ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ವಿಯೆಟ್ನಾಂ ಸಮಾಜವಾದಿ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಲೆ ಮಿನ್ಹ್ ಹಂಗ್ ಅವರನ್ನು ಭೇಟಿಯಾದರು.
ಪಾಲುದಾರ ರಾಷ್ಟ್ರವಾಗಿ ಬ್ರಿಕ್ಸ್ ಶೃಂಗಸಭೆಯಲ್ಲಿ ವಿಯೆಟ್ನಾಂ ಭಾಗವಹಿಸಿರುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು. ಮೇ 2026ರಲ್ಲಿ ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಮಾಜವಾದಿ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಟು ಲಾಮ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವರ್ಧಿತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾದ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಲು ಈ ಸಭೆಯು ಉಭಯ ನಾಯಕರಿಗೆ ಅವಕಾಶವನ್ನು ಒದಗಿಸಿತು. ಇಬ್ಬರೂ ನಾಯಕರು ಪರಸ್ಪರ ಪ್ರಾಮುಖ್ಯತೆಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ತಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.
ಭಾರತ ಮತ್ತು ವಿಯೆಟ್ನಾಂ ಹಂಚಿಕೆಯ ನಾಗರಿಕ ಪರಂಪರೆ, ಪರಸ್ಪರ ನಂಬಿಕೆ ಮತ್ತು ತಿಳುವಳಿಕೆಯಲ್ಲಿ ಬೇರೂರಿರುವ ಸಮಯ-ಪರೀಕ್ಷಿತ ಸ್ನೇಹವನ್ನು ಹಂಚಿಕೊಂಡಿವೆ. ವಿಯೆಟ್ನಾಂ ಭಾರತದ ಆಕ್ಟ್ ಈಸ್ಟ್ ಪಾಲಿಸಿಯ ಪ್ರಮುಖ ಆಧಾರಸ್ತಂಭವಾಗಿದೆ ಮತ್ತು ಆಗ್ನೇಯ ಏಷ್ಯಾದೊಂದಿಗಿನ ಭಾರತದ ವಿಶಾಲ ಸಂಬಂಧದಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ.
*****
PM @narendramodi met PM Lê Minh Hưng of Vietnam on the sidelines of the BRICS Summit in Delhi today. Discussions focused on strengthening defence and security cooperation, expanding collaboration in energy, rare earths and space. Both leaders also discussed ways to boost trade… pic.twitter.com/leoposnCmZ
— PMO India (@PMOIndia) September 12, 2026
Met Prime Minister Lê Minh Hưng of Vietnam on the sidelines of the BRICS Summit.
— Narendra Modi (@narendramodi) September 12, 2026
We had productive discussions on:
Deepening defence and security cooperation, including the proposed 2+2 mechanism.
Expanding cooperation in energy, rare earths and space.
Working towards $25… pic.twitter.com/VMGO9uMfw6