Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯ ರಾಷ್ಟ್ರೀಯ ಸೇನಾ ಕಾಲೇಜು ಮತ್ತು ಬಾಂಗ್ಲಾದೇಶದ ಢಾಕಾದ ರಾಷ್ಟ್ರೀಯ ಸೇನಾ ಕಾಲೇಜಿನ ನಡುವೆ ಬೋಧಕರ ವಿನಿಮಯ ಒಪ್ಪಂದಕ್ಕೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನವದೆಹಲಿಯ ರಾಷ್ಟ್ರೀಯ ಸೇನಾ ಕಾಲೇಜು ಮತ್ತು ಬಾಂಗ್ಲಾದೇಶದ ಢಾಕಾದ ರಾಷ್ಟ್ರೀಯ ಸೇನಾ ಕಾಲೇಜುಗಳ ನಡುವೆ ಅಂಕಿತ ಹಾಕಲಾಗಿರುವ ಬೋಧಕರ ವಿನಿಮಯ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಸಮ್ಮತಿ ನೀಡಿದೆ.

ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ವ್ಯೂಹಾತ್ಮಕ ಅಧ್ಯಯನ ಕ್ಷೇತ್ರಗಳಲ್ಲಿನ ಪರಸ್ಪರ ಸಹಕಾರ ಹೆಚ್ಚಳದ ಗುರಿಯೊಂದಿಗೆ ಎರಡು ರಾಷ್ಟ್ರೀಯ ಸೇನಾ ಕಾಲೇಜುಗಳ ನಡುವೆ ಸುಸ್ಥಿರ ವ್ಯವಸ್ಥೆ ಮತ್ತು ನಿರಂತರ ವಿನಿಮಯ ಕಾರ್ಯಕ್ರಮಗಳನ್ನು ಸಾಂಸ್ಥೀಕರಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.

ಎರಡೂ ರಾಷ್ಟ್ರಗಳ ನಡುವಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಆಪ್ತತೆಯ ನಡುವೆ, ಸಮಾನ ಸವಾಲುಗಳೂ ಇವೆ. ಭಯೋತ್ಪಾದನೆ ನಿಗ್ರಹದಂಥ ಸವಾಲು ಎದುರಿಸಲು ಜಂಟಿ ಕಾರ್ಯಾಚರಣೆಯ ಅಗತ್ಯವಿದೆ. ಹೀಗಾಗಿ, ಸಶಸ್ತ್ರಪಡೆಗಳ ನಡುವೆ ಉತ್ತಮ ಸಹಯೋಗ ಮತ್ತು ಸಹಕಾರದ ಅಗತ್ಯವಿದೆ. ತಮ್ಮ ಪ್ರಮುಖ ಸಂಸ್ಥೆಗಳ ಬೋಧಕ ಸದಸ್ಯರ ವಿನಿಮಯವು ಸಶಸ್ತ್ರಪಡೆಗಳ ಸಾಮರ್ಥ್ಯದ ನಡುವೆ ಸಮರೂಪತೆ ತರಲು ಮತ್ತು ಸಮಾನ ಸವಾಲುಗಳು ಮತ್ತು ಭೀತಿಯನ್ನು ಇನ್ನೂ ಉತ್ತಮವಾಗಿ ನಿರ್ವಹಿಸಲು ಮತ್ತು ಹತ್ತಿಕ್ಕಲು ಕೊಡುಗೆ ನೀಡುತ್ತದೆ.

ಈ ಒಪ್ಪಂದವು ವ್ಯೂಹಾತ್ಮಕ ಮತ್ತು ಕಾರ್ಯಾಚರಣೆ ಅಧ್ಯಯನಕ್ಕೆ ಸಂಬಂಧಿಸಿದ ಸೇನಾ ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರ ಹೆಚ್ಚಳಕ್ಕೆ ಚೌಕಟ್ಟು ಒದಗಿಸುತ್ತದೆ.

*****

AKT/VBA/SH