Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟ 2026 ರಲ್ಲಿ ಪಾಲ್ಗೊಂಡಿರುವ ಭಾರತೀಯ ತಂಡಕ್ಕೆ ಪ್ರಧಾನಮಂತ್ರಿ ಶುಭ ಹಾರೈಕೆ


ಗ್ಲಾಸ್ಗೋ ಕಾಮನ್‌ ವೆಲ್ತ್ ಕ್ರೀಡಾಕೂಟ 2026 ಪ್ರಾರಂಭವಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತೀಯ ತಂಡಕ್ಕೆ ಶುಭ ಹಾರೈಸಿದ್ದಾರೆ.

ಕ್ರೀಡಾಪಟುಗಳು ಉತ್ಸಾಹ, ದೃಢನಿಶ್ಚಯ ಮತ್ತು ಶ್ರೇಷ್ಠತೆಯ ಮನೋಭಾವದೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸುವರು ಎಂದು ಶ್ರೀ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕ್ರೀಡಾಪಟುಗಳ ಕೌಶಲ್ಯ ಮತ್ತು ಸಮರ್ಪಣೆ ಅಸಂಖ್ಯಾತ ಭಾರತೀಯರಿಗೆ ಸದಾ ಪ್ರೇರಣಾದಾಯಕ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ಕಾಮನ್ ವೆಲ್ತ್ #Glasgow2026 ಕ್ರೀಡಾಕೂಟ ಪ್ರಾರಂಭವಾಗುತ್ತಿರುವಂತೆ ಭಾರತೀಯ ತಂಡಕ್ಕೆ ನನ್ನ ಶುಭ ಹಾರೈಕೆಗಳು.

ನಮ್ಮ ಕ್ರೀಡಾಪಟುಗಳು ಉತ್ಸಾಹ, ದೃಢನಿಶ್ಚಯ ಮತ್ತು ಶ್ರೇಷ್ಠತೆಯ ಮನೋಭಾವದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು ಎಂದು ನನಗೆ ವಿಶ್ವಾಸವಿದೆ. 

ನಮ್ಮ ಕ್ರೀಡಾಪಟುಗಳ ಕೌಶಲ್ಯ ಮತ್ತು ಸಮರ್ಪಣೆ ಅಸಂಖ್ಯಾತ ಭಾರತೀಯರಿಗೆ ಯಾವಾಗಲೂ ಸ್ಫೂರ್ತಿ ತುಂಬಲಿದೆ.

@Glasgow_2026″

 

*****