ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಏಷ್ಯಾ ಪೆಸಿಫಿಕ್ ವ್ಯಾಪಾರ ಒಪ್ಪಂದ ಮತ್ತು ಸಂಬಂಧಿತ ತಿದ್ದುಪಡಿಗಳ ಅಡಿಯಲ್ಲಿ ನಾಲ್ಕನೇ ಸುತ್ತಿನ ಮಾತುಕತೆಯಡಿ ಆದ್ಯತೆಯ ಮಾರ್ಜಿನ್ ಆಧಾರದ ಮೇಲೆ, ಸುಂಕದ ರಿಯಾಯಿತಿಗಳಿಗೆ ತನ್ನ ಅನುಮೋದನೆ ನೀಡಿದೆ. ಏಷ್ಯಾ ಪೆಸಿಫಿಕ್ ವ್ಯಾಪಾರ ಒಪ್ಪಂದ ಅಥವಾ ಎಟಿಪಿಎ (ಈ ಮುನ್ನ ಬ್ಯಾಂಕಾಕ್ ಒಪ್ಪಂದ) ಏಷ್ಯಾ ಪೆಸಿಫಿಕ್ ವಲಯದ ಅಭಿವೃದ್ಧಿಶೀಲ ಸದಸ್ಯ ರಾಷ್ಟ್ರಗಳ ನಡುವೆ ದರ ರಿಯಾಯಿತಿ ಮೂಡಿಸಿ ವಾಣಿಜ್ಯ ವಿಸ್ತರಣೆ ಮಾಡುವ ಸಲುವಾಗಿ ವಿಶ್ವ ಸಂಸ್ಥೆಯ ಏಷ್ಯಾ ಮತ್ತು ಪೆಸಿಫಿಕ್ ಆರ್ಥಿಕ ಮತ್ತು ಸಾಮಾಜಿಕ ಆಯೋಗ(ಯು.ಎನ್.ಇ.ಎಸ್.ಸಿ.ಎ.ಪಿ.)ದಡಿ ಕೈಗೊಂಡ ಉಪಕ್ರಮವಾಗಿದೆ. ಎಪಿಟಿಎಯಲ್ಲಿ ಪ್ರಸ್ತುತ ಆರು ರಾಷ್ಟ್ರಗಳು ಸದಸ್ಯತ್ವಹೊಂದಿವೆ ಅಥವಾ ಪಾಲ್ಗೊಳ್ಳುವ ರಾಷ್ಟ್ರಗಳಾಗಿವೆ, ಅವುಗಳೆಂದರೆ ಬಾಂಗ್ಲಾದೇಶ, ಚೀಣ, ಭಾರತ, ಲಾವೋ ಪಿಡಿಆರ್, ಕೊರಿಯಾ ಗಣರಾಜ್ಯ ಮತ್ತು ಶ್ರೀಲಂಕಾ.
ಇದು ಒಂದು ಆದ್ಯತೆಯ ವಾಣಿಜ್ಯ ಒಪ್ಪಂದವಾಗಿದ್ದು, ಪದಾರ್ಥಗಳ ಕಣಜ ಹಾಗೂ ದರ ರಿಯಾಯಿತಿಗಳು ಕಾಲಕಾಲಕ್ಕೆ ನಡೆಯುವ ವಾಣಿಜ್ಯ ಸುತ್ತುಗಳ ಮಾತುಕತೆಯ ವೇಳೆ ಹೊರಹೊಮ್ಮುತ್ತವೆ. ಈವರೆಗೆ ಮೂರು ಸುತ್ತಿನ ವಾಣಿಜ್ಯ ಮಾತುಕತೆಗಳು ನಡೆದಿವೆ. ಮೂರನೇ ಸುತ್ತಿವರೆಗೆ ಭಾರತವು ಸರಾಸರಿ 23.9% ರಷ್ಟು ಆದ್ಯತೆಯ ಅಂಚು (ಮಾಪ್) ಮತ್ತು ಹೆಚ್ಚುವರಿ 48 ಸುಂಕದ ಸಾಲುಗಳಲ್ಲಿ 39.7% ರಷ್ಟು ಆದ್ಯತೆಯ ಅಂಚು (ಮಾಪ್) ಅನ್ನು 6 ಅಂಕಿಗಳ ಎಚ್ಎಸ್ ಮಟ್ಟದಲ್ಲಿ ತನ್ನ ಎಲ್.ಡಿ.ಸಿ. ಸದಸ್ಯರಿಗೆ 570 ಸುಂಕದ ಸಾಲುಗಳ ಮೇಲೆ ಸುಂಕದ ಆದ್ಯತೆಗಳ ಆಫರ್ ನೀಡಿದೆ.
ಮೂರನೇ ಸುತ್ತಿನಲ್ಲಿ ಎಲ್ಲ ಪಾಲ್ಗೊಳ್ಳುವ ರಾಷ್ಟ್ರಗಳಿಗೆ ಸಂಬಂಧಿಸಿದಂತೆ 4270 ಉತ್ಪನ್ನಗಳಿಗೆ ಶೇ.27.2 ಎಂ.ಓ.ಪಿ.ಯೊಂದಿಗೆ ರಿಯಾಯಿತಿ ವ್ಯಾಪ್ತಿಗೆ ಸೇರುತ್ತದೆ.
ಸಂಪುಟವು ಭಾರತದ ಶೇ.28.01 ಸುಂಕಕ್ಕೊಳಪಟ್ಟ ರಾಷ್ಟ್ರೀಯ ದರದ ಸಾಲಿನಲ್ಲಿ (ಅಂದರೆ 3142 ಮಾರ್ಗದಲ್ಲಿ ಎಚ್.ಎಸ್.2012ರಲ್ಲಿ 8 ಅಂಕಿಗಳಂತೆ) ಸರಾಸರಿ ಶೇ.33.45ಕ್ಕೆ ತನ್ನ ಅನುಮೋದನೆ ನೀಡಿದೆ. ಈ ಒಪ್ಪಂದದಡಿ ನೀಡಲಾಗುವ ರಿಯಾಯಿತಿಯನ್ನು ಇದು ಮತ್ತಷ್ಟು ಆಳಗೊಳಿಸಲಿದೆ. ಈ ಅನುಮೋದನೆಯು ಎಪಿ.ಟಿ.ಎ.ಯಲ್ಲಿ ಭಾಗವಹಿಸುವ 7ರಾಷ್ಟ್ರವಾಗಿ ಮಂಗೋಲಿಯಾವನ್ನು ಸೇರ್ಪಡೆ ಮಾಡಲು. ಪೀಠಿಕೆಗೆ ತಿದ್ದುಪಡಿ ಮಾಡಲೂ ಅವಕಾಶ ನೀಡುತ್ತದೆ. ಒಪ್ಪಂದದ ವಲಯವಾರು ಮೂಲದ ನಿಯಮಕ್ಕೆ ಇತರ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಲು ಸಹ ಅನುಮೋದನೆ ನೀಡಲಾಗಿದೆ.
ಎಪಿ.ಟಿ.ಎ.ಯ ಮಂತ್ರಿ ಪರಿಷತ್ತಿನ ನಾಲ್ಕನೇ ಅಧಿವೇಶನ, ಅತಿ ಶೀಘ್ರದಲ್ಲೇ ನಡೆಯಲು ನಿಗದಿಯಾಗಿದ್ದು, ಅದು ಈ ಮೇಲಿನ ನಿರ್ಣಯಗಳನ್ನು ಔಪಚಾರಿಕವಾಗಿ ಜಾರಿಗೊಳಿಸಲಿದೆ.