Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಮಾಮಿ ಗಂಗೆ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಗುರುವಾರ ಸಂಜೆ, ನಮಾಮಿ ಗಂಗೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದರು.

ಈ ವಿಷಯದ ಮೇಲಿನ ಪ್ರಾತ್ಯಕ್ಷಿಕೆಯ ವೇಳೆ, ವಿವಿಧ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಂತೆ ಮತ್ತು ಕಾರ್ಯಕ್ರಮದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರ ನೀಡಿದರು.

ನದಿಯ ತಟದ ಪಟ್ಟಣಗಳಲ್ಲಿನ ತ್ಯಾಜ್ಯ ನೀರು ಸಂಸ್ಕರಣೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಗಂಗೆಯ ಮುಖ್ಯ ವಾಹಿನಿಯ ಗುಂಟ ಇರುವ ಹರಿದ್ವಾರ, ಕಾನ್ಪುರ, ಅಲಹಾಬಾದ್, ವಾರಾಣಸಿ, ಪಾಟ್ನಾ, ಭಾಗಲ್ಪುರ್, ಹೌರಾ ಮತ್ತು ಕೋಲ್ಕತ್ತಾ ಸೇರಿದಂತೆ ದೊಡ್ಡ ನಗರಗಳ ಬಗ್ಗೆ ಗಣನೀಯವಾದ ಗಮನ ಹರಿಸಲಾಗಿದೆ.

ಹೆಚ್ಚು ಮಾಲಿನ್ಯದ ಕೈಗಾರಿಕೆಗಳ ವಿಚಾರದಲ್ಲಿ ತೀವ್ರ ನಿಗಾ ಮತ್ತು ತಪಾಸಣೆಯನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಗಂಗಾ ನದಿಯ ಕೆಲವು ಉಪ ನದಿಗಳ ನೀರಿನ ಗುಣಮಟ್ಟ ಗಣನೀಯಪ್ರಮಾಣದಲ್ಲಿ ಸುಧಾರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕರಗಿದ ಆಮ್ಲಜನಕ” ಮತ್ತು “ಜೈವಿಕ ರಾಸಾಯನಿಕ ಆಮ್ಲಜನಕದ ಬೇಡಿಕೆ”ಯ ಮಾನದಂಡಗಳನ್ನು ಈ ನಿರ್ಧರಣೆಯ ಭಾಗವಾಗಿ ಅಧ್ಯಯನ ಮಾಡಲಾಗಿದೆ.

ಅಲ್ಲದೆ ಗಂಗಾ ನದಿಯ ತಡದ ಗ್ರಾಮಗಳಲ್ಲಿ ಗ್ರಾಮೀಣ ನೈರ್ಮಲ್ಯದಲ್ಲಿ ಆಗಿರುವ ಗಣನೀಯ ಪ್ರಗತಿಯ ಬಗ್ಗೆಯೂ ಪ್ರಧಾನಿಯವರಿಗೆ ತಿಳಿಯಪಡಿಸಲಾಯಿತು. ಪ್ರಧಾನಮಂತ್ರಿಯವರು, ಗಂಗಾ ನದಿಯ ಶುದ್ಧೀಕರಣ ವಿಚಾರದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಮತ್ತು ಅವರನ್ನು ತೊಡಗಿಸಿಕೊಳ್ಳುವ ಬಗ್ಗೆ ಪ್ರತಿಪಾದಿಸಿದರು.

ಪ್ರಧಾನಮಂತ್ರಿಗಳ ಕಾರ್ಯಾಲಯ, ನೀತಿ ಆಯೋಗ, ಜಲ ಸಂಪನ್ಮೂಲ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ, ಗಂಗಾ ಶುದ್ಧೀಕರಣ ರಾಷ್ಟ್ರೀಯ ಅಭಿಯಾನ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

***

AKT/AK