Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯ ನಜಫ್ ಗಢದಲ್ಲಿ ನೂರು ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಕೇಂದ್ರ ಸಂಪುಟ ಅನುಮೋದನೆ


ನವದೆಹಲಿಯ ನಜಫ್ ಗಢದ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರ(ಆರ್ ಎಚ್ ಟಿ ಸಿ)ಯಲ್ಲಿ ಅಂದಾಜು 95 ಕೋಟಿ ರೂಪಾಯಿ ವೆಚ್ಚದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಎರಡು ವರ್ಷಗಳಲ್ಲಿ ನಜಫ್ ಗಢದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆಯ ಉದ್ದೇಶ ಈ ಯೋಜನೆಯದಾಗಿದ್ದು, ಆ ಮೂಲಕ ಸುಮಾರು 73 ಗ್ರಾಮಗಳಲ್ಲಿ ನೆಲೆಸಿರುವ 13.65 ಲಕ್ಷ ಸ್ಥಳೀಯ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುವುದು. ಆಸ್ಪತ್ರೆಯಲ್ಲಿ ಮೆಡಿಸನ್, ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ವಿಭಾಗ ಮತ್ತು ಶಸ್ತ್ರ ಚಿಕಿತ್ಸೆ ಸೇರಿದಂತೆ ನಾಲ್ಕು ಪ್ರಮುಖ ಕ್ಲಿನಿಕಲ್ ಸೇವೆಗಳನ್ನು ಒದಗಿಸಲಾಗುವುದು, ಜತೆಗೆ 30ಕ್ಕೂ ಅಧಿಕ ವೈದ್ಯರು ಮತ್ತು 40 ದಾದಿಯರಲ್ಲದೆ ಹೆಚ್ಚುವರಿಯಾಗಿ 50 ಆರೋಗ್ಯ ರಕ್ಷಣಾ ಸಿಬ್ಬಂದಿ ಇರಲಿದ್ದು, ಅಲ್ಲಿ ರಕ್ತನಿಧಿ, ಡಯಾಗ್ನಸ್ಟಿಕ್ ಸೇವೆಗಳು ಮತ್ತು ಸಾಮಾನ್ಯ ಚಿಕಿತ್ಸೆಗೆ ಹೊರ ರೋಗಿಗಳ ವಿಭಾಗ – ಒಪಿಡಿ, ಶಸ್ತ್ರ ಚಿಕಿತ್ಸೆ, ದಂತಚಿಕಿತ್ಸೆ, ಇ ಎನ್ ಟಿ, ಕಣ್ಣಿನ ಪರೀಕ್ಷೆ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಸೇವೆಗಳನ್ನು ಒದಗಿಸಲಾಗುವುದು.

ಈ ಆಸ್ಪತ್ರೆ ಸ್ಥಳೀಯ ಜನಸಂಖ್ಯೆಯ ಬಹು ದಿನಗಳ ಆರೋಗ್ಯ ರಕ್ಷಣಾ ಚಿಕಿತ್ಸೆಗಳನ್ನು ಪಡೆಯುವ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಹಾಗೂ ಸಮಾಜದ ದುರ್ಬಲ ವರ್ಗದವರಿಗೆ ಉತ್ತಮ ಚಿಕಿತ್ಸೆಗಳನ್ನು ಒದಗಿಸುವ ಉದ್ದೇಶವಿದೆ. ಇದರಡಿ ಮಕ್ಕಳು ಮತ್ತು ತಾಯಂದಿರ ಸೇವೆಗಳು, ಗಾಯಾಳುಗಳ ರಕ್ಷಣೆ, ಪ್ರಾಥಮಿಕ ರೋಗ ಪತ್ತೆ ಮತ್ತು ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಚಿಕಿತ್ಸೆಗಳು ಕೂಡ ಲಭ್ಯವಾಗಲಿದೆ. ಆಸ್ಪತ್ರೆ ಎಲ್ಲ ವಿಭಾಗಗಳು ಮತ್ತು ಅಗತ್ಯ ಮಾನವ ಸಂಪನ್ಮೂಲದೊಂದಿಗೆ ಮೇ 2020ರ ವೇಳೆಗೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.