ಪಿಎಂಇಂಡಿಯಾ
ಗೋರಖ್ ನಾಥ ಮಂದಿರಕ್ಕೆ ಭೇಟಿ
ಗೋರಖ್ಪುರ ರಸಗೊಬ್ಬರ ಕಾರ್ಖಾನೆ ಮತ್ತು ಎಐಐಎಂಎಸ್ ಶಿಲಾಫಲಕಗಳ ಅನಾವರಣ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗೋರಖ್ಪುರದ ಗೋರಖ್ ನಾಥ ಮಂದಿರಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಮಹಂತ ಅವೈದ್ಯನಾಥ ಜಿ ಅವರ ಪ್ರತಿಮೆಯ ಅನಾವರಣ ಮಾಡಿದರು ಮತ್ತು ಶ್ರೀಗಳು ಮತ್ತು ಸಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅವರು ಮಹಂತ ಅವೈದ್ಯನಾಥಾನಂದ ಅವರೊಂದಿಗಿನ ತಮ್ಮ ಸಂಪರ್ಕವನ್ನು ಸ್ಮರಿಸಿದ ಅವರು, ನಮ್ಮ ಸಂತರು ಮತ್ತು ಶ್ರೀಗಳು ಶ್ರೇಷ್ಠರಾಗಿದ್ದು ಮತ್ತು ಅವರು ಸದಾ ಬಡವರು ಮತ್ತು ಸಮಾಜದ ಬಗ್ಗೆ ಸಹಾನುಭೂತಿ ಉಳ್ಳವರಾಗಿದ್ದಾರೆ ಎಂದರು.
ನಂತರ ಪ್ರಧಾನಮಂತ್ರಿಯವರು, ಗೋರಖ್ಪುರ ರಸಗೊಬ್ಬರ ಘಟಕ ಮತ್ತು ಎಐಐಎಂಎಸ್ ನ ಶಂಕುಸ್ಥಾಪನೆಯ ಶಿಲಾಫಲಕಗಳನ್ನು ಅನಾವರಣ ಮಾಡಿದರು. ಅವರಿಗೆ ಎರಡೂ ಯೋಜನೆಗಳ ಮುಖ್ಯಾಂಶಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಾತ್ಯಕ್ಷಿಗೆ ತೋರಿಸಲಾಯಿತು.
ಈ ಸಂದರ್ಭದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಸಮತೋಲಿತ ಅಭಿವೃದ್ಧಿಗಾಗಿ ಪೂರ್ವ ಭಾರತದ ಅಭಿವೃದ್ಧಿ ಅಗತ್ಯವಾಗಿದೆ ಎಂದು ಹೇಳಿದರು.
ರಸಗೊಬ್ಬರವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವಾಗ, ರಸಗೊಬ್ಬರ ಘಟಕಗಳನ್ನು ಮುಚ್ಚುವುದು ಮತ್ತು ನಮ್ಮ ಯುವಕರು ಉದ್ಯೋಗ ಇಲ್ಲದೆ ಇರುವುದು ಒಪ್ಪಿಕೊಳ್ಳತಕ್ಕದ್ದಲ್ಲ ಎಂದು ಪ್ರಧಾನಿ ಹೇಳಿದರು. ರಸಗೊಬ್ಬರ ಘಟಕದ ಮರು ಚಾಲನೆಯಿಂದ ರಾಜ್ಯದಲ್ಲಿ ಕೈಗಾರಿಕಾ ಪರಿವರ್ತನೆಯ ಕಿಡಿ ಹೊತ್ತಿಸಬಹುದು ಎಂದರು.
ವಲಯದಲ್ಲಿ ಜನರು ಆರೋಗ್ಯಪೂರ್ಣವಾದ ಬದುಕು ನಡೆಸಲು ಹೇಗೆ ಸಂಪನ್ಮೂಲವನ್ನು ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಪ್ರಧಾನಿ ವಿವರಿಸಿದರು. ವಲಯದಲ್ಲಿನ ಪ್ರವಾಸೋದ್ಯಮದ ಬೃಹತ್ ಸಾಮರ್ಥ್ಯದ ಬಗ್ಗೆ ಹೇಳಿದ ಅವರು, ಹೊಸ ನಾಗರಿಕ ವಿಮಾನಯಾನ ನೀತಿಯಲ್ಲಿ ಪ್ರಾದೇಶಿಕ ಸಂಪರ್ಕಕ್ಕೆ ಆದ್ಯತೆ ನೀಡಲಾಗಿದೆ ಮತ್ತು ಇದು ಹೆಚ್ಚಿನ ಪ್ರವಾಸಿಗರನ್ನು ಕರೆತರುತ್ತದೆ ಎಂದರು.
***
AKT/AT
गोरखनाथ मंदिर में दर्शन करने का सौभाग्य मिला। pic.twitter.com/WgFNJALLLO
— Narendra Modi (@narendramodi) July 22, 2016
महंत अवैद्यनाथ जी को श्रद्धांजलि। समाज सेवा में उनका योगदान हमेशा लोगों को प्रेरित करेगा। pic.twitter.com/5XuR6wm9WL
— Narendra Modi (@narendramodi) July 22, 2016
At the Gorakhnath Temple, spoke about the positive contribution of saints & seers in our society. https://t.co/xMSU1hKA4B
— Narendra Modi (@narendramodi) July 22, 2016
It took 26 long years for fertiliser plant to reopen in Gorakhpur. This plant will enhance the region’s progress. pic.twitter.com/B8Boo3SdU8
— Narendra Modi (@narendramodi) July 22, 2016
आज एक विजय यात्रा का शिलान्यास हुआ है, जो गरीबी और बेरोजगारी को परास्त करने की विजय यात्रा है।https://t.co/8FbZNDJjnu
— Narendra Modi (@narendramodi) July 22, 2016
भारत का विकास तब तक अधूरा है, जब तक हमारा पूर्वी छोर विकसित नहीं होता।https://t.co/E7oxfcIKUs
— Narendra Modi (@narendramodi) July 22, 2016
Keeping in mind eastern UP’s tourism potential, we are focussing on improving road infrastructure in the region.https://t.co/GA6OuNC5OJ
— Narendra Modi (@narendramodi) July 22, 2016
परिवारवाद और जातिवाद की राजनीति बहुत हो चुकी... इससे यूपी का भला नहीं होगा। सिर्फ विकासवाद से भला होगा।https://t.co/cygASYLCUy
— Narendra Modi (@narendramodi) July 22, 2016