Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರ ನ್ಯೂಜಿಲೆಂಡ್ ಅಧಿಕೃತ ಭೇಟಿಯ ಫಲಿತಾಂಶದ ಪಟ್ಟಿ

ಪ್ರಧಾನಮಂತ್ರಿ ಅವರ ನ್ಯೂಜಿಲೆಂಡ್ ಅಧಿಕೃತ ಭೇಟಿಯ ಫಲಿತಾಂಶದ ಪಟ್ಟಿ


ದಾಖಲೆಗಳು

ಕ್ರ.ಸಂ

ವಿಷಯ

ಸಂಕ್ಷಿಪ್ತ ವಿವರಣೆ

1

ಭಾರತದ ರಕ್ಷಣಾ ಸಚಿವಾಲಯ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಗಳ ನಡುವಿನ ಸಾಗರ ಸಹಕಾರದ ಒಪ್ಪಂದ

ಸಂವಾದ, ಸಮನ್ವಯ, ಮಾಹಿತಿ ವಿನಿಮಯ ಮತ್ತು ಜಂಟಿ ಚಟುವಟಿಕೆಗಳ ಮೂಲಕ ಇಂಡೋ-ಪೆಸಿಫಿಕ್‌ನಲ್ಲಿ ವರ್ಧಿತ ಕಡಲ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಸ್ಥಾಪಿಸುತ್ತದೆ.

2

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈಡ್ರೋಗ್ರಫಿ ಮತ್ತು ನಾಟಿಕಲ್ ಕಾರ್ಟೋಗ್ರಫಿ ವಿಷಯಗಳಲ್ಲಿ ಸಹಕಾರದ ಕುರಿತು ಜಾರಿ ವ್ಯವಸ್ಥೆ

ನ್ಯಾವಿಗೇಷನಲ್ ಚಾರ್ಟ್‌ಗಳ ಜಂಟಿ ಉತ್ಪಾದನೆ, ಹೈಡ್ರೋಗ್ರಾಫಿಕ್ ಡೇಟಾ ಹಂಚಿಕೆ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯ ಮೂಲಕ ಹೈಡ್ರೋಗ್ರಾಫಿಕ್ ಸಹಕಾರವನ್ನು ಬಲಪಡಿಸುತ್ತದೆ.

3

ಭಾರತೀಯ ನೌಕಾಪಡೆ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸುವ ಕುರಿತು ವ್ಯವಸ್ಥೆ

ಅನುಮೋದಿತ ಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳ ಸಮಯದಲ್ಲಿ ಭಾರತೀಯ ನೌಕಾಪಡೆ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಸುಗಮಗೊಳಿಸುತ್ತದೆ.

4

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಭಯೋತ್ಪಾದನೆ ನಿಗ್ರಹದ ಕುರಿತು ಜಂಟಿ ಕಾರ್ಯಕಾರಿ ಗುಂಪು ಸ್ಥಾಪನೆ ಮಾಡುವುದು

ಸಹಕಾರವನ್ನು ಬಲಪಡಿಸಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಮತ್ತು ಭಯೋತ್ಪಾದನೆ ನಿಗ್ರಹ ಪ್ರಯತ್ನಗಳನ್ನು ಸಂಘಟಿಸಲು ಭಯೋತ್ಪಾದನಾ ನಿಗ್ರಹದ ಕುರಿತು ಜಂಟಿ ಕಾರ್ಯಕಾರಿ ಗುಂಪನ್ನು ಸ್ಥಾಪಿಸುತ್ತದೆ

5

ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ನ್ಯೂಜಿಲೆಂಡ್‌ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ (NEMA) ನಡುವಿನ ಸಹಕಾರದ ಜ್ಞಾಪನಾ ಪತ್ರ

ಭೂಕಂಪನ ಸ್ಥಿತಿಸ್ಥಾಪಕತ್ವ, ಸುನಾಮಿ ಸಿದ್ಧತೆ, ಕರಾವಳಿ ಅಪಾಯ ತಗ್ಗಿಸುವಿಕೆ, ಜ್ಞಾನ ವಿನಿಮಯ, ನೀತಿ ಸಂವಾದ ಮತ್ತು ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಸಹಯೋಗವನ್ನು ಉತ್ತೇಜಿಸುತ್ತದೆ.

6

ಭಾರತದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ನ್ಯೂಜಿಲೆಂಡ್‌ನ ಪ್ರಾಥಮಿಕ ಕೈಗಾರಿಕೆಗಳ ಸಚಿವಾಲಯದ ನಡುವೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ಸಹಕಾರದ ಜ್ಞಾಪನಾ ಪತ್ರ

ತಾಂತ್ರಿಕ ಸಹಯೋಗ, ಜ್ಞಾನ ವಿನಿಮಯ ಮತ್ತು ಉತ್ತಮ ಅಭ್ಯಾಸಗಳ ಮೂಲಕ ಪಶುಸಂಗೋಪನೆ ಮತ್ತು ಹೈನುಗಾರಿಕೆಯಲ್ಲಿ ವರ್ಧಿತ ಸಹಕಾರಕ್ಕಾಗಿ ಚೌಕಟ್ಟನ್ನು ರಚಿಸುತ್ತದೆ.

7

ಭಾರತದ ಪ್ರವಾಸೋದ್ಯಮ ಸಚಿವಾಲಯ ಮತ್ತು ನ್ಯೂಜಿಲೆಂಡ್‌ನ ವ್ಯವಹಾರ, ನಾವೀನ್ಯತೆ ಮತ್ತು ಉದ್ಯೋಗ ಸಚಿವಾಲಯದ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವ್ಯವಸ್ಥೆಗಾಗಿ ಜ್ಞಾಪನಾ ಪತ್ರ

ಆರ್ಥಿಕ ಸಂಬಂಧಗಳನ್ನು ಬಲಪಡಿಸಲು, ಪ್ರವಾಸಿಗರ ಭೇಟಿಯನ್ನು ಹೆಚ್ಚಿಸಲು ಮತ್ತು ಪ್ರತಿ ದೇಶದ ಸಂಸ್ಕೃತಿಯ ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸಲು ಪ್ರವಾಸೋದ್ಯಮದಲ್ಲಿ ಸಹಕಾರವನ್ನು ಉತ್ತೇಜಿಸುತ್ತದೆ

8

ಕ್ರೀಡೆಗಾಗಿ ಭಾರತ-ನ್ಯೂಜಿಲೆಂಡ್ ಜಂಟಿ ಕ್ರಿಯಾ ಯೋಜನೆ

ಉನ್ನತ-ಕಾರ್ಯಕ್ಷಮತೆಯ ಕ್ರೀಡೆ, ಕ್ರೀಡಾ ವಿಜ್ಞಾನ, ಕ್ರೀಡಾ ಔಷಧ ಮತ್ತು ಕ್ರೀಡಾಪಟುಗಳ ಅಭಿವೃದ್ಧಿ ಸೇರಿದಂತೆ ಕ್ರೀಡೆಗಳಲ್ಲಿ ಸಹಯೋಗಕ್ಕಾಗಿ ಒಂದು ಚೌಕಟ್ಟನ್ನು ಒದಗಿಸುತ್ತದೆ.

9

ಗುಜರಾತ್‌ನ ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ (NMHC) ಅಭಿವೃದ್ಧಿಗಾಗಿ NMHC ಮತ್ತು ನ್ಯೂಜಿಲೆಂಡ್ ಸಾಗರ ವಸ್ತುಸಂಗ್ರಹಾಲಯದ ನಡುವೆ ಒಪ್ಪಂದ

ಸಹಯೋಗ ಮತ್ತು ಪರಸ್ಪರ ಒಪ್ಪಿಗೆಯ ಯೋಜನೆಗಳ ಮೂಲಕ ಲೋಥಾಲ್‌ನಲ್ಲಿ NMHC ಅನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಒದಗಿಸುತ್ತದೆ.

10

ಭಾರತದ ಸಂಸ್ಕೃತಿ ಸಚಿವಾಲಯ ಮತ್ತು ನ್ಯೂಜಿಲೆಂಡ್‌ನ ಸಂಸ್ಕೃತಿ ಮತ್ತು ಪರಂಪರೆ ಸಚಿವಾಲಯದ ನಡುವೆ ಸಾಂಸ್ಕೃತಿಕ ಸಹಕಾರಕ್ಕಾಗಿ ಒಪ್ಪಂದ

ಪರಸ್ಪರ ತಿಳಿವಳಿಕೆ ಮತ್ತು ಜನರ ನಡುವಿನ ಸಂಬಂಧಗಳನ್ನು ಬಲಪಡಿಸಲು ಕಲೆ, ಪರಂಪರೆ ಮತ್ತು ಸಾಂಸ್ಕೃತಿಕ ಉಪಕ್ರಮಗಳಲ್ಲಿ ವಿನಿಮಯದ ಮೂಲಕ ಸಾಂಸ್ಕೃತಿಕ ಸಹಕಾರವನ್ನು ಉತ್ತೇಜಿಸುತ್ತದೆ.

ಘೋಷಣೆಗಳು:

ಕ್ರ. ಸಂ.

ವಿಷಯ

ಸಂಕ್ಷಿಪ್ತ ವಿವರಣೆ

1

2030ಕ್ಕೆ ಭಾರತ-ನ್ಯೂಜಿಲೆಂಡ್ ಕಾರ್ಯತಂತ್ರದ ಪಾಲುದಾರಿಕೆ ಮತ್ತು ನೀಲನಕ್ಷೆ

ಭಾರತ ಮತ್ತು ನ್ಯೂಜಿಲೆಂಡ್ ತಮ್ಮ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಎತ್ತರಿಸಿವೆ. ವ್ಯಾಪಾರ, ರಕ್ಷಣೆ, ಸಾಗರ ಭದ್ರತೆ, ಪ್ರವಾಸೋದ್ಯಮ, ಸಂಸ್ಕೃತಿ, ಕ್ರೀಡೆ, ಕೃಷಿ ತಂತ್ರಜ್ಞಾನ, ಜನರ ನಡುವಿನ  ಸಂಬಂಧಗಳು, ಜೊತೆಗೆ ಇಂಡೋ-ಪೆಸಿಫಿಕ್ ಆದ್ಯತೆಗಳು ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ಸಮನ್ವಯವನ್ನು ಬಲಪಡಿಸುತ್ತಿವೆ. 2030 ರ ನೀಲನಕ್ಷೆಯು ಮುಂದಿನ ನಾಲ್ಕು ವರ್ಷಗಳ ಕಾಲ ಸಂಬಂಧಿತ ಸಚಿವಾಲಯಗಳು ಮತ್ತು ಪಾಲುದಾರರಲ್ಲಿ ಭಾರತ-ನ್ಯೂಜಿಲೆಂಡ್ ಕಾರ್ಯತಂತ್ರದ ಪಾಲುದಾರಿಕೆಯ ರಚನಾತ್ಮಕ ಜಾರಿಗೆ ಮಾರ್ಗದರ್ಶನ ನೀಡಲು ಒಂದು ಕಾರ್ಯತಂತ್ರದ ನೀಲನಕ್ಷೆಯನ್ನು ಒದಗಿಸುತ್ತದೆ.

2

2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು NZ$7 ಬಿಲಿಯನ್ ಅಥವಾ ₹35,000 ಕೋಟಿಗೆ ದ್ವಿಗುಣಗೊಳಿಸುವುದು

ಮುಕ್ತ ವ್ಯಾಪಾರ ಒಪ್ಪಂದದ ಸಂದರ್ಭದಲ್ಲಿ, ಆರ್ಥಿಕ ಸಂಬಂಧಗಳನ್ನು ವೃದ್ಧಿಸಲು ಮತ್ತು ಮಾರುಕಟ್ಟೆ ಲಭ್ಯತೆಯನ್ನು ವಿಸ್ತರಿಸಲು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು NZ$7 ಬಿಲಿಯನ್ (₹35,000 ಕೋಟಿ) ಗೆ ದ್ವಿಗುಣಗೊಳಿಸುವ ಗುರಿಯನ್ನುಉಭಯ ದೇಶಗಳು  ಹೊಂದಿವೆ.

3

ಸಾಗರ ಭದ್ರತಾ ಸಂವಾದವನ್ನು ಸ್ಥಾಪಿಸುವುದು

ಸಹಕಾರ, ಸಮನ್ವಯ ಮತ್ತು ಮಾಹಿತಿ ವಿನಿಮಯವನ್ನು ಬಲಪಡಿಸಲು ಭಾರತ ಮತ್ತು ನ್ಯೂಜಿಲೆಂಡ್ ಸಾಗರ ಭದ್ರತಾ ಸಂವಾದವನ್ನು ಸ್ಥಾಪಿಸಲು ಒಪ್ಪಿಕೊಂಡಿವೆ.

4

ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (IPOI) ಅಡಿಯಲ್ಲಿ ನ್ಯೂಜಿಲೆಂಡ್ ಸಾಗರ  ಭದ್ರತೆಯನ್ನು ಆದ್ಯತೆಯ ಆಧಾರಸ್ತಂಭವಾಗಿ ನಾಮನಿರ್ದೇಶನ ಮಾಡಿದೆ

ಐಪಿಒಐನ ಏಳು ಸ್ತಂಭಗಳ ಅಡಿಯಲ್ಲಿ, ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ (ಐಯುಯು) ಮೀನುಗಾರಿಕೆಯನ್ನು ಎದುರಿಸುವತ್ತ ಗಮನಹರಿಸಿದ ನಿರ್ದಿಷ್ಟ ಸಹಕಾರ ಚಟುವಟಿಕೆಗಳನ್ನು ಕೈಗೊಳ್ಳಲು ನ್ಯೂಜಿಲೆಂಡ್ ಸಾಗರ ಭದ್ರತಾ ಸ್ತಂಭವನ್ನು ಸೇರಿಕೊಂಡಿದೆ

5

ನ್ಯೂಜಿಲೆಂಡ್ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಸೇರುತ್ತಿದೆ

ನ್ಯೂಜಿಲೆಂಡ್ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವುದರಿಂದ ಶುದ್ಧ ಇಂಧನ ಪರಿವರ್ತನೆಗಾಗಿ ಸುಸ್ಥಿರ ಜೈವಿಕ ಇಂಧನಗಳ ಅಭಿವೃದ್ಧಿ ಮತ್ತು ಅಳವಡಿಕೆಯನ್ನು ವೇಗಗೊಳಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುತ್ತದೆ

6

ನಾಗಾಲ್ಯಾಂಡ್ ಮತ್ತು ಉತ್ತರಾಖಂಡದಲ್ಲಿ ಕೀವಿಹಣ್ಣಿಗಾಗಿ 2 ಶ್ರೇಷ್ಠತಾ ಕೇಂದ್ರಗಳ ಕೀವಿಹಣ್ಣಿನ ಕ್ರಿಯಾ ಯೋಜನೆ ಮತ್ತು ಸ್ಥಾಪನೆ

ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಕೃಷಿ ಉತ್ಪಾದಕತಾ ಪಾಲುದಾರಿಕೆಯಡಿಯಲ್ಲಿ, ನಾಗಾಲ್ಯಾಂಡ್ ಮತ್ತು ಉತ್ತರಾಖಂಡದಲ್ಲಿ ಎರಡು ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಯೊಂದಿಗೆ ಕೀವಿಹಣ್ಣಿನ ಕ್ರಿಯಾ ಯೋಜನೆಯನ್ನು ಆರಂಭಿಸಲಾಗುತ್ತಿದೆ, ಇದು ಉತ್ಪಾದಕತೆಯನ್ನು ಹೆಚ್ಚಿಸಲು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಕೃಷಿ ನಾವೀನ್ಯತೆಯಲ್ಲಿ ಸಹಯೋಗದ ನೆರವಿನಿಂದ ಕೂಡಿರುತ್ತದೆ.

7

ಗೋವಾದ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR) ಮತ್ತು ನ್ಯೂಜಿಲ್ಯಾಂಡ್ ಕ್ಯಾಂಟರ್ಬರಿ ವಿಶ್ವವಿದ್ಯಾಲಯ ನಡುವೆ ಎಂಒಯು

ಅಂಟಾರ್ಕ್ಟಿಕ್ ಸಂಶೋಧನೆಯಲ್ಲಿ ಸಹಯೋಗಕ್ಕಾಗಿ ಚೌಕಟ್ಟನ್ನು ಸ್ಥಾಪಿಸುತ್ತದೆ. ಜಂಟಿ ಸಂಶೋಧನೆ, ಶೈಕ್ಷಣಿಕ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಇತರ ಪರಸ್ಪರ ಪ್ರಯೋಜನಕಾರಿ ವೈಜ್ಞಾನಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ  ಇದು ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು  ಹೊಂದಿದೆ

8

ಕುಂಡ್ಲಿಯ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆ (NIFTEM-K) ಮತ್ತು ನ್ಯೂಜಿಲೆಂಡ್‌ನ ಮ್ಯಾಸ್ಸಿ ವಿಶ್ವವಿದ್ಯಾಲಯದ ನಡುವೆ ಎಂಒಯು

. ಸಂಶೋಧನೆ, ಶೈಕ್ಷಣಿಕ ವಿನಿಮಯ, ವಿದ್ಯಾರ್ಥಿಗಳ ಸಂಚಾರ ಮತ್ತು ಇತರ ಪರಸ್ಪರ ಒಪ್ಪಿದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹಕಾರಕ್ಕಾಗಿ ಚೌಕಟ್ಟನ್ನು ಸ್ಥಾಪಿಸುತ್ತದೆ

 

 

*****