ಪಿಎಂಇಂಡಿಯಾ
ಡಿ.ಎನ್.ಎ. ಪ್ರಯೋಗಾಲಯಗಳಿಗೆ ಮಾನ್ಯತೆ ಮತ್ತು ನಿಯಂತ್ರಣ ಆವಶ್ಯಕತೆಗಳು
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಡಿ.ಎನ್.ಎ. ತಂತ್ರಜ್ಞಾನ (ಬಳಕೆ ಮತ್ತು ಆನ್ವಯಿಕತೆ) ನಿಯಂತ್ರಣ ವಿಧೇಯಕ 2018 ಕ್ಕೆ ಅನುಮೋದನೆ ನೀಡಿದೆ.
ವಿವರಗಳು:
ಹಿನ್ನೆಲೆ:
ಅಪರಾಧ ತಖ್ತೆ ಡಿ.ಎನ್.ಎ. ರೇಖಿಸುವಿಕೆಯಿಂದ ಮಾನವ ದೇಹಕ್ಕೆ ಹಾನಿ ಮಾಡುವ ವರ್ಗದಲ್ಲಿ ಬರುವ ಅಪರಾಧ ಪ್ರಕರಣಗಳನ್ನು ( ಕೊಲೆ, ಅತ್ಯಾಚಾರ, ಮಾನವ ಕಳ್ಳಸಾಗಾಣಿಕೆ ಅಥವಾ ಮಾರಕ ಹಲ್ಲೆ, ಗಾಯ) ಮತ್ತು ಆಸ್ತಿಗೆ ಸಂಬಂಧಿಸಿದ ಪ್ರಕರಣಗಳನ್ನು ( ಕಳವು, ಮನೆ ಕಳವು ಮತ್ತು ದರೋಡೆ ) ಭೇಧಿಸುವ ನಿಟ್ಟಿನಲ್ಲಿ ಗಮನಾರ್ಹ ನೆರವು ಲಭಿಸುವುದು ಸಾಬೀತಾಗಿದೆ. ದೇಶದಲ್ಲಿ ಇಂತಹ ಸರಾಸರಿ ಕೃತ್ಯಗಳ ಸಂಖ್ಯೆ , ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್.ಸಿ.ಆರ್.ಬಿ.) ಪ್ರಕಾರ 2016 ರಲ್ಲಿ ವರ್ಷಕ್ಕೆ 3 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿದೆ. ಪ್ರಸ್ತುತ ಇದರಲ್ಲಿ ಬಹಳ ಸಣ್ಣ ಸಂಖ್ಯೆಯಲ್ಲಿ ಪ್ರಕರಣಗಳು ಡಿ.ಎನ್.ಎ. ಪರೀಕ್ಷೆಗೆ ಒಳಪಡುತ್ತಿವೆ. ಈ ತಂತ್ರಜ್ಞಾನದ ವಿಸ್ತರಿತ ಬಳಕೆಯು ಈ ವರ್ಗದಲ್ಲಿ ಬರುವ ಅಪರಾಧ ಪ್ರಕರಣಗಳ ನ್ಯಾಯ ವಿತರಣೆಯನ್ನು ತ್ವರಿತಗೊಳಿಸಲಿದೆ ಮಾತ್ರವಲ್ಲ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಿದೆ. ಪ್ರಸ್ತುತ ಈ ಪ್ರಮಾಣ 30% ಇದೆ (ಎನ್.ಸಿ.ಅರ್.ಬಿ. 2016 ರ ಅಂಕಿ ಅಂಶಗಳ ಪ್ರಕಾರ )