ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತ ಮತ್ತು ಮತ್ತು ದಕ್ಷಿಣ ಏಷ್ಯಾ ಸಹಕಾರಿ ಪರಿಸರ ಕಾರ್ಯಕ್ರಮ (ಎಸ್.ಎ.ಸಿ.ಇ.ಪಿ.) ಕುರಿತ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಿರುವುದನ್ನು ಅನುಮೋದಿಸಲಾಯಿತು. ಈ ಒಡಂಬಡಿಕೆ ತೈಲ ಮತ್ತು ರಾಸಾಯನಿಕ ಸೋರಿಕೆ ಸಂಭವಿಸಿದ ಸಂಧರ್ಭದಲ್ಲಿ ಉಂಟಾಗುವ ಮಾಲಿನ್ಯದ ತುರ್ತು ಪರಿಹಾರ ಕ್ರಮಗಳಿಗಾಗಿ ಸಹಕಾರ ನೀಡುತ್ತದೆ.
ಪರಿಣಾಮ:
ಈ ತಿಳುವಳಿಕಾ ಒಡಂಬಡಿಕೆಯು ದಕ್ಷಿಣ ಏಷ್ಯಾ ಸಾಗರ ವಲಯವಾದ ಬಾಂಗ್ಲಾದೇಶ, ಮಾಲ್ದೀವ್ಸ್, ಪಾಕಿಸ್ತಾನ, ಮತ್ತು ಶ್ರೀಲಂಕಾ ವ್ಯಾಪ್ತಿಯ ಸಾಗರಗಳಲ್ಲಿ ಸಾಗರ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸಲು ಭಾರತ ಮತ್ತು ಮೇಲ್ಕಾಣಿಸಿದ ಇತರ ಸಾಗರ ರಾಷ್ಟ್ರಗಳ ನಡುವೆ ನಿಕಟವಾದ ಸಹಕಾರ ವರ್ಧಿಸುವ ಇರಾದೆಯನ್ನು ಹೊಂದಿದೆ.
ಅನುಷ್ಟಾನ:
“ಪ್ರಾದೇಶಿಕ ತೈಲ ಸೋರಿಕೆ ತುರ್ತು ಯೋಜನೆ”ಗೆ ಸಂಬಂಧಿಸಿದಂತೆ ತಿಳುವಳಿಕಾ ಒಡಂಬಡಿಕೆಯ ಪ್ರಕಾರ ಭಾರತೀಯ ಕರಾವಳಿ ರಕ್ಷಣಾ ಪಡೆ (ಐ.ಸಿ.ಜಿ.) ಯು ಯೋಜನಾ ಅನುಷ್ಟಾನಕ್ಕೆ ಸೂಕ್ತ ರಾಷ್ಟ್ರೀಯ ಪ್ರಾಧಿಕಾರವಾಗಿರುತ್ತದೆ ಮತ್ತು ಅದು ಕಾರ್ಯಾಚರಣಾ ಸಂಪರ್ಕ
ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಜತೆಗೆ ಐ.ಸಿ.ಜಿ. ಸಾಗರ ರಕ್ಷಣಾ ಸಮನ್ವಯ ಕೇಂದ್ರಗಳೂ (ಎಂ.ಆರ್.ಸಿ.ಸಿ.ಗಳು) ಸಾಗರದ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ತುರ್ತು ಪ್ರತಿಕ್ರಿಯಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
ಹಿನ್ನೆಲೆ:
ದಕ್ಷಿಣ ಏಶ್ಯಾ ವಲಯದಲ್ಲಿ ಪರಿಸರ ರಕ್ಷಣೆ, ನಿರ್ವಹಣೆ ಮತ್ತು ಅದನ್ನು ಉತ್ತಮೀಕರಿಸುವುದನ್ನು ಪ್ರೋತ್ಸಾಹಿಸುವ , ಬೆಂಬಲಿಸುವ ಕ್ರಮವಾಗಿ ಅಪಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ, ಮತ್ತು ಶ್ರೀಲಂಕಾ ಸರಕಾರಗಳು 1982 ರಲ್ಲಿ ಎಸ್.ಎ.ಸಿ.ಇ.ಪಿ. ಯನ್ನು ಶ್ರೀಲಂಕಾದಲ್ಲಿ ಸ್ಥಾಪಿಸಿದವು. ಎಸ್.ಎ.ಸಿ.ಇ.ಪಿ. ಯು ಅಂತಾರಾಷ್ಟ್ರೀಯ ಸಾಗರೋತ್ತರ ಸಂಘಟನೆ (ಐ.ಎಂ.ಒ) ಜತೆಗೂಡಿ ’ಪ್ರಾದೇಶಿಕ ತೈಲ ಸೋರಿಕೆ ತುರ್ತು ನಿಯಂತ್ರಣ ಯೋಜನೆ”ಯನ್ನು ತಯಾರಿಸಿ ಅಭಿವೃದ್ದಿಪಡಿಸಿದೆ . ಬಾಂಗ್ಲಾದೇಶ, ಭಾರತ, ಮಾಲ್ದೀವ್ಸ್, ಪಾಕಿಸ್ತಾನ, ಮತ್ತು ಶ್ರೀಲಂಕಾ ಸಾಗರ ಪ್ರದೇಶ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ತೈಲ ಮಾಲಿನ್ಯದ ಘಟನೆಗಳ ಸಂಧರ್ಭದಲ್ಲಿ ತಕ್ಷಣ ಕಾರ್ಯಪವೃತ್ತವಾಗಲು ಮತ್ತು ಪರಸ್ಪರ ಹಾಗು ಅಂತಾರಾಷ್ಟ್ರೀಯ ಸಹಕಾರ ಪಡೆಯಲು ಇದರಿಂದ ಅನುಕೂಲವಾಗುತ್ತದೆ.
****