Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದ್ವಿ ತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಕಿರ್ಗಿಜ್ ನಡುವಿನ ಒಪ್ಪಂದದ ತಿದ್ದುಪಡಿಯ ಶಿಷ್ಟಾಚಾರಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿ ತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಕಿರ್ಗಿಜ್ ನಡುವಿನ ಒಪ್ಪಂದದ ತಿದ್ದುಪಡಿಯ ಶಿಷ್ಟಾಚಾರಕ್ಕೆ ತನ್ನ ಅನುಮೋದನೆ ನೀಡಿದೆ.  

ದ್ವಿ ತೆರಿಗೆ ತಡೆ ಒಪ್ಪಂದ (ಡಿಟಿ.ಎಎ) ತಿದ್ದುಪಡಿಯ ಶಿಷ್ಟಾಚಾರವು ಡಿಟಿಎಎಯ ಅನುಚ್ಛೇದ 26 (ಮಾಹಿತಿ ವಿನಿಮಯ)ನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ನವೀಕರಿಸುವ ಉದ್ದೇಶ ಹೊಂದಿದೆ.

ನವೀಕೃತ ಅನುಚ್ಛೇದವು ಸಾಧ್ಯವಾದಷ್ಟೂ ವಿಸ್ತೃತ ಮಾಹಿತಿಯ ವಿನಿಮಯಕ್ಕೆ ಅವಕಾಶ ನೀಡುತ್ತದೆ. ಹೊಸ ಪ್ಯಾರಾಗಳಾದ 4 ಮತ್ತು 5ನ್ನು ಡಿಟಿಎಎಯ ಹಾಲಿ ಇರುವ ಅನುಚ್ಛೇದ 26ರಲ್ಲಿ ಅಡಕ ಮಾಡಲಾಗುವುದು, ಇದರಿಂದ ಯಾವ ದೇಶಕ್ಕೆ ಮಾಹಿತಿ ಅಗತ್ಯವಿದೆಯೋ ಅದಕ್ಕೆ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಇತ್ಯಾದಿ ಹೊಂದಿರುವ ಆ ಅಗತ್ಯ ಮಾಹಿತಿಯಲ್ಲಿ ತನ್ನ ದೇಶೀಯ ತೆರಿಗೆಯ ಹಿತಾಸಕ್ತಿ ಇಲ್ಲವೆಂಬ ಕಾರಣಕ್ಕೆ ಮಾಹಿತಿಯನ್ನು ನಿರಾಕರಿಸಲು ಬರುವುದಿಲ್ಲ. ಈ ಶಿಷ್ಟಾಚಾರವು ಡಿಟಿಎಎ ಅಡಿ ಪಡೆದ ಮಾಹಿತಿಯನ್ನು ತನ್ನ ಇತರ ಕಾನೂನು ಜಾರಿ ಉದ್ದಶಗಳಿಗೆ ಬಳಕೆ ಮಾಡಲು ಮತ್ತು ರಾಜ್ಯಗಳಿಗೆ ಬಳಕೆ ಮಾಡಲು ಅಧಿಕಾರ ನೀಡಲು ಪೂರೈಕೆ ಮಾಡಲು ಭಾರತವನ್ನು ಮತ್ತಷ್ಟು ಸಬಲೀಕರಿಸಲಿದೆ.

ಹಿನ್ನೆಲೆ:

ಹಾಲಿ ಭಾರತ ಮತ್ತು ಕಿರ್ಗಿಜ್ ಗಣರಾಜ್ಯಗಳ ನಡುವೆ ಇರುವ ಡಿಟಿಎಎಯನ್ನು 7/02/2001ರಂದು ಅಧಿಸೂಚಿಸಲಾಗಿತ್ತು ಮತ್ತು ಇದು10/01/2001ರಿಂದ ಜಾರಿಯಲ್ಲಿತ್ತು. ದ್ವಿತೆರಿಗೆ ತಡೆಯುವ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಗಟ್ಟುವುದಕ್ಕಾಗಿ ಭಾರತ ಮತ್ತು ಕಿರ್ಗಿಜ್ ಗಣರಾಜ್ಯದ ನಡುವೆ ಡಿಟಿಎಎ ತಿದ್ದುಪಡಿ ಶಿಷ್ಟಾಚಾರಕ್ಕೆ, ಎರಡೂ ದೇಶಗಳು ಅಂಕಿತ ಹಾಕಲು ಒಪ್ಪಿಗೆ ಸೂಚಿಸಿವೆ.

*****