ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬ್ರೂನೈ ದರುಸಲಾಂ ನಡುವೆತೆರಿಗೆ ಸಂಗ್ರಹಣಗೆ ಸಂಬಂಧಿಸಿದಂತೆ ನೆರವು ಹಾಗೂ ಮಾಹಿತಿಯ ವಿನಿಮಯ ಕುರಿತ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಒಪ್ಪಿಗೆ ನೀಡಿದೆ.
ವಿವರಗಳು:
iii. ಈ ಒಪ್ಪಂದವು ಎರಡೂ ದೇಶಗಳ ನಡುವೆ ತೆರಿಗೆ ಆದಾಯ ಕ್ಲೇಮುಗಳ ಸಂಗ್ರಹಣೆಗೆ ನೆರವು ನೀಡಲಿದೆ.
ಈ ಒಪ್ಪಂದವು ತೆರಿಗೆ ಉದ್ದೇಶಗಳಿಗಾಗಿ ಭಾರತ ಮತ್ತು ಬ್ರೂನೈಗಳ ನಡುವಿನ ಮಾಹಿತಿಯ ವಿನಿಮಯದ ಹರಿವನ್ನು ಉತ್ತೇಜಿಸುತ್ತದೆ ಮತ್ತು ಇದು ತೆರಿಗೆ ತಪ್ಪಿಸುವಿಕೆ ಮತ್ತು ತೆರಿಗೆ ತಪ್ಪಿಸಿಕೊಳ್ಳುವಿಕೆಯನ್ನು ನಿಗ್ರಹಿಸುತ್ತದೆ. ಇದು ಎರಡೂ ರಾಷ್ಟ್ರಗಳ ನಡುವೆ ತೆರಿಗೆ ಆದಾಯದ ಸಂಗ್ರಹದ ಸಂಗ್ರಹದಲ್ಲಿ ನೆರವು ನೀಡುತ್ತದೆ.
ಈಒಪ್ಪಂದದಿಂದಾಗಿ ಯಾವುದೇ ಹಣಕಾಸಿನ ಪರಿಣಾಮಗಳಿರುವುದಿಲ್ಲ. ಒಪ್ಪಂದದ ವಿಧಿ 9 ಪ್ರಕಾರ 500 ಅಮೆರಿಕನ್ ಡಾಲರ್ ಮೀರಿದ ಅಸಾಮಾನ್ಯ ವೆಚ್ಚಗಳ ಸಂದರ್ಭದಲ್ಲಿ, ಅದನ್ನು ಭಾರತ ಸರಕಾರ ಭರಿಸುತ್ತದೆ. ಅಂತಹ ಇತರ ತೆರಿಗೆ ಮಾಹಿತಿ ವಿನಿಮಯ ಒಪ್ಪಂದಗಳಲ್ಲಿ ಭಾರತವು ಇದೇ ರೀತಿಯ ನಿಬಂಧನೆಗಳನ್ನು ಹೊಂದಿದೆ.
ಹಿನ್ನೆಲೆ:
ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 90ರ ಅಡಿಯಲ್ಲಿ ವಿದೇಶದೊಂದಿಗೆ ಅಥವಾ ನಿರ್ದಿಷ್ಟ ಪ್ರಾಂತ್ಯದೊಂದಿಗೆ ಆದಾಯ ತೆರಿಗೆ ತಪ್ಪಿಸುವುದು ಅಥವಾ ವಂಚನೆ ತಡೆಗಾಗಿ ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ಮಾಹಿತಿಯ ವಿನಿಮಯಕ್ಕೆ ಕೇಂದ್ರ ಸರ್ಕಾರ ಅಧಿಕಾರ ನೀಡುತ್ತದೆ. ಬ್ರೂನೈನೊಂದಿಗೆ ತೆರಿಗೆಗೆ ಸಂಬಂಧಿಸಿದಂತೆ ಮಾಹಿತಿಯ ವಿನಿಮಯ ಒಪ್ಪಂದಕ್ಕಾಗಿ ಮಾತುಕತೆಗಳು 2017ರ ಜನವರಿ 10 ಮತ್ತು 11ರಂದು ನಡೆದಿತ್ತು. ಇದಕ್ಕೆ ಅನುಗುಣವಾಗಿ, ಭಾರತ ಸರ್ಕಾರ ಮತ್ತು ಬ್ರೂನೈ ದರಾಸಲಮ್ ಗಳು ಒಪ್ಪಂದದ ಪಠ್ಯಕ್ಕೆ ಒಪ್ಪಿಗೆ ನೀಡಿದ್ದವು.
*****