ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಮರ್ಥ್ಯದ ಪ್ರಮಾಣಪತ್ರಗಳನ್ನು ಪರಸ್ಪರ ಮಾನ್ಯ ಮಾಡುವ ಕುರಿತಂತೆ ಸಂಯುಕ್ತ ಅರಬ್ ಎಮಿರೇಟ್ಸ್ ಹಾಗೂ ಭಾರತದ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ.
ಉದ್ದೇಶಿತ ತಿಳಿವಳಿಕೆ ಒಪ್ಪಂದವು, ಸಾಗರ ಶಿಕ್ಷಣ ಮತ್ತು ತರಬೇತಿ, ಸಾಮರ್ಥ್ಯದ ಪ್ರಮಾಣಪತ್ರ, ದೃಢೀಕರಣ, ತರಬೇತಿ ಸಾಕ್ಷ್ಯಗಳು ಮತ್ತು ಮತ್ತೊಂದು ರಾಷ್ಟ್ರವು ಒಪ್ಪಂದದ 1/10 ನಿಬಂಧನೆಗಳ ಅನುಸಾರವಾಗಿ ಸರ್ಕಾರಗಳು ನಾವಿಕರಿಗೆ ನೀಡಿರುವ ವೈದ್ಯಕೀಯ ಸಾಮರ್ಥ್ಯದ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಲು ಮತ್ತು ನಾವಿಕರ ತರಬೇತಿ ಮತ್ತು ನಿರ್ವಹಣೆಗೆ ಎರಡೂ ರಾಷ್ಟ್ರಗಳ ನಡುವೆ ಸಹಕಾರಕ್ಕೆ ದಾರಿ ಮಾಡಿಕೊಡುತ್ತದೆ.
ಈ ತಿಳಿವಳಿಕೆ ಒಪ್ಪಂದವು ಪ್ರತಿ ವಿಧ ಮತ್ತು ಹಂತದ ನಿರ್ಧರಣೆ ಒಳಗೊಂಡ ತರಬೇತಿಗೆ ಎಸ್.ಟಿ.ಸಿ.ಡಬ್ಲ್ಯು ಸಂಹಿತೆಯಲ್ಲಿ ಉಲ್ಲೇಖಿಸಿರುವಂತೆ ಮತ್ತು ಆದೇಶಿಸಿರುವಂತೆ, ಶಿಕ್ಷಣ, ತರಬೇತಿ ಮತ್ತು ಎಸ್.ಟಿ.ಸಿ.ಡಬ್ಲ್ಯು ಒಪ್ಪಂದದ ಅಗತ್ಯದಂತೆ ನಾವಿಕರ ನಿರ್ಧರಣೆಯ ಖಾತ್ರಿಯನ್ನು ಒದಗಿಸುತ್ತದೆ.
AKT/VBA/SH