ಪಿಎಂಇಂಡಿಯಾ
ಜಪಾನ್ ನ ರಕ್ಷಣಾ ಸಚಿವ ಶ್ರೀ ಜೆನ್ ನಕ್ತಾನಿ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಯವರು ಇದೇ ತಿಂಗಳು ಢಾಕಾದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಜಪಾನ್ ಪ್ರಜೆಗಳ ಜೀವಹಾನಿಯ ಬಗ್ಗೆ ಸಂತಾಪ ಸೂಚಿಸಿದರು. ಪ್ರಧಾನಮಂತ್ರಿಯವರು ಭಯೋತ್ಪಾದನೆಯ ವಿರುದ್ಧ ಹೆಚ್ಚಿನ ದ್ವಿಪಕ್ಷೀಯ ಮತ್ತು ಬಹು ಪಕ್ಷೀಯ ಸಹಕಾರಕ್ಕೆ ಕರೆ ನೀಡಿದರು.
ಶ್ರೀ. ನಕ್ತಾನಿ ಅವರು ಪ್ರಧಾನಮಂತ್ರಿಯವರಿಗೆ ದ್ವಿಪಕ್ಷೀಯ ರಕ್ಷಣಾ ಸಹಕಾರದ ಉಪಕ್ರಮಗಳ ಬಗ್ಗೆ ವಿವರಿಸಿದರು. ಫೆಬ್ರವರಿ 2016ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಅಂತಾರಾಷ್ಟ್ರೀಯ ಯುದ್ಧ ನೌಕೆಗಳ ಪರಾಮರ್ಶೆಯಲ್ಲಿ ಮತ್ತು ಜೂನ್ 2016ರಲ್ಲಿ ಜಪಾನ್ ಕರಾವಳಿಯಲ್ಲಿ ಮಲಬಾರ್ ಶಸ್ತ್ರಾಭ್ಯಾಸದಲ್ಲಿ ಜಪಾನ್ ಪಾಲ್ಗೊಂಡಿದ್ದನ್ನು ಸ್ವಾಗತಿಸಿದರು
ಶ್ರೀ. ನಕ್ತಾನಿ ಅವರು ಪ್ರಧಾನಿಯವರಿಗೆ ಪೂರ್ವ ಮತ್ತು ಆಗ್ನೇಯ ಏಷ್ಯಾ ಪ್ರಾದೇಶಿಕ ಅಭಿವೃದ್ಧಿಯ ಬಗ್ಗೆಯೂ ವಿವರಿಸಿದರು.
ಪ್ರಧಾನಮಂತ್ರಿಯವರು ತಾವು ವಾರ್ಷಿಕ ಶೃಂಗ ಸಭೆಗಾಗಿ ಈ ವರ್ಷದ ಕೊನೆಯಲ್ಲಿ ಜಪಾನ್ ಗೆ ಭೇಟಿ ನೀಡಲು ಎದಿರು ನೋಡುತ್ತಿರುವುದಾಗಿ ತಿಳಿಸಿದರು.
AKT/SH )
Mr. Gen Nakatani, Defence Minister of Japan calls on PM @narendramodi. https://t.co/aY0s8JzhQN
— PMO India (@PMOIndia) July 14, 2016
via NMApp