ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪಂಚಕುಲದ ಮಾನಸದೇವಿ ಸಮುಚ್ಚಯ(ಎಂಡಿಸಿ)ದಲ್ಲಿ 60 ಮೀಟರ್ ಗಳ ಹೊರ ಮುಖ್ಯ ರಸ್ತೆ ನಿರ್ಮಾಣಕ್ಕಾಗಿ ಚಂಡೀಗಢದಲ್ಲಿರುವ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಶೋಧನಾ ಕೇಂದ್ರ(ಐಐಎಸ್ ಡಬ್ಲ್ಯುಸಿ)ಕ್ಕೆ ಸೇರಿದ 13111.55 ಚದರ ಮೀಟರ್ ಜಮೀನನ್ನು ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ)ಕ್ಕೆ ಈ ಕೆಳಗಿನ ಮಾದರಿಯಲ್ಲಿ ವರ್ಗಾಯಿಸಲು ತನ್ನ ಅನುಮೋದನೆ ನೀಡಿದೆ:-.
a) ಐಐಎಸ್ ಡಬ್ಲ್ಯುಸಿ ಸಂಶೋಧನಾ ಕೇಂದ್ರಕ್ಕೆ ಸೇರಿದ 13,290.30 ಚದರ ಮೀಟರ್ ಜಮೀನನ್ನು ಆ ದಿನಕ್ಕೆ ಅನ್ವಯಿಸುವ ಸಂಗ್ರಹಿತ ದರದಲ್ಲಿ ಹುಡಾಗೆ ವರ್ಗಾವಣೆ.
b) ಹುಡಾಗೆ ಸೇರಿದ 178.75 ಚದರ ಮೀಟರ್ ಜಮೀನನ್ನು ಚಂಡೀಗಢದ ಐಐಎಸ್ ಡಬ್ಲ್ಯುಸಿ ಸಂಶೋಧನಾ ಕೇಂದ್ರಕ್ಕೆ ವರ್ಗಾವಣೆ.
c) ಐಐಎಸ್ ಡಬ್ಲ್ಯುಸಿ ಸಂಶೋಧನಾ ಕೇಂದ್ರ ಮತ್ತು ಹುಡಾ ನಡುವೆ 410 ಚದರ ಮೀಟರ್ ಗಳ ಜಮೀನಿನ ಪರಸ್ಪರ ವಿನಿಮಯ.
ಪಂಚಕುಲದ ಮಾನಸ ದೇವಿ ಸಮುಚ್ಛಯ (ಎಂ.ಡಿ.ಸಿ.)ಯಲ್ಲಿ ಹೊರ ಮುಖ್ಯ ರಸ್ತೆ ನಿರ್ಮಾಣ ಮಾಡಲು ಸರ್ಕಾರಿ ಜಮೀನನ್ನು ವರ್ಗಾವಣೆ ಮಾಡುವುದರಿಂದ ಹೆಚ್ಚಿನ ಉದ್ಯೋಗಾವಕಾಶದೊಂದಿಗೆ ವಲಯದ ಅಭಿವೃದ್ಧಿಯೂ ಆಗಲಿದೆ. ಈ ನಿರ್ಧಾರವು ಪ್ರಮುಖ ವಲಯಗಳಲ್ಲಿ ಸಮಗ್ರ ಆರ್ಥಿಕ ಪ್ರಗತಿಗಾಗಿ ಮೂಲಸೌಕರ್ಯ ಉತ್ತೇಜಿಸುವ ಸರ್ಕಾರದ ಯೋಜನೆಯ ಭಾಗವಾಗಿದೆ.
AD/VBA/SH