ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 01.01.2017ರಿಂದ ಅನ್ವಯವಾಗುವಂತೆ ದೇಶದ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆಯಾಗಿರುವ ಹೆರಿಗೆ ಸೌಲಭ್ಯ ಕಾರ್ಯಕ್ರಮವನ್ನು ದೇಶಾದ್ಯಂತ ಜಾರಿ ಮಾಡಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಪ್ರಧಾನಮಂತ್ರಿಯವರು ದಿನಾಂಕ 31.12.2016ರಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೆರಿಗೆ ಸವಲತ್ತು ಕಾರ್ಯಕ್ರಮವನ್ನು ದೇಶಾದ್ಯಂತ ಜಾರಿ ಮಾಡುವುದಾಗಿ ಘೋಷಿಸಿದ್ದರು.
ಹೆರಿಗೆ ಸವಲತ್ತು ಕಾರ್ಯಕ್ರಮವು ವೇತನ ನಷ್ಟ ಪರಿಹಾರವನ್ನು ನಗದು ರೂಪದ ಪ್ರೋತ್ಸಾಹದ ಮೂಲಕ ನೀಡುವುದರಿಂದ ಮಹಿಳೆಯರು ಹೆರಿಗೆಗೆ ಮೊದಲು ಮತ್ತು ಹೆರಿಗೆಯ ನಂತರ ಸಾಕಷ್ಟು ವಿಶ್ರಾಂತಿ ಪಡೆಯಲು ಮತ್ತು ಅಪೌಷ್ಟಿಕತೆಗೆ ಒಳಗಾಗದಂತೆ ತಡೆಯುತ್ತದೆ.
01.01.2017 ರಿಂದ 31.03.2020ರವರೆಗಿನ ಅವಧಿಗೆ ಈ ಕಾರ್ಯಕ್ರಮಕ್ಕೆ ಪ್ರಸ್ತಾಪಿತ ವೆಚ್ಚವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲು ಸೇರಿ ರೂ.12,661 ಕೋಟಿ ರೂಪಾಯಿಗಳಾಗಿವೆ. 01.01.2017 ರಿಂದ 31.03.2020ರವರೆಗೆಭಾರತ ಸರ್ಕಾರದ ಪಾಲು ಸುಮಾರು 7932 ಕೋಟಿ ರೂಪಾಯಿಗಳಾಗಿರುತ್ತದೆ.
ಯೋಜನೆಯ ಉದ್ದೇಶ
ಯೋಜನೆಯ ಗುರಿ
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಅಥವಾ ಯಾವುದೇ ಕಾನೂನಿನ ರೀತ್ಯ ಅದೇ ಸ್ವರೂಪದ ಸೌಲಭ್ಯಕ್ಕೆ ಅರ್ಹರಾದವರನ್ನು ಹೊರತುಪಡಿಸಿ, ಎಲ್ಲ ಅರ್ಹ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು (ಪಿಡ್ಲ್ಯು ಅಂಡ್ ಎಲ್.ಎಂ.), ಈ ಯೋಜನೆಯ ಸವಲತ್ತು ಪಡೆಯಲಿದ್ದಾರೆ. ಪಿಡ್ಲ್ಯು ಅಂಡ್ ಎಲ್.ಎಂ.ಗಳಿಗೆ ಮೊದಲ ಜೀವಂತ ಮಗುವಿನ ಹೆರಿಗೆಗೆ 5 ಸಾವಿರ ರೂಪಾಯಿಗಳನ್ನು ಮೂರು ಕಂತಿನಲ್ಲಿ ಎಂ.ಡಬ್ಲ್ಯುಸಿಡಿಯಿಂದ ನೀಡಲಾಗುತ್ತದೆ. ಉಳಿದ ನಗದು ಪ್ರೋತ್ಸಾಹವನ್ನು ಅಂಗೀಕೃತ ನಿಯಮಗಳ ರೀತ್ಯ ಹೆರಿಗೆ ಸೌಲಭ್ಯದ ಅಡಿಯಲ್ಲಿ ಸಾಂಸ್ಥಿಕ ಹೆರಿಗೆಯ ಬಳಿಕ ನೀಡಲಾಗುತ್ತದೆ. ಅಂದರೆ ಪ್ರತಿ ಮಹಿಳೆ 6 ಸಾವಿರ ರೂಪಾಯಿ ಸರಾಸರಿ ಸವಲತ್ತು ಪಡೆಯುತ್ತಾರೆ.
ಷರತ್ತುಗಳು ಮತ್ತು ಕಂತುಗಳು
ಅರ್ಹ ಗರ್ಭಿಣಿಯರು ಮತ್ತು ಎದೆ ಹಾಲುಣಿಸುವ ತಾಯಂದಿರು ಈ ಕೆಳಗೆ ನಮೂದಿಸಿರುವ ಪ್ರಕಾರ ಮೂರು ಕಂತುಗಳಲ್ಲಿ ನಗದು ಪ್ರೋತ್ಸಾಹ ಪಡೆಯಲಿದ್ದಾರೆ.:
|
ಪ್ರಥಮ ಕಂತು |
· ಗರ್ಭಿಣಿ ಎಂದು ನೋಂದಾಯಿಸಿದ ವೇಳೆ |
1,000/- |
|
ಎರಡನೇ ಕಂತು |
· ಪ್ರಸವ ಪೂರ್ವದಲ್ಲಿ ಕನಿಷ್ಠ ಒಂದು ತಪಾಸಣೆ ಬಳಿಕ (ಆರು ತಿಂಗಳು ಗರ್ಭದ ಬಳಿಕ) |
2,000/- |
|
ಮೂರನೇ ಕಂತು |
· ಮಗುವಿನ ಜನನದ ದಾಖಲೆ ಬಳಿಕ. · ಮಗುವಿನ ಮೊದಲ ಆವರ್ತನೆಯ ಬಿಸಿಜಿ, ಓಪಿವಿ, ಡಿಪಿಟಿ ಮತ್ತು ಹೆಪಟೈಟಿಸ್ ಬಿ ಅಥವಾ ಅದಕ್ಕೆ ಸಮಾನವಾದ ಲಸಿಕೆ ಬಳಿಕ |
2,000/- |
ನಗದು ವರ್ಗಾವಣೆ | ಷರತ್ತುಗಳು |
ಮೊತ್ತ ( ₹ಗಳಲ್ಲಿ) |
|---|
ಅರ್ಹ ಫಲಾನುಭವಿಗಳು ಸಾಂಸ್ಥಿಕ ಹೆರಿಗೆಯ ಬಳಿಕ ಅನುಮೋದಿತ ನಿಯಮಗಳ ಅಡಿಯಲ್ಲಿ ನಿರಂತರವಾಗಿ ಹಾಲಿ ಇರುವ ಹೆರಿಗೆ ಸೌಲಭ್ಯ ಕಾರ್ಯಕ್ರಮದ ಸೌಲಭ್ಯಗಳನ್ನು ಪಡೆಯುತ್ತಿರುತ್ತಾರೆ, ಅಂದರೆ ಸರಾಸರಿ ಒಬ್ಬ ಮಹಿಳೆ 6 ಸಾವಿರ ರೂಪಾಯಿ ಪಡೆಯುತ್ತಾರೆ.
ಫಲಾನುಭವಿಗಳಿಗೆ ಹಣ ವರ್ಗಾವಣೆಯ ರೀತಿ
ಹಣ ವರ್ಗಾವಣೆಯು ಕಡ್ಡಾಯವಾಗಿ ಡಿಬಿಟಿ ಮೂಲಕವೇ ಆಗುತ್ತದೆ.
ಹಿನ್ನೆಲೆ:
ಭಾರತ ಸರ್ಕಾರವು ತಾಯಿ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬ ಮಹಿಳೆಗೂ ತನ್ನ ಗರ್ಭಧಾರಣೆ ಮತ್ತು ಪ್ರಸವ ಸಂದರ್ಭದಲ್ಲಿ ಸೂಕ್ತ ಬೆಂಬಲ ಮತ್ತು ಆರೋಗ್ಯ ಸೇವೆ ಒದಗಿಸಲು ಹಾಗೂ ಪ್ರತಿಯೊಂದು ನವಜಾತ ಶಿಶುವೂ ಸಕಾಲದಲ್ಲಿ ರೋಗನಿರೋಧಕ ಲಸಿಕೆ ಪಡೆಯುವದರ ಖಾತ್ರಿಗೆ ಬದ್ಧವಾಗಿದೆ. ಸಾಮಾನ್ಯವಾಗಿ ಪ್ರತಿ ಮಹಿಳೆಗೂ ತನ್ನ ಚೊಚ್ಚಲ ಹೆರಿಗೆಯಲ್ಲಿ ಹಲವು ಸವಾಲುಗಳು ಮತ್ತು ಒತ್ತಡದ ಸ್ಥಿತಿ ಎದುರಾಗುತ್ತವೆ. ಹೀಗಾಗಿ ಗರ್ಭಿಣಿಯರಿಗೆ ಸರಾಗ ಮತ್ತು ಸುರಕ್ಷಿತ ಹೆರಿಗೆಗೆ ಬೆಂಬಲ ನೀಡುವ ಮತ್ತು ಪ್ರಥಮ ಜೀವಂತ ಮಗವಿಗೆ ರೋಗ ನಿರೋದಕತ್ವದ ಉದ್ದೇಶವನ್ನು ಯೋಜನೆ ಹೊಂದಿದೆ. ಸುಧಾರಿತ ಆರೋಗ್ಯ ಸೇವೆಯು ಪಿಡಬ್ಲ್ಯು ಅಂಡ್ ಎಲ್.ಎಂ.ಗಳ ಸ್ವಭಾವ ಉತ್ತಮ ಆರೋಗ್ಯ ಮತ್ತು ತಾಯಿ ಮತ್ತು ಮಗುವಿನ ಉತ್ತಮ ಸ್ಥಿತಿಯನ್ನು ಬಯಸುತ್ತದೆ.
***
AKT/VBA/SH
A decision that will safeguard the rights & interests of women. https://t.co/OVKSpkDo6O
— Narendra Modi (@narendramodi) May 17, 2017