ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಕಂಡ ಪ್ರಸ್ತಾವನೆಗಳಿಗೆ ತನ್ನ ಅನುಮೋದನೆ ನೀಡಿದೆ:
i. ಕಸ್ಟಮ್ಸ್ ಕಾಯಿದೆ 1962ಕ್ಕೆ ತಿದ್ದುಪಡಿ,
ii. ಕಸ್ಟಮ್ಸ್ ಟ್ಯಾರಿಫ್ ಕಾಯಿದೆ 1975ಕ್ಕೆ ತಿದ್ದುಪಡಿಗಳು
iii. ಕೇಂದ್ರೀಯ ಅಬಕಾರಿ ಕಾಯಿದೆ 1944ಕ್ಕೆ ತಿದ್ದುಪಡಿ
iv. ಕೇಂದ್ರೀಯ ಅಬಕಾರಿ ಟ್ಯಾರಿಫ್ ಕಾಯಿದೆ 1985ರ ರದ್ದತಿ ಮತ್ತು
v. ಮೇಲ್ತೆರಿಗೆ ವಿಧಿಸಲು ಅವಕಾಶ ಇರುವ ಕಾಯಿದೆಯ ನಿಬಂಧನೆಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಅಥವಾ ತೆಗೆದುಹಾಕುವುದು.
ಈ ಮೇಲಿನ ಪ್ರಸ್ತಾವನೆಗಳು ಈ ಕೆಳಕಂಡ ಫಲಿತಾಂಶಕ್ಕೆ ಕಾರಣವಾಗುತ್ತವೆ:
i. ನಿರ್ದಿಷ್ಟ ವ್ಯಕ್ತಿಯಿಂದ ಸರಕುಗಳ ಆಮದು/ರಫ್ತುಗೆ ಸಂಬಂಧಿಸಿದಂತೆ ಆಮದು ಮತ್ತು ರಫ್ತಿನಲ್ಲಿ ಕಡಿಮೆ/ಹೆಚ್ಚಿನ ಮೌಲ್ಯೀಕರಣ, ಡ್ರಾಬ್ಯಾಕ್ ಯೋಜನೆ ಸೇರಿದಂತೆ ರಫ್ತು ಉತ್ತೇಜನ ಯೋಜನೆಯ ದುರ್ಬಳಕೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಈ ಕಾನೂನುಗಳನ್ನು ಸಮರ್ಥವಾಗಿ ಜಾರಿ ಮಾಡಲು ಅಧಿಕಾರಹೊಂದಿರುವ ಕಸ್ಟಮ್ಸ್ ಕಾಯಿದೆಯ ನಿಯಮಗಳ ಮತ್ತು ಇತರ ಕಾಯಿದೆಗಳ ಉಲ್ಲಂಘನೆಯ ವಿಶ್ಲೇಷಣೆ ಮತ್ತು ಪ್ರಕರಣಗಳ ಪತ್ತೆ ಕಸ್ಟಂಮ್ಸ್ ಕಾಯಿದೆ 1962ಕ್ಕೆ ಸೆಕ್ಷನ್ 108ಎ ಮತ್ತು 108ಬಿ ಸೇರ್ಪಡೆಗೆ ಅವಕಾಶವನ್ನು ಕಲ್ಪಿಸುತ್ತದೆ. ಮತ್ತು
ii. ಜಿಎಸ್.ಟಿ. ಜಾರಿಯ ಹಿನ್ನೆಲೆಯಲ್ಲಿ ಅಪ್ರಸ್ತುತವಾಗಲಿರುವ ಇತರ ಕಾಯಿದೆಗಳ ವಿವಿಧ ನಿಬಂಧನೆಗಳಿಗೆ ತಿದ್ದುಪಡಿ ಅಥವಾ ಬಹು ತೆರಿಗೆಯನ್ನು ತಗ್ಗಿಸಲು ಅವುಗಳನ್ನು ಶಾಸನದ ಪುಸ್ತಕದಿಂದ ತೆಗೆದು ಹಾಕಲು ಕಾರಣವಾಗುತ್ತದೆ.
AKT/VBA /SH