ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಗೆ ಸೇರಿದ ಈ ಕೆಳಕಂಡ ಪ್ರಸ್ತಾಪಗಳಿಗೆ ತನ್ನ ಅನುಮೋದನೆ ನೀಡಿದೆ:
(ಅ) ವಸ್ತು ಪ್ರದರ್ಶನ ಸಹಿತ ಸಮ್ಮೇಳನ ಕೇಂದ್ರ (ಇಸಿಸಿ), ದ್ವಾರಕ ಮತ್ತು ಪೂರಕ ಮೂಲಸೌಕರ್ಯವನ್ನು ಪಿಪಿಪಿ ಮತ್ತು ಪಿಪಿಪಿಯೇತರ ಮಾದರಿಯಲ್ಲಿ (ವಸ್ತುಪ್ರದರ್ಶನ ಮತ್ತು ಸಮ್ಮೇಳನಕ್ಕೆ ಜಾಗ, ಆಸನ ಸಹಿತ ಸಾರ್ವಜನಿಕ ಕಾರ್ಯಕ್ರಮ ಪ್ರದೇಶ (ಅರೇನಾ), ಟ್ರಂಕ್ – ಮೂಲಸೌಕರ್ಯ, ಮೆಟ್ರೋ/ಎನ್.ಎಚ್.ಎ.ಐ. ಸಂಪರ್ಕ, ಹೊಟೆಲ್, ಕಚೇರಿ ಮತ್ತು ಚಿಲ್ಲರೆ ಪ್ರದೇಶ ಇತ್ಯಾದಿ.) 2025ರೊಳಗೆ ಅಂದಾಜು 25,703 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲು.
(ಆ) ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಶೇ.100ರಷ್ಟು ಈಕ್ವಿಟಿಯೊಂದಿಗೆ ಯೋಜನೆಗಳ ಅಭಿವೃದ್ಧಿ ಮತ್ತು ಜಾರಿಗಾಗಿ ವಿಶೇಷ ಉದ್ದೇಶದ ವಾಹಕವಾಗಿ (ಸ್ಪೆಷಲ್ ಪರ್ಪಸ್ ವೆಹಿಕಲ್ – ಎಸ್.ಪಿವಿ.) ಹೊಸ ಸರ್ಕಾರಿ ಕಂಪನಿ ಸ್ಥಾಪನೆ. ಭಾರತ ಸರ್ಕಾರವು 2037.39 ಕೋಟಿ ರೂಪಾಯಿಗಳ ಬಜೆಟ್ ಬೆಂಬಲವನ್ನು ಈ ಎಸ್.ಪಿ.ವಿ.ಗೆ ಈಕ್ವಿಟಿಯ ರೂಪದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಡಿಡಿಎಯಿಂದ ಭೂಮಿ ಮತ್ತು ವೆಚ್ಚ, ನೀರು ಮತ್ತು ಒಳಚರಂಡಿ ಮೂಲಸೌಕರ್ಯ, ಮೆಟ್ರೋ ಸಂಪರ್ಕಕ್ಕಾಗಿ ರೈಲ್ವೆ ಭೂಮಿ ಮತ್ತು ಪಿಪಿಪಿಯೇತರ ಇತರ ವೆಚ್ಚಗಳು ಸೇರಿದಂತೆ ಟ್ರಂಕ್ ಮೂಲಸೌಕರ್ಯ, ವಸ್ತುಪ್ರದರ್ಶನ ಕೇಂದ್ರದ ಭಾಗ, ವಿಶ್ರಾಂತಿ ಕೊಠಡಿ, ಸಮ್ಮೇಳನ ಕೇಂದ್ರ, ಮೆಟ್ರೋ ಸಂಪರ್ಕ, ಎನ್ಎಚ್ಎಐ ರಸ್ತೆ ಸಂಪರ್ಕಕ್ಕಾಗಿ ಒದಗಿಸಲಿದೆ.
(ಇ) ಸರಕಾರವು ಖಾತರಿಯೊಂದಿಗೆ ಮಾರುಕಟ್ಟೆಯಿಂದ ರೂ. 1,381 ಕೋಟಿ ರೂ. ಸಾಲ ಮತ್ತು ಸರ್ಕಾರಿ ಸ್ವಾಮ್ಯದ ಭೂಮಿ ಬಳಕೆಯ ಆದಾಯ ಮತ್ತು ಎಸ್ಪಿವಿಯ ವಾರ್ಷಿಕ ಯೋಜನಾ ಆದಾಯದ ಮೂಲಕ 4,000 ಕೋಟಿ ರೂ. ಕ್ರೋಡೀಕರಣಕ್ಕಾಗಿ. ಭೂಮಿಯ ಬಳಕೆಯ ಆದಾಯ ಮತ್ತು ಎಸ್.ಪಿ.ವಿ.ಯಿಂದ ಪಡೆವ ವಾರ್ಷಿಕ ಆದಾಯವನ್ನು ಯೋಜನೆಯ ಪಿಪಿಪಿಯೇತರ ಅಂಶಗಳಿಗೆ ಹಣ ಒದಗಿಸಲು ಬಳಸಲಾಗುವುದು.
(ಈ) ಡಿ.ಎಂ.ಐ.ಸಿ.ಡಿ.ಸಿ. ಆರಂಭದಲ್ಲಿ 10 ವರ್ಷಗಳ ಅವಧಿಗೆ ವಾರ್ಷಿಕ ಕನಿಷ್ಠ 5 ಕೋಟಿ ರೂಪಾಯಿ ಮತ್ತು ಗರಿಷ್ಠ 10 ಕೋಟಿ ರೂಪಾಯಿಗಳಿಗೆ ಒಳಪಟ್ಟು ಆಂತರಿಕ ಆರ್ಥಿಕ ಸಂಚಯದ ಶೇಕಡ 1ರ ವಾರ್ಷಿಕ ಶುಲ್ಕ ಪಾವತಿಯೊಂದಿಗೆ ಜ್ಞಾನ ಪಾಲುದಾರನಂತೆ ಕಾರ್ಯ ನಿರ್ವಹಿಸಲಿದೆ.
(ಉ) ಯೋಜನೆಯ ವಿವಿಧ ಹಂತಗಳಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ, ಒಟ್ಟಾರೆ ಅನುಮೋದಿತ ಹಣಕಾಸಿನ ಮಿತಿಗಳಲ್ಲಿ .ವಿವರವಾದ ವೆಚ್ಚದ ಅಂದಾಜುಗಳ ಪರಿಷ್ಕರಣೆ, ಯೋಜನೆಯ ಘಟಕಗಳ ಪ್ರಮಾಣದ ನಿರ್ದಿಷ್ಟ ಭಾಗದ ನಿರ್ಧರಣೆ,ಯೋಜನೆಯನ್ನು ಮುಂದೂಡುವ, ವ್ಯಾಪ್ತಿಯಲ್ಲಿ ಬದಲಾವಣೆ ತರುವುದು ಇತ್ಯಾದಿಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಎಸ್.ಪಿ.ವಿ ಮಂಡಳಿ ಹೊಂದಿರುತ್ತದೆ.
ಟ್ರಂಕ್ ಮೂಲಸೌಕರ್ಯ ಒಳಗೊಂಡ ವಸ್ತು ಪ್ರದರ್ಶನ ಸಹಿತ ಸಮ್ಮೇಳನ ಕೇಂದ್ರ ಯೋಜನೆಯ ಪ್ರಥಮ ಹಂತವನ್ನು ಅನುಷ್ಠಾನಗೊಳಿಸಿ 2019ರ ಡಿಸೆಂಬರ್ ನೊಳಗೆ ಕಾರ್ಯಾರಂಭಿಸಲಾಗುವುದು. ಇವುಗಳನ್ನು ಪಿಪಿಪಿಯೇತರ ಅಂಗವಾಗಿ ಅನುಷ್ಠಾನ ಮಾಡಲಾಗುವುದು. ಉಳಿದ ವಸ್ತು ಪ್ರದರ್ಶನ ಪ್ರದೇಶವನ್ನೊಳಗೊಂಡ ಎರಡನೇ ಹಂತದ ಯೋಜನೆಯು 2025ರ ವೇಳೆಗೆ ಅನುಷ್ಠಾನಗೊಳ್ಳಲಿದೆ. ಹೊಟೆಲ್, ರಿಟೈಲ್ ಪ್ರದೇಶ ಮತ್ತು ಕಚೇರಿಗಳನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು.
ಪ್ರಸ್ತಾವಿತ ಇಸಿಸಿ ಸೌಲಭ್ಯವು ಒಮ್ಮೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದರೆ, ವಾರ್ಷಿಕವಾಗಿ 100 ಕ್ಕಿಂತ ಹೆಚ್ಚು ಪ್ರಮುಖ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಪ್ರದರ್ಶನ ಕಾರ್ಯಕ್ರಮಗಳ ಬೇಡಿಕೆಯನ್ನು ಪೂರೈಸಲಿದೆ ಎಂದು ಅಂದಾಜಿಸಲಾಗಿದೆ.ವಾರ್ಷಿಕವಾಗಿ ಪ್ರದರ್ಶನ ಸೌಲಭ್ಯಕ್ಕೆ ಭೇಟಿ ನೀಡುವ ವ್ಯಕ್ತಿಗಳ ಸಂಖ್ಯೆ (ಪಾವತಿಸುವ ಸಂದರ್ಶಕರು) ಮೊದಲ ಹಂತದಲ್ಲಿ (2019-20) 10 ದಶಲಕ್ಷಕ್ಕಿಂತ ಹೆಚ್ಚು ಮತ್ತು ಎರಡನೇ ಹಂತ (2025) ಪೂರ್ಣಗೊಂಡ ನಂತರ 23 ದಶಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಅದೇ ರೀತಿ, ಎರಡನೇ ಹಂತದ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಸಮಾವೇಶ ಆಧಾರಿತ ಪ್ರತಿನಿಧಿಗಳ ಹಾಜರಿಯು ವಾರ್ಷಿಕ 1.5 ದಶಲಕ್ಷ ದಾಟಲಿದೆ ಎಂದೂ ಅಂದಾಜಿಸಲಾಗಿದೆ.
ಈ ಯೋಜನೆಯು 5 ಲಕ್ಷ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದು ಅಂದಾಜು ಮಾಡಲಾಗಿದೆ. ಉದ್ಯೋಗ ಸೃಷ್ಟಿಯು ಪ್ರಮುಖ ಇಸಿಸಿ ಸೌಲಭ್ಯಗಳಲ್ಲಿ ಮತ್ತು ಇಸಿಸಿ ಬೆಂಬಲಿತ ಅಂದರೆ ರಿಟೈಲ್ ನಂಥ ಭೂ ಬಳಕೆ, ಕಚೇರಿ ಮತ್ತು ಆತಿಥ್ಯ ಸೌಲಭ್ಯದಲ್ಲಿ ಸೃಷ್ಟಿಯಾಗಲಿದೆ.
ಹಿನ್ನೆಲೆ:
ಜಾಗತಿಕ ಖರೀದಿದಾರರೊಂದಿಗೆ ಸ್ಥಳೀಯ ಉತ್ಪಾದಕರ ಸಂಪರ್ಕ ಕಲ್ಪಿಸಲು ಮತ್ತು ವಾಣಿಜ್ಯ ಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳಲು ಸಮ್ಮೇಳನಗಳು ಹಾಗೂ ವಸ್ತು ಪ್ರದರ್ಶನಗಳು ಪ್ರಮುಖ ಕೊಂಡಿಯಾಗಿವೆ. ದೊಡ್ಡ ಪ್ರಮಾಣದಲ್ಲಿಜಾಗತಿಕ ವಸ್ತುಪ್ರದರ್ಶನ ಸಹಿತ ಸಮ್ಮೇಳನ ಆಯೋಜಿಸಿ ನಿರ್ವಹಿಸಲು, ಸ್ಥಳಾವಕಾಶ, ಯೋಜನಾ ಸೌಕರ್ಯ, ಸಾರಿಗೆಯ ಸಂಪರ್ಕ ಇತ್ಯಾದಿ. ಒಳಗೊಂಡ ಜಾಗತಿಕ ಮಟ್ಟದ ಸಮಗ್ರ ಸೌಕರ್ಯದ ಕೊರತೆಯನ್ನು ಭಾರತ ಎದುರಿಸುತ್ತಿದೆ. ಸೂಕ್ತ ಪೂರಕ ಸೌಕರ್ಯಗಳೊಂದಿಗೆ ದ್ವಾರಕಾದಲ್ಲಿ ಇಸಿಸಿಯ ಅಭಿವೃದ್ಧಿಯಿಂದ ಮತ್ತು ಅದು ಒಮ್ಮೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾದರೆ, ಅದು ವಸ್ತು ಪ್ರದರ್ಶನ ಮಾರುಕಟ್ಟೆಯಲ್ಲಿ ಹಾಂಕಾಂಗ್, ಸಿಂಗಾಪುರ ಮತ್ತು ಶಾಂಘೈ ಸಾಲಿಗೆ ದೆಹಲಿಯನ್ನೂ ತರಲಿದೆ.
*******