Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂವಿಧಾನವು ಸಾಮಾಜಿಕ ನ್ಯಾಯ ಮತ್ತು ವಿಕಸಿತ ಭಾರತದ ಕಡೆಗೆ ನಮ್ಮ ಶಾಶ್ವತ ದಿಕ್ಕು ಸೂಚಿಸುವ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಕೇಂದ್ರ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೆಘ್ವಾಲ್ ಅವರ ಲೇಖನವನ್ನು ಹಂಚಿಕೊಂಡಿದ್ದು, ಸಂವಿಧಾನವು ಸಾಮಾಜಿಕ ನ್ಯಾಯ ಮತ್ತು ವಿಕಸಿತ ಭಾರತದ ಕಡೆಗೆ ನಮ್ಮ ಶಾಶ್ವತ ದಿಕ್ಕುಸೂಚಿಯಾಗಿರುವುದನ್ನು ಬಿಂಬಿಸುತ್ತದೆ.

ಶ್ರೀ ಮೆಘ್ವಾಲ್ ಅವರು ಕಲ್ಯಾಣ ಉಪಕ್ರಮಗಳು ಮತ್ತು ಪ್ರಮುಖ ಸಂವಿಧಾನಾತ್ಮಕ ವಿಧಿಗಳನ್ನು ಬಿಂಬಿಸಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ದೇಶವನ್ನು ಹತ್ತಿರಕ್ಕೆ ಕೊಂಡೊಯ್ಯುತ್ತಾರೆ. ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗಾಗಿ ಕ್ರಮಗಳ ಮೇಲೆ ಗಮನಹರಿಸಿ, ರಾಷ್ಟ್ರ ನಿರ್ಮಾಣದಲ್ಲಿ ಸಂವಿಧಾನಾತ್ಮಕ ಮೌಲ್ಯಗಳ ಮಹತ್ವವನ್ನು ಒತ್ತಿಹೇಳಿದರು.

ಪ್ರಧಾನಮಂತ್ರಿ ಕಚೇರಿ  ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದೆ:

“ಸಂವಿಧಾನವು ಸಾಮಾಜಿಕ ನ್ಯಾಯ ಮತ್ತು ವಿಕಸಿತ ಭಾರತದ ಕಡೆಗೆ ನಮ್ಮ ಕಾಲಾತೀತ ದಿಕ್ಕುಸೂಚಿಯಾಗಿಯೇ ಉಳಿದಿದೆ.

ಕೇಂದ್ರ ರಾಜ್ಯ ಸಚಿವರಾದ ಶ್ರೀ @arjunrammeghwal ಕಲ್ಯಾಣ ಉಪಕ್ರಮಗಳು ಮತ್ತು ಮಹತ್ವದ ಸಂವಿಧಾನಾತ್ಮಕ ನಿಯಮಾವಳಿಗಳ ಬಗ್ಗೆ ಬರೆಯುತ್ತಾರೆ. ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾರತದ ದೃಷ್ಟಿಯನ್ನು ನಿಜವಾಗಿಸುವತ್ತ ದೇಶವನ್ನು ಹತ್ತಿರಕ್ಕೆ ಕೊಂಡೊಯ್ಯುತ್ತದೆ.

ಅವರು ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗಾಗಿ ಕೈಗೊಳ್ಳುವ ಕ್ರಮಗಳನ್ನು ಬಿಂಬಿಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಸಂವಿಧಾನಾತ್ಮಕ ಮೌಲ್ಯಗಳ ಮಹತ್ವವನ್ನೂ ಅವರು ಒತ್ತಿಹೇಳುತ್ತಾರೆ.”

 

*****