Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರಕ್ಕಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


 

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯ ಹಾಗೂ ನೆದರ್ಲ್ಯಾಂಡ್ಸ್ ಸಾಮ್ರಾಜ್ಯದ ಪರಿಸರ ಮತ್ತು ಮೂಲಸೌಕರ್ಯ ಸಚಿವಾಲಯದೊಂದಿಗೆ ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ. 

 

ನೀರಿನ ಸಂಪನ್ಮೂಲಗಳ ಸಮರ್ಥ ಬಳಕೆ, ನದಿ ಜಲಾನಯನ ನಿರ್ವಹಣೆ, ನಿರ್ಧಾರ ಬೆಂಬಲ ವ್ಯವಸ್ಥೆಗಳು, ನದಿ ಮುಖಜಭೂಮಿ ನಿರ್ವಹಣೆ, ನೀರಿನ ಗುಣಮಟ್ಟದ ವಿಚಾರ ಮತ್ತು ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಮರು ಬಳಕೆಗೆ ಸೇರಿದಂತೆ, ಜಲ ಸಂಪನ್ಮೂಲಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಪರಸ್ಪರರು ಒಪ್ಪಿಗೆ ಸೂಚಿಸುವ ಕ್ಷೇತ್ರಗಳಲ್ಲಿನ ತಜ್ಞತೆ ಮತ್ತು ಅನುಭವವನ್ನು ಹಂಚಿಕೊಳ್ಳುವ ಮತ್ತು ಸಹಯೋಗದ ಮೂಲಕ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಹಕಾರವನ್ನು ವರ್ಧಿಸಲು ಎರಡೂ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಲು ಈ ತಿಳಿವಳಿಕೆ ಒಪ್ಪಂದ ಅವಕಾಶ ಮಾಡಿಕೊಡುತ್ತದೆ. ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಅಂಕಿತಹಾಕುವ ತಜ್ಞರ ಅಧ್ಯಯನ ಪ್ರವಾಸ, ವಿಚಾರಸಂಕಿರಣ, ಸಮಾವೇಶ ಮತ್ತು ಸಭೆಗಳ ಮೂಲಕ ಲಭ್ಯವಾದ ಜ್ಞಾನ ಮತ್ತು ತಜ್ಞತೆಯ ವಿನಿಮಯ, ಜಂಟಿ ಸಂಶೋಧನಾ ಮತ್ತು ಅಭಿವೃದ್ಧಿ ಸಾಮರ್ಥ್ಯ ವರ್ಧನೆ ಕಾರ್ಯಕ್ರಮ/ತರಬೇತಿ, ಶೈಕ್ಷಣಿಕ ಮತ್ತು ಆನ್ವಯಿಕ ಸಂಶೋಧನೆ ಮತ್ತು ತರಬೇತಿಗಾಗಿ  ತರಬೇತಿ ಗುಂಪುಗಳ ವಿನಿಮಯ ಮತ್ತು ಇತರ ಚಟುವಟಿಕೆ, ಸೂಕ್ತ ಸಹಯೋಗದ ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಮತ್ತು/ಅಥವಾ ಭಾಗಿಯಾಗಲು ಪರಸ್ಪರ ಪಾಲ್ಗೊಳ್ಳುವಿಕೆಯ ಉತ್ತೇಜನ, ಖಾಸಗಿ ಸಾರ್ವಜನಿಕ ಪಾಲುದಾರಿಕೆಯ ಉತ್ತೇಜನ  ಸಹಕಾರವೂ ಸೇರುತ್ತದೆ. ತಿಳಿವಳಿಕೆ ಒಪ್ಪಂದದ ಆಶಯಗಳನ್ನು ಪೂರೈಸಲು ಚಟುವಟಿಕೆಗಳ ಮೇಲೆ ನಿಗಾ ಇಡಲು ಜಂಟಿ ಕಾರ್ಯ ಗುಂಪನ್ನು ಸಹ ರಚಿಸಲಾಗುತ್ತದೆ.

 

ಜಲ ಸಂಪನ್ಮೂಲ ಅದರಲ್ಲೂ ನದಿ ಜಲಾನಯನ ಪ್ರದೇಶದ ನಿರ್ವಹಣೆ, ಗಂಗಾ ಸೇರಿದಂತೆ ನದಿಗಳ ಮಾಲಿನ್ಯ ತಡೆ, ಪ್ರವಾಹ ನಿರ್ವಹಣೆ, ನೀರಿನ ಗುಣಮಟ್ಟ ಮತ್ತು ಇತರರೊಂದಿಗೆ ನೀರಿನ ಸಮರ್ಥ ಬಳಕೆ ಕುರಿತಂತೆ ಶ್ರಮಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳ ಸಾಂಸ್ಥಿಕ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಲು  ಈ ದ್ವಿಪಕ್ಷೀಯ ಸಹಕಾರವು ಸಹಕಾರಿಯಾಗಲಿದೆ.
ಹಿನ್ನೆಲೆ

 

ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯವು ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ನೀತಿಗಳ ಮತ್ತು ತಾಂತ್ರಿಕ ಪ್ರಾವಿಣ್ಯತೆಯ ವಿನಿಮಯ, ತರಬೇತಿ ಕೋರ್ಸ್ ಗಳ, ಕಾರ್ಯಾಗಾರ, ವೈಜ್ಞಾನಿಕ ಮತ್ತು ತಾಂತ್ರಿಕ ಗೋಷ್ಠಿಗಳ ಆಯೋಜನೆ, ತಜ್ಞರ ವಿನಿಮಯ, ಅಧ್ಯಯನ ಪ್ರವಾಸ ಇತ್ಯಾದಿಗಳ ಮೂಲಕ ಇತರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಸಾಧಿಸುತ್ತಿದೆ. ನೆದರ್ಲ್ಯಾಂಡ್ಸ್ ನದಿ ಜಲಾನಯ ಪ್ರದೇಶ ನಿರ್ವಹಣೆ ಯೋಜನೆ/ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ, ನೀರಿನ ಗುಣಮಟ್ಟ, ತ್ಯಾಜ್ಯ ಜಲ ಸಂಸ್ಕರಣೆ ಮತ್ತು ಪುನರ್ಬಳಕೆ ಇತ್ಯಾದಿ ಕ್ಷೇತ್ರದಲ್ಲಿ ಸಾಧಿಸಿರುವ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ನೆದರ್ಲ್ಯಾಂಡ್ಸ್ ನೊಂದಿಗೆ ಅವರ ಅನುಭವ ಮತ್ತು ಪ್ರಾವಿಣ್ಯತೆಯನ್ನು ಪಡೆಯಲು ಒಪ್ಪಂದಕ್ಕೆ ಅಂಕಿತ ಹಾಕಲು ನಿರ್ಧರಿಸಲಾಗಿದೆ.

*****

KSD/VBA/SH