Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟ 2026ರಲ್ಲಿ ವೇಟ್‌ ಲಿಫ್ಟಿಂಗ್‌ ನಲ್ಲಿ ಬೆಳ್ಳಿ ಪದಕ ಜಯಿಸಿರುವ ಜ್ಞಾನೇಶ್ವರಿ ಯಾದವ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟ 2026ರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿರುವ ಜ್ಞಾನೇಶ್ವರಿ ಯಾದವ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

 ಈ ಸ್ಪರ್ಧೆಯಲ್ಲಿ ಜ್ಞಾನೇಶ್ವರಿ ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದು, ಈ ಯಶಸ್ಸು ಇನ್ನಷ್ಟು ಗಮನಾರ್ಹವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಈ ಯಶಸ್ಸು ಭಾರತದ ಯುವಜನರಿಗೆ ಪ್ರೇರಣೆಯಾಗಲಿ ಎಂದು ಆಶಿಸಿರುವ ಪ್ರಧಾನಮಂತ್ರಿಯವರು, ಜ್ಞಾನೇಶ್ವರಿ ಅವರ ಮುಂದಿನ ಕ್ರೀಡಾ ಪಯಣದಲ್ಲಿ ನಿರಂತರ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್‌ ಪೋಸ್ಟ್‌ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟ 2026ರಲ್ಲಿ ವೇಟ್‌ ಲಿಫ್ಟಿಂಗ್‌ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಜ್ಞಾನೇಶ್ವರಿ ಯಾದವ್ ಅವರಿಗೆ ಅಭಿನಂದನೆಗಳು. ಈ ಸ್ಪರ್ಧೆಯಲ್ಲಿ ಅವರು ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿರುವುದರಿಂದ ಈ ಯಶಸ್ಸು ಇನ್ನಷ್ಟು ಗಮನಾರ್ಹವಾಗಿದೆ. ಅವರ ಯಶಸ್ಸು ಭಾರತದ ಯುವ ಸಮುದಾಯಕ್ಕೆ ಪ್ರೇರಣೆ ನೀಡಲಿ. ಅವರು ತಮ್ಮ ಮುಂದಿನ ಪಯಣದಲ್ಲಿ ನಿರಂತರ ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ.

#CWG2026″

 

*****