ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿಯಲ್ಲಿನ ಅನಧಿಕೃತ ಕಾಲೋನಿಗಳ ನಿವಾಸಿ (ಯುಸಿಗಳು) ಗಳನ್ನು ಮಾಲೀಕತ್ವಕ್ಕೆ ಪರಿಗಣಿಸಲು ಅಥವಾ ಹಕ್ಕು ವರ್ಗಾವಣೆ / ಭೋಗ್ಯದ ಹಕ್ಕು ಗುರುತಿಸಲು / ಪ್ರಕ್ರಿಯೆಗಳ ಕುರಿತಂತೆ ಶಿಫಾರಸು ಮಾಡಲು ಸಮಿತಿಯನ್ನು ರಚಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈ ಸಮಿತಿಯ ಅಧ್ಯಕ್ಷತೆಯನ್ನು ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಹಿಸಲಿದ್ದು, ಸದಸ್ಯರು ಈ ಕೆಳಕಂಡಂತೆ ಇದ್ದಾರೆ:
i. ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಉಪಾಧ್ಯಕ್ಷರು;
ii. ಹೆಚ್ಚುವರಿ ಕಾರ್ಯದರ್ಶಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಓ.ಎಚ್ಯು.ಎ), ಭಾರತ ಸರ್ಕಾರ;
iii. ಮುಖ್ಯ ಕಾರ್ಯದರ್ಶಿ, ದೆಹಲಿ ಎನ್.ಸಿ.ಟಿ. ಸರ್ಕಾರ;
iv. ಆಯುಕ್ತರು ಪೂರ್ವ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆ ದೆಹಲಿ;
v. ಅಧ್ಯಕ್ಷರು, ದೆಹಲಿ ನಗರ ಕಲಾ ಆಯೋಗ;
vi. ಪ್ರೊಫೆಸರ್, ನಗರ ಸಾರಿಗೆ, ಯೋಜನೆ ಮತ್ತು ವಾಸ್ತುಶಾಸ್ತ್ರ ಶಾಲೆ (ಎಸ್ಪಿಎ), ದೆಹಲಿ;
vii. ನಗರ ಯೋಜಕರು ಮತ್ತು ನಿರ್ದೇಶಕರು, ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ;
viii. ಮಾಜಿ ನಿರ್ದೇಶಕರು, ದೆಹಲಿ ಅಗ್ನಿಶಆಮಕ ಸೇವೆ; ಮತ್ತು
ix. ಪ್ರಧಾನ ಆಯುಕ್ತರು, ಡಿಡಿಎ ಸದಸ್ಯ ಕಾರ್ಯದರ್ಶಿಯಾಗಿ
ರಚನೆಯಾಗುವ ಸಮಿತಿ ತನ್ನ ವರದಿಯನ್ನು 90 ದಿನಗಳ ಒಳಗಾಗಿ ಎಂ.ಓ. ಎಚ್.ಯು.ಎ.ಗೆ ಸಲ್ಲಿಸಲಿದೆ. ಸಮಿತಿಯು ಈ ವರದಿಯ ಸಲ್ಲಿಕೆಯ ವೇಳೆ, ಸಂಪುಟ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಲಾಗುವುದು ಮತ್ತು ಸಮಿತಿಯ ಶಿಫಾರಸ್ಸನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಪ್ರಯೋಜನಗಳು:
ಸಮಿತಿಯ ಶಿಫಾರಸುಗಳು ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುತ್ತಿರುವವರಿಗೆ ಮಾಲಿಕತ್ವ ನೀಡಲು ಅಥವಾ ಭೋಗ್ಯ/ಹಕ್ಕು ವರ್ಗಾವಣೆ ನಿಟ್ಟಿನಲ್ಲಿ ಮಾರ್ಗ ತೋರಲಿದೆ. ಇದೇ ಮೊದಲ ಬಾರಿಗೆ ದೆಹಲಿ ಯುಸಿ ನಿವಾಸಿಗಳಿಗೆ ಹಕ್ಕು ನೀಡುವ ಕುರಿತಂತೆ ಪರಿಗಣಿಸಲಾಗುತ್ತಿದೆ.