Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಗರಿಕ ವಿಮಾನಯಾನ ಭದ್ರತೆ ಸಹಕಾರದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನಾಗರಿಕ ವಿಮಾನಯಾನ ಭದ್ರತೆ ಸಹಕಾರದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಭಾರತೀಯ ವಿಮಾನಯಾನ ಸುರಕ್ಷತೆ ಪ್ರಾಧಿಕಾರಗಳಿಗೆ ಆಸ್ಟ್ರೇಲಿಯಾದ ತಮ್ಮ ಸಹವರ್ತಿಗಳೊಂದಿಗೆ ಪರಿಣತಿಯನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಭಾರತದಲ್ಲಿ ಒಟ್ಟಾರೆ ಸುರಕ್ಷತೆ ವಾತಾವರಣವನ್ನು ಹೆಚ್ಚಿಸಲು ಅವಕಾಶ ನೀಡುತ್ತದೆ.

ಎರಡು ರಾಷ್ಟ್ರಗಳ ನಡುವೆ ಈ ಕ್ಷೇತ್ರದಲ್ಲಿ ಸುರಕ್ಷತೆಯ ಸಹಕಾರದ ಹೆಚ್ಚಿನ ಉತ್ತೇಜನ ಹಾಗೂ ಅಂತಾರಾಷ್ಟ್ರೀಯ ಹೊಣೆಗಾರಿಕೆಯ ಅನುಸರಣೆಯನ್ನು ಈ ತಿಳಿವಳಿಕೆ ಒಪ್ಪಂದ ಒದಗಿಸುತ್ತದೆ.

****