Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಳೆ ಮುಂಬಯಿಯಲ್ಲಿ ಎ.ಐ.ಐ.ಬಿ. ಮೂರನೆ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ವ್ಯಾಪಾರೋದ್ಯಮಿಗಳ ಜೊತೆ ಪ್ರಧಾನ ಮಂತ್ರಿ ಸಂವಾದ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಮುಂಬಯಿಗೆ ಭೇಟಿ ನೀಡಲಿದ್ದು, ಅವರು ಅಲ್ಲಿ ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕಿನ ಮೂರನೆ ವಾರ್ಷಿಕ ಸಭೆಯನ್ನು ಉದ್ಘಾಟಿಸಲಿದ್ದಾರೆ. ಎ.ಐ.ಐ.ಬಿ ಬ್ಯಾಂಕು ಬಹುಆಯಾಮದ ಅಭಿವೃದ್ಧಿ ಬ್ಯಾಂಕ್ ಆಗಿದ್ದು ಏಷ್ಯ ಮತ್ತು ಅದರಾಚೆಗಿನ ಸಾಮಾಜಿಕ ಮತ್ತು ಆರ್ಥಿಕ ಫಲಿತಾಂಶಗಳನ್ನು ಉತ್ತಮಪಡಿಸುವ ಉದ್ದೇಶವನ್ನು ಹೊಂದಿದೆ.

ಈ ವರ್ಷದ ಸಭೆಯ ಶೀರ್ಷಿಕೆ “ ಮೂಲಸೌಕರ್ಯಕ್ಕೆ ಹಣಕಾಸು ಕ್ರೋಢೀಕರಣ ; ಅನ್ವೇಷಣೆ ಮತ್ತು ಸಹಯೋಗ” ವಾಗಿದ್ದು ವಿವಿಧ ಸಂಘಟನೆಗಳ ನಾಯಕರು ಮತ್ತು ಸರಕಾರಿ ವಲಯದ ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡು ಸಹ್ಯ ಭವಿತವ್ಯ ನಿರ್ಮಿಸುವ ನಿಟ್ಟಿನಲ್ಲಿ ಉತ್ತಮ ಮೂಲಸೌಕರ್ಯ ಹೂಡಿಕೆ ಮಾಡುವ ಮೂಲಕ ಅಭಿವೃದ್ಧಿ ಸಾಧಿಸುವ ಕುರಿತಂತೆ ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ

ಈ ವರ್ಷ ಏಷ್ಯನ್ ಮೂಲಸೌಕರ್ಯ ವೇದಿಕೆಯ ಉದ್ಘಾಟನೆಯೂ ನಡೆಯಲಿದ್ದು, ಇದರಿಂದ ಮೂಲಸೌಕರ್ಯ ಒದಗಣೆದಾರರು ಪ್ರಾಯೋಗಿಕ ಮಾದರಿಯಲ್ಲಿ ಒಗ್ಗೂಡಿ , ಯೋಜನೆ ಆಧಾರಿತ ಚರ್ಚೆ ಮೂಲಕ ಕೆಲವು ನಿರ್ಣಾಯಕ ಮೂಲಸೌಕರ್ಯ ಒದಗಣೆಯಲ್ಲಿ , ನವೀನ ಹಣಕಾಸು ಆದ್ಯತೆಯ ಬಗ್ಗೆ ಚರ್ಚಿಸಲಿದ್ದಾರೆ.

ಬಳಿಕ ಪ್ರಧಾನ ಮಂತ್ರಿ ಅವರು ವ್ಯಾಪಾರೋದ್ಯಮದ ನಾಯಕರು ಮತ್ತು ವ್ಯಾಪಾರೋದ್ಯಮಗಳ ಮುಖ್ಯಸ್ಥರನ್ನು ಭೇಟಿಯಾಗಲಿದ್ದಾರೆ. ಆರ್ಥಿಕ ಬೆಳವಣಿಗೆ , ಮೂಲಸೌಕರ್ಯ ಅಭಿವೃದ್ದಿ, ಯೋಜನೆ ಉಪಕ್ರಮ, ಹೂಡಿಕೆ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿ ಹಾಗು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.