Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾರ್ಖಂಡ್ ನಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್.ಐ) – ಜಾರ್ಖಂಡ್ ಸ್ಥಾಪನೆಗೆ ಡಿಎಆರ್.ಇ/ಐಸಿಎಆರ್ ಯೋಜನೆಯ 12ನೇ ಯೋಜನೆ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಅಂದಾಜು 200.78 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯದಾಗಿದ್ದು, (ಶೇ.100 ಐ.ಸಿ.ಎ.ಆರ್. ಪಾಲು) 1000 ಎಕರೆ ಜಮೀನನ್ನು ಜಾರ್ಖಂಡ್ ಸರ್ಕಾರ, ಹಜಾರಿಭಾಗ್ ನ ಬಾರ್ಹಿ ಬ್ಲಾಕ್ ನ ಗೌರಿಯ ಕರ್ಮ ಗ್ರಾಮದಲ್ಲಿ ನೀಡಲಿದೆ.

ಐ.ಎ.ಆರ್.ಐ. – ಜಾರ್ಖಂಡ್ ಒಂದು ವಿಶಿಷ್ಠ ಸಂಸ್ಥೆಯಾಗಿದ್ದು, ನವದೆಹಲಿಯಲ್ಲಿನ ಐಎಆರ್.ಐ ನಂತೆಯೇ ಇದು ಕ್ಷೇತ್ರ ಬೆಳೆ, ತೋಟಗಾರಿಕೆ ಬೆಳೆ, ಕೃಷಿ-ಅರಣ್ಯ, ಪಶು ಸಂಗೋಪನೆ, ಮೀನುಗಾರಿಕೆ, ಕೋಳಿಸಾಕಣೆ, ಹಂದಿ ಸಾಕಾಣಿಕೆ, ರೇಷ್ಮೆ ಮತ್ತು ಅರಗು ತಯಾರಿಕೆ, ಜೇನುತುಪ್ಪ ಉತ್ಪಾದನೆ ಇತ್ಯಾದಿ ಎಲ್ಲ ವಲಯಗಳನ್ನೂ ಒಳಗೊಂಡು ಹಾಲ್ ಮಾರ್ಕ್ ಗುರುತುಗಳನ್ನು ಪಡೆಯಲಿದೆ.

ಐ.ಎ.ಆರ್.ಐ. – ಜಾರ್ಖಂಡ್, ಕೃಷಿಯ ಸವಾಲುಗಳು ಮತ್ತು ಪೂರ್ವ ಭಾರತದ ಸಂಕೀರ್ಣತೆಯ ಮೇಲೆ ಎಲ್ಲ ಹಾಲಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳೊಂದಿಗೆ ಸೇರಿ ಕೆಲಸ ಮಾಡಲಿದೆ. ಇದು ಸಂಶೋಧನೆ, ಶಿಕ್ಷಣ, ಗುಣಮಟ್ಟದ ಮಾನವ ಸಂಪನ್ಮೂಲ ಅಭಿವೃದ್ಧಿಯ ತನ್ನ ಅಭಿಯಾನ, ಉತ್ಪಾದನೆ ಪ್ರಮಾಣ ಹೆಚ್ಚಿಸಲು ರೈತ ಸ್ನೇಹಿಯಾದ ತಂತ್ರಜ್ಞಾನದ ಸೃಷ್ಟಿ ವಿಸ್ತರಣಾ ಕಾರ್ಯಕ್ರಮ ಕೈಗೊಳ್ಳಲಿದೆ. ಇದು ಪೂರ್ವ ವಲಯದ ಕೃಷಿ ರಂಗದಲ್ಲಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೃಷಿ ಆಧಾರಿತ ಕೈಗಾರಿಕೆಗಳನ್ನೂ ಉತ್ತೇಜಿಸಲಿದೆ. ಇದು ನವದೆಹಲಿಯ ಐಎಆರ್.ಐ.ನ ಆವರಣದೊಳಗಿನ ಮತ್ತೊಂದು ಸಮುಚ್ಛಯದಂತೆ ಇರಲಿದೆ ಮತ್ತು ಸಮಗ್ರ ಬಹುಹಂತದ ಸಂಶೋಧನೆಗಳನ್ನು ಶಾಲಾ ಮಾದರಿಯಲ್ಲಿ ಅಂದರೆ, ಬೆಳೆ ವಿಜ್ಞಾನದ ಶಾಲೆಗಳು, ಸ್ವಾಭಾವಿಕ ಸಂಪನ್ಮೂಲ ನಿರ್ವಹಣೆ ಮತ್ತು ಪಶು ವಿಜ್ಞಾನ ಮಾದರಿಯಲ್ಲಿ ಕೈಗೊಳ್ಳಲಿದೆ

AKT/VBA/SH