳು ವೈದ್ಯಕೀಯ ಶಿಕ್ಷಣ ನೀಡುತ್ತಿದ್ದು ಹೆಚ್ಚು ಸೀಟುಗಳು ಲಭ್ಯವಿರುವುದರಿಂದ ಹೆಚ್ಚು ಜನರು ವೈದ್ಯಕೀಯ ಶಿಕ್ಷಣ ಪಡೆಯಬಹುದಾಗಿದೆ.
ಇದೇ ನೆಲಗಟ್ಟಿನಲ್ಲಿ ಆರೋಗ್ಯಕರ ಭಾರತವನ್ನು ನಿರ್ಮಿಸುವುದನ್ನು ಮುಂದುವರಿಸಲಿದ್ದೇವೆ.
#12YearsOfSwasthBharat”
“ಆರೋಗ್ಯ ಕ್ಷೇತ್ರವು ಹೇಗೆ ರೂಪಾಂತರಗೊಂಡಿದೆ ಎಂಬುದರ ಬಗ್ಗೆ ಒಂದು ನೋಟ…
#12YearsOfSwasthBharat”
*****
Over the last 12 years, India has worked to make quality healthcare more affordable and accessible.
— Narendra Modi (@narendramodi) June 14, 2026
We feel proud when we are known as the nation with the world’s largest healthcare programme, Ayushman Bharat, which provides top-quality healthcare to the most vulnerable.…
A glimpse of how the health sector has been transformed….#12YearsOfSwasthBharat https://t.co/eBbeB5Awsq
— Narendra Modi (@narendramodi) June 14, 2026