ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ಬಸ್ತಾರ್ ನ ಕರಣ್ ಪುರದಲ್ಲಿರುವ ಕೋಬ್ರಾ ಕಾರ್ಯಾಚರಣೆ ನೆಲೆಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಣೆಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.
ಭದ್ರತಾ ಪಡೆಗಳ ಸಮರ್ಪಣೆಯಿಂದ ಸಾಧ್ಯವಾಗಿರುವ ಬಸ್ತಾರ್ ನಲ್ಲಿ ದೀಪಾವಳಿಯ ಉತ್ಸಾಹವನ್ನು ಈ ಆಚರಣೆಗಳು ಪ್ರತಿಬಿಂಬಿಸುತ್ತವೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ನಕ್ಸಲಿಸಂ ಈಗ ಇತಿಹಾಸವಾಗಿದೆ ಮತ್ತು ಅಭಿವೃದ್ಧಿಯೇ ಮುಂದಿನ ಮಾರ್ಗವಾಗಿದೆ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಈ ಸಂದರ್ಭವನ್ನು ವಿಶೇಷ ಮತ್ತು ಸ್ಮರಣೀಯ ಎಂದು ಬಣ್ಣಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“ಬಸ್ತಾರ್ ನಲ್ಲಿ ದೀಪಾವಳಿ… ನಮ್ಮ ಭದ್ರತಾ ಪಡೆಗಳಿಗೆ ಧನ್ಯವಾದಗಳು!
ನಕ್ಸಲಿಸಂ ಒಂದು ಇತಿಹಾಸ.
ಅಭಿವೃದ್ಧಿಯೇ ಮುಂದಿನ ದಾರಿ.
ಇಂದು ವಿಶೇಷ ಮತ್ತು ಸ್ಮರಣೀಯವಾಗಿತ್ತು.”
“ಬಸ್ತರ್ನಲ್ಲಿ ದೀಪಾವಳಿಯ ಉತ್ಸಾಹ ಪೂರ್ಣವಾಗಿ ಪ್ರದರ್ಶನಗೊಂಡಿದೆ!”
*****
Diwali in Bastar…all thanks to our security forces! Naxalism is history. Development is the way ahead. Today was special and memorable. https://t.co/cHok2iVtd8
— Narendra Modi (@narendramodi) November 8, 2026
Diwali spirit on full display in Bastar! https://t.co/KGAWwb12CB
— Narendra Modi (@narendramodi) November 8, 2026