ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಬೆಯು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ಗಿನಿಯಾ ನಡುವಿನ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಉದ್ದೇಶ:
ಒಪ್ಪಂದದ ಉದ್ದೇಶ:
1. ಸಹಕಾರಿ ಸಾಂಸ್ಥಿಕ ಸಂಬಂಧವನ್ನು ಸ್ಥಾಪಿಸುವುದು
2. ಪರಸ್ಪರ ಲಾಭ, ಸಮಾನತೆ ಮತ್ತು ಪರಸ್ಪರ ಕೊಡುಕೊಳ್ಳುವಿಕೆ ಆಧಾರದ ಮೇಲೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ತಾಂತ್ರಿಕ ಸಹಕಾರವನ್ನು ಪ್ರೋತ್ಸಾಹಿಸುವುದು ಮತ್ತು ಉತ್ತೇಜಿಸುವುದು.
3. ಸಹಕಾರ ಕ್ಷೇತ್ರಗಳಲ್ಲಿ ಸೌರಶಕ್ತಿ, ಪವನ ಶಕ್ತಿ, ಜೈವಿಕ ಶಕ್ತಿ ಮತ್ತು ತ್ಯಾಜ್ಯ ಶಕ್ತಿ, ಕಿರು ಜಲ ಸಂಗ್ರಹಣೆ ಮತ್ತು ಸಾಮರ್ಥ್ಯ ನಿರ್ಮಾಣ ಸೇರಿವೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಸಹ ತಿಳುವಳಿಕೆ ಪತ್ರವು ನೆರವಾಗುತ್ತದೆ.