Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆಯ ಯಶಸ್ಸಿನ ಸಂದರ್ಭದಲ್ಲಿ  ದಕ್ಷಿಣ ಏಷ್ಯಾ ರಾಷ್ಟ್ರಗಳ ಸರಕಾರಗಳ ಮುಖ್ಯಸ್ಥರ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂವಾದ ಮೂಲಕ ಮಾಡಿದ ಸಮಾರೋಪ ಭಾಷಣದ ಸಾರಾಂಶ.

ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆಯ ಯಶಸ್ಸಿನ ಸಂದರ್ಭದಲ್ಲಿ  ದಕ್ಷಿಣ ಏಷ್ಯಾ ರಾಷ್ಟ್ರಗಳ ಸರಕಾರಗಳ ಮುಖ್ಯಸ್ಥರ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂವಾದ ಮೂಲಕ ಮಾಡಿದ ಸಮಾರೋಪ ಭಾಷಣದ ಸಾರಾಂಶ.


ನಿಮ್ಮ ಅಭಿಪ್ರಾಯಗಳಿಗಾಗಿ ಪ್ರತಿಯೊಬ್ಬರನ್ನೂ ಅಭಿನಂದಿಸಲು ಬಯಸುತ್ತೇನೆ. 

ಇಂದಿನ ಉಡಾವಣೆಯ ಯಶಸ್ಸಿನ ಅಭಿಪ್ರಾಯಗಳನ್ನು ನಿಮ್ಮ ಚಿಂತನೆಗಳು ಪ್ರತಿಧ್ವನಿಸುತ್ತವೆ.

ಈ ಪ್ರದೇಶದ ಸಮಾನ ಮನಸ್ಕ ದೇಶಗಳ ಸಹಕಾರಗಳ ವಿಷಯ ಬಂದಾಗ, ದಕ್ಷಿಣ ಏಷ್ಯಾ ಉಪಗ್ರಹ ತನ್ನ ಮಿತಿಗೆ ಆಕಾಶ ಕೂಡಾ ಸಾಲದು ಎಂದು ಹೇಳುತ್ತದೆ.

 

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಸಹಕಾರ ಮತ್ತು ಕಾರ್ಯ ಪ್ರವೃತ್ತಿಗಳಿಗೆ “ಸಬ್  ಕಾ  ಸಾಥ್ , ಸಬ್ ಕಾ ವಿಕಾಸ್ ”     ಮಾತು ಸರಿಯಾದ ಚಿಂತನೆಯಾಗಿದೆ ಎನ್ನಬಹುದು.

 

ನಮ್ಮ ಜನತೆ ಉತ್ತಮ ಆರ್ಥಿಕ ಸಂಪನ್ನತೆ ಸಾಧಿಸುವುದು ನಮ್ಮೆಲ್ಲರಲ್ಲೂ ಸಮಾನವಾಗಿರುವ ಒಂದು ಮುಖ್ಯ ಉದ್ದೇಶವಾಗಿದೆ ಮತ್ತು ಇದರಲ್ಲಿ ನೀವು ಬಲಿಷ್ಠ ಮತ್ತು ಬದ್ದವಾದ ಪಾಲುದಾರರಾಗಿ ತತ್ವ ಮತ್ತು ಸದಾ ಸಶಕ್ತಿಯ ಆಯ್ಕೆ ಬಯಸುವ ಭಾರತವನ್ನು ಕಾಣಬಹುದು.

 

ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆಯ ಮತ್ತು ನಿಮ್ಮೆಲ್ಲರ ಬಲಿಷ್ಠ ಹಾಗೂ ಸತತ ಸಹಕಾರದಿಂದಾಗಿ ಇಂತಹ ಸಂಕಲ್ಪ ವಾಸ್ತವ ರೂಪಕ್ಕೆ ಬಂದ ಈ ವಿಶೇಷ ಸಮಾರಂಭದಲ್ಲಿ ನನಗೂ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಕ್ಕಾಗಿ ನಿಮಗೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ.

 

ಕೊನೆಯದಾಗಿ, ನಮ್ಮ ಸಾಮಾನ್ಯ ಲಕ್ಷ್ಯವಾದ ಪ್ರಾದೇಶಿಕ ಸಮಗ್ರ ಅಭಿವೃದ್ಧಿ ಮತ್ತು ಪ್ರಗತಿಗಾಗಿ ನಾವು ಒಟ್ಟಾರೆಯಾಗಿ ಪ್ರಯತ್ನಿಸುವಲ್ಲಿನ ಯಶಸ್ಸು ಹಂಚಿಕೊಳ್ಳುವ ಇಂತಹ ಹಲವು ಸಂದರ್ಭಗಳು ನಮಗೆ ಸದಾ ಬರುತ್ತಿರಲಿ ಎಂದು ಆಶಿಸುತ್ತೇನೆ.

 

ಧನ್ಯವಾದಗಳು. ತುಂಬಾ ತುಂಬಾ ಧನ್ಯವಾದಗಳು.