ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಛತ್ತೀಸಗಢದಲ್ಲಿ ಸಿ.ಆರ್.ಪಿ.ಎಫ್. ಯೋಧರ ಮೇಲೆ ನಡೆದ ದಾಳಿಯನ್ನು ಹೇಡಿತನದಿಂದ ಕೂಡಿದ ಮತ್ತು ಶೋಚನೀಯ ದಾಳಿ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಸಿ.ಆರ್.ಪಿ.ಎಫ್. ಯೋಧರ ಶೌರ್ಯವನ್ನು ಪ್ರಶಂಸಿಸಿರುವ ಪ್ರಧಾನಿ, ಹುತಾತ್ಮರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
“ಛತ್ತೀಸಗಢದಲ್ಲಿ ಸಿಆರ್.ಪಿ.ಎಫ್. ಯೋಧರ ಮೇಲಿನ ದಾಳಿ ಹೇಡಿತನ ಮತ್ತು ಶೋಚನೀಯವಾದ್ದು. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ.
ನಾವು ನಮ್ಮ ಸಿ.ಆರ್.ಪಿ.ಎಫ್. ಯೋಧರ ಶೌರ್ಯದ ಬಗ್ಗೆ ಹೆಮ್ಮೆ ಪಡುತ್ತೇವೆ. ಹುತಾತ್ಮರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ.
ಛತ್ತೀಸಗಢದ ಇಂದಿನ ದಾಳಿಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ”, ಎಂದು ಪ್ರಧಾನಿ ಹೇಳಿದ್ದಾರೆ.
***
Attack on @crpfindia personnel in Chhattisgarh is cowardly & deplorable. We are monitoring the situation closely.
— Narendra Modi (@narendramodi) April 24, 2017
We are proud of the valour of our @crpfindia personnel. The sacrifice of the martyrs will not go in vain. Condolences to their families.
— Narendra Modi (@narendramodi) April 24, 2017
May those injured in today's attack in Chhattisgarh recover at the earliest.
— Narendra Modi (@narendramodi) April 24, 2017