Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಾರತಮ್ಯ ತೆಗೆದುಹಾಕಿ ಬಿ.ಎಸ್.ಎನ್.ಎಲ್. ಪಿಂಚಣಿದಾರರಿಗೆ ಪಿಂಚಣಿ ಪರಿಷ್ಕರಿಸಲು ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 10.06.2013ಕ್ಕೆ ಮುಂಚಿತವಾಗಿ ನಿವೃತ್ತರಾದ ಬಿ.ಎಸ್.ಎನ್.ಎಲ್. ಪಿಂಚಣಿದಾರರ ಮತ್ತು ಕುಟುಂಬದ ಪಿಂಚಣಿದಾರರಿಗೆ ಫಿಟ್ಮೆಂಟ್ ಉದ್ದೇಶಕ್ಕಾಗಿ ಮತ್ತು (ii) ನಿವೃತ್ತ ಉದ್ಯೋಗಿಗಳಿಗೆ ನಿವೃತ್ತಿ ವೇತನ ಪ್ರಯೋಜನಗಳನ್ನು ಪಾವತಿಸಲು ಬಿಎಸ್ಎನ್ಎಲ್ ಹೊಣೆಗಾರಿಕೆ ಮಾರ್ಪಡಿಸುವ ಸಲುವಾಗಿ ಶೇ.78.2ರಷ್ಟು ಡಿಎ / ಡಿಆರ್ ಪರಿಣಾಮಕಾರಿ ಪ್ರಮಾಣಕ್ಕಾಗಿ ಮೂಲ ವೇತನ/ಪಿಂಚಣಿಯೊಂದಿಗೆ ಶೇಕಡ 50ರಷ್ಟು ಡಿಎ/ಡಿಆರ್ ವಿಲೀನದ ಲಾಭ ದೊರಕಿಸಲು ಪಿಂಚಣಿಯನ್ನು ಪರಿಷ್ಕರಿಸಲು ತನ್ನ ಅನುಮೋದನೆ ನೀಡಿದೆ.

ಬಿ.ಎಸ್.ಎನ್.ಎಲ್.ನಲ್ಲಿ ಸೇವೆಯಲ್ಲಿರುವ ಉದ್ಯೋಗಿಗಳ ಶೇ.78.2ರಷ್ಟು ಡಿಎ/ಡಿಆರ್ ಪ್ರಮಾಣವನ್ನು ಫಿಟ್ಮೆಂಟ್ ಉದ್ದೇಶಕ್ಕೆ ಶೇ.50ರಷ್ಟು ಡಿಎ/ಡಿಆರ್ ಅನ್ನು ಮೂಲ ವೇತನ/ಪಿಂಚಣಿಯೊಂದಿಗೆ ವಿಲೀನ ಮಾಡಲು ಅವಕಾಶ ನೀಡುವ ಮೂಲಕ 10.6.2013ಕ್ಕೆ ಮೊದಲು ನಿವೃತ್ತರಾದ ಬಿ.ಎಸ್.ಎನ್.ಎಲ್ ಪಿಂಚಣಿದಾರರು/ಕುಟುಂಬ ಪಿಂಚಣಿದಾರರ ಪಿಂಚಣಿಯನ್ನು ವಾಸ್ತವ ಲಾಭವು 10.06.2013ರಿಂದ ನಾಮಮಾತ್ರಕ್ಕೆ ಅನುಷ್ಠಾನಕ್ಕೆ ಬರುವಂತೆ ಆದರೆ 01.01.2007ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ. ಆದಾಗ್ಯೂ ಈ ಪಿಂಚಣಿದಾರರ ವಿಚಾರದಲ್ಲಿ ಡಿಸಿಆರ್ ಜಿ ಮೊತ್ತದ ಹೆಚ್ಚಳ, ರಜೆಯ ನಗದೀಕರಣ ಮತ್ತು ಪಿಂಚಣಿಯ ಮಾರ್ಪಾಡು ಲೆಕ್ಕದಲ್ಲಿ ಮಾಡುವಂತಿಲ್ಲ.

ದೂರಸಂಪರ್ಕ (ಡಿ.ಓ.ಟಿ) / ಟೆಲಿಕಾಂ ಸೇವೆಗಳ ಇಲಾಖೆ (ಡಿಟಿಎಸ್) /ದೂರ ಸಂಪರ್ಕ ಕಾರ್ಯಾಚರಣೆ ಇಲಾಖೆ (ಡಿಟಿಓ) ಉದ್ಯೋಗಿಗಳಿಗೆ ಸಂಬಂಧಿಸಿದಂತೆ 1.10.2000ಕ್ಕೆ ಮುನ್ನ ನಿವೃತ್ತರಾದವರ ಪಿಂಚಣಿಯ ಹೊಣೆಗಾರಿಕೆಯನ್ನು ಭಾರತ ಸರ್ಕಾರ ಹೊರಲಿದೆ ಮತ್ತು ಬಿ.ಎಸ್.ಎನ್.ಎಲ್.ಗೆ ಈ ಉದ್ಯೋಗಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿ ಇರುವುದಿಲ್ಲ. ಬಿ.ಎಸ್.ಎನ್.ಎಲ್.ನಲ್ಲಿ ವಿಲೀನವಾದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಅವರ ಪಿಂಚಣಿ ಲಾಭಗಳನ್ನು ಪೂರ್ಣವಾಗಿ ಸರ್ಕಾರವೇ ಹೊರಲಿದ್ದು, ಬಿ.ಎಸ್.ಎನ್.ಎಲ್. ಹೀಗೆ ವಿಲೀನಗೊಂಡು ಕೆಲಸ ಮಾಡುತ್ತಿರುವ/ಕೆಲಸ ಮಾಡಿದ ಅವಧಿಗೆ ಸಂಬಂಧಿಸಿದಂತೆ ಎಫ್.ಆರ್. 116 ರೀತ್ಯ ಪಿಂಚಣಿ ಕೊಡುಗೆಯ ಹೊಣೆಯನ್ನು ಹೊರಲಿದೆ.

ಈ ಪರಿಷ್ಕರಣೆಯಿಂದಾಗಿ ವಾರ್ಷಿಕ ಅಂದಾಜು 129.63 ಕೋಟಿ ರೂಪಾಯಿ ಪಿಂಚಣಿದಾರರಿಗೆ ಮತ್ತು 24.93 ಕೋಟಿ ರೂಪಾಯಿ ಕುಟಂಬದ ಪಿಂಚಣಿದಾರರಿಗೆ ಮತ್ತು 2013-14ನೇ ಸಾಲಿನ ಬಾಕಿ 239.92 ಕೋಟಿ ರೂಪಾಯಿ ಅಂದಾಜು ಪಿಂಚಣಿದಾರರಿಗೆ ಮತ್ತು 44.62 ಕೋಟಿ ರೂಪಾಯಿ ಅಂದಾಜು ಕುಟುಂಬ ಪಿಂಚಣಿದಾರರಿಗೆ ಭರಿಸಬೇಕಾಗುತ್ತದೆ. ದೇಶಾದ್ಯಂತ ಇರುವ ಅಂದಾಜು 118500 ಪಿಂಚಣಿದಾರರು ಈ ಪರಿಷ್ಕರಣೆಯ ಲಾಭ ಪಡೆಯಲಿದ್ದಾರೆ.

ಈ ಪರಿಷ್ಕರಣೆಯಿಂದ 10.06.2013ಕ್ಕೆ ಮುನ್ನ ನಿವೃತ್ತರಾದ ಬಿ.ಎಸ್.ಎನ್.ಎಲ್.ನಲ್ಲಿ ವಿಲೀನವಾದ ಪಿಂಚಣಿ ಮಾರ್ಪಾಡಿನ ದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸಿದಂತಾಗುತ್ತದೆ ಮತ್ತು ವೇತನ ತಾರತಮ್ಯವನ್ನು ತೆಗೆದುಹಾಕುವ ಕಾರಣ ಬಿ.ಎಸ್.ಎನ್.ಎಲ್. ಸೇವೆಯಲ್ಲಿನ ಉದ್ಯೋಗಿಗಳಿಗೆ ಸಮನಾಗಿ ಪಿಂಚಣಿದಾರರಿಗೂ ಲಾಭ ದೊರಕಲಿದೆ. ಇದು ಬಿ.ಎನ್.ಎನ್.ಎಲ್. ಮೇಲಿನ ಆರ್ಥಿಕ ಹೊಣೆಯನ್ನೂ ತಗ್ಗಿಸಲು ನೆರವಾಗಲಿದೆ ಮತ್ತು ಸರ್ಕಾರದ ಈ ಬದ್ಧತೆಯಿಂದಾಗಿ ಬಿ.ಎಸ್.ಎನ್.ಎಲ್.ನಲ್ಲಿ ಕೈಗಾರಿಕಾ ಅಶಾಂತಿ ತೆಗೆದುಹಾಕಲಿದೆ.

ಹಿನ್ನೆಲೆ:

10.06.2013ಕ್ಕೆ ಮುನ್ನ ಮತ್ತು ತದ ನಂತರ ನಿವೃತ್ತರಾದವರಿಗೆ ಬಿ.ಎಸ್.ಎನ್.ಎಲ್. ಪಿಂಚಣಿದಾರರ ನೀತಿಯಿಂದಾಗಿ ಉಂಟಾಗಿದ್ದ ತಾರತಮ್ಯದ ನಿವಾರಣೆಗಾಗಿ ಸಂಪುಟ ಈ ನಿರ್ಧಾರ ಕೈಗೊಂಡಿದೆ. ತರುವಾಯ ವಿವಿಧ ವಲಯಗಳಿಂದ ಬರುತ್ತಿದ್ದ ನಿರಂತರ ಬೇಡಿಕೆ ಮತ್ತು ವಿವಿಧ ಹಂತಗಳಲ್ಲಿ ನಡೆದ ಮಾತುಕತೆಯಲ್ಲಿ ಸರ್ಕಾರ ನಿಗಮ ರೂಪಿಸುವ ಅಂದರೆ ಬಿ.ಎಸ್.ಎನ್.ಎಲ್. ರೂಪಿಸುವ ಮುನ್ನ ಸರ್ಕಾರ ನೀಡಿದ ಭರವಸೆಯ ಈಡೇರಿಕೆಗೆ ಪಿಂಚಣಿಯ ಹೊಣೆಗಾರಿಕೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲಾಗಿದೆ.