Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಟಿ20 ಅಂಧರ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದ ತಂಡದಿಂದ ಪ್ರಧಾನಮಂತ್ರಿ ಭೇಟಿ

ಟಿ20 ಅಂಧರ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದ ತಂಡದಿಂದ ಪ್ರಧಾನಮಂತ್ರಿ ಭೇಟಿ

ಟಿ20 ಅಂಧರ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದ ತಂಡದಿಂದ ಪ್ರಧಾನಮಂತ್ರಿ ಭೇಟಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಅಂಧರ ಟಿ 20 ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದ ತಂಡದ ಸದಸ್ಯರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭವಿಷ್ಯದಲ್ಲಿ ಇನ್ನೂ ಉತ್ತಮ ಸಾಧನೆ ಮಾಡುವಂತೆ ತಿಳಿಸಿದರು. ಅವರ ವಿಶೇಷ ಕೌಶಲ ಮತ್ತು ತನ್ಮಯತೆಯನ್ನು ಶ್ಲಾಘಿಸಿದ ಪ್ರಧಾನಿ, ಅವರ ಈ ಕಾರ್ಯ ದಿವ್ಯಾಂಗಿಗಳೂ ಸೇರಿದಂತೆ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ ಎಂದರು.

ತಂಡದ ಸದಸ್ಯರು ಹಸ್ತಾಕ್ಷರ ಇರುವ ಬ್ಯಾಟ್, ಚೆಂಡು ಮತ್ತು ಪ್ರಧಾನಮಂತ್ರಿಯವರ ಹೆಸರು ಇರುವ ತಂಡದ ಜರ್ಸಿಯನ್ನು ಪ್ರಧಾನಮಂತ್ರಿಯವರಿಗೆ ನೀಡಿದರು.

ಪ್ರಧಾನಮಂತ್ರಿಯವರು ಕೂಡ ತಮ್ಮ ಹಸ್ತಾಕ್ಷರ ಇರುವ ಬ್ಯಾಟ್ ಮತ್ತು ಬಾಲ್ ಅನ್ನು ತಂಡಕ್ಕೆ ನೀಡಿದರು.

*****