ಪಿಎಂಇಂಡಿಯಾ
ಸುಭದ್ರ, ಸ್ಥಿರವಾಗಿ ಚೇತರಿಸಿಕೊಳ್ಳಬಲ್ಲ, ಸಮಾನ ಮತ್ತು ಸುಸ್ಥಿರ ಜಾಗತಿಕ ಇಂಧನ ಭವಿಷ್ಯದ ಕೇಂದ್ರ ಸ್ಥಳವಾಗಿ ಜಾಗತಿಕ ದಕ್ಷಿಣವನ್ನು ಇರಿಸಲು ಭಾರತ ಪ್ರಯತ್ನಿಸುತ್ತಿರುವ ಕುರಿತು ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. “ದೃಢ ದೇಶೀಯ ನೀತಿಗಳಿಂದ ಮಾತ್ರವಲ್ಲದೆ ಬಲವಾದ ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಮೂಲಕವೂ ಸಂಕಷ್ಟಗಳಿಂದ ಶೀಘ್ರ ಚೇತರಿಸಿಕೊಳ್ಳಬಲ್ಲ ಸ್ಥಿರ ಇಂಧನ ವ್ಯವಸ್ಥೆಗಳನ್ನು ನಿರ್ಮಿಸಲು ಸಾಧ್ಯ ಎಂಬ ಭಾರತದ ನಂಬಿಕೆಯನ್ನು ಅವರು ವಿವರಿಸಿದ್ದಾರೆ” ಎಂದು ಶ್ರೀ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
ಭಾರತವು 2026ರ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕೇಂದ್ರ ಸಚಿವರಾದ ಶ್ರೀ @ mlkhattar ಅವರು, ಭಾರತವು ಜಾಗತಿಕ ದಕ್ಷಿಣವನ್ನು ಸುರಕ್ಷಿತ, ಸ್ಥಿತಿಸ್ಥಾಪಕ, ಸಮಾನ ಮತ್ತು ಸುಸ್ಥಿರ ಜಾಗತಿಕ ಇಂಧನ ಭವಿಷ್ಯದ ಕೇಂದ್ರದಲ್ಲಿರಿಸಲು ಪ್ರಯತ್ನಿಸುತ್ತಿದೆ ಎಂದು ಬರೆದಿದ್ದಾರೆ.
ದೃಢವಾದ ದೇಶೀಯ ನೀತಿಗಳ ಮೂಲಕ ಮಾತ್ರವಲ್ಲದೆ ಬಲವಾದ ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಮೂಲಕವೂ ಸ್ಥಿತಿಸ್ಥಾಪಕ ಇಂಧನ ವ್ಯವಸ್ಥೆಗಳನ್ನು ನಿರ್ಮಿಸಲು ಸಾಧ್ಯ ಎಂಬ ಭಾರತದ ನಂಬಿಕೆಯನ್ನು ಅವರು ವಿವರಿಸಿದ್ದಾರೆ.
*****
As India takes up the BRICS Chairship in 2026, Union Minister Shri @mlkhattar writes that India seeks to place the Global South at the centre of a secure, resilient, equitable and sustainable global energy future.
— PMO India (@PMOIndia) June 27, 2026
He highlights India's belief that resilient energy systems are… https://t.co/k2YAvTaVhk